ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳ ಹೆಚ್ಚಳಕ್ಕೆ ಆಗ್ರಹಿಸಿ ಮತ್ತೆ ಬ್ಯಾಂಕ್ ಮುಷ್ಕರ

By Srinath
|
Google Oneindia Kannada News

Demanding wage revision Bank strike on Jan 20-21 United Forum of Bank Unions
ನವದೆಹಲಿ,ಜ.6: ಬ್ಯಾಂಕ್ ವಹಿವಾಟುದಾರರೇ ಮತ್ತೊಂದು ಸುತ್ತಿನ ಬ್ಯಾಂಕ್ ಮುಷ್ಕರಕ್ಕೆ ಸಿದ್ಧರಾಗಿ. ಬಹುಶಃ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವವರೆಗೂ ದೇಶಾದ್ಯಂತ ಬ್ಯಾಂಕ್ ಸಿಬ್ಬಂದಿ ಒಕ್ಕೂಟಗಳು ಮತ್ತೆ ಮತ್ತೆ ಮುಷ್ಕರ ಹೂಡುತ್ತಿರುತ್ತವೆ. ಕಳೆದ ಡಿಸೆಂಬರಿನಲ್ಲಷ್ಟೇ ಒಂದು ದಿನದ ಮಟ್ಟಿಗೆ ದೇಶವ್ಯಾಪಿ ಮುಷ್ಕರ ನಡೆಸಿದ್ದ ಸಿಬ್ಬಂದಿ ಇದೇ ಜನವರಿ ಅಂತ್ಯಕ್ಕೆ ಮತ್ತೊಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಈ ಸಾರಿಯೂ ಬ್ಯಾಂಕ್ ಮುಷ್ಕರಕ್ಕೆ ಅದೇ ಕಾರಣಗಳನ್ನು ನೀಡಲಾಗಿದೆ. 'ಬ್ಯಾಂಕುಗಳ ಸುಧಾರೀಕರಣ ಮುಂದೊಡ್ಡಿ ಬ್ಯಾಂಕ್ ಸಿಬ್ಬಂದಿಗೆ ತೊಂದರೆಯುಂಟುಮಾಡುವ ಹುನ್ನಾರ ನಡೆದಿದೆ. ಇದರಿಂದ ಗ್ರಾಹಕರಿಗೂ ತೊಂದರೆ. ಅಷ್ಟೇ ಅಲ್ಲ, ದೇಶದ ಸಂಪನ್ಮೂಲಕ್ಕೂ ಧಕ್ಕೆಯೊದಗಲಿದೆ' ಎಂದು ಬ್ಯಾಂಕ್ ಒಕ್ಕೂಟಗಳು ಅಲವತ್ತುಕೊಂಡಿವೆ.

ಖಾಸಗಿ ಮತ್ತು ಸರಕಾರಿ ಬ್ಯಾಂಕುಗಳೆರಡೂ ಇದೇ ಅಭಿಪ್ರಾಯ ವ್ಯಕ್ತಪಡಿಸಿವೆಯಾದರೂ ಈ ಬಾರಿ ಸರಕಾರಿ ಬ್ಯಾಂಕುಗಳು ಮಾತ್ರವೇ ಮುಷ್ಕರದಲ್ಲಿ ತೊಡಗಿವೆ. ಹಾಗಾಗಿ ಜನವರಿ 20 ಮತ್ತು 21ರಂದು (ಸೋಮವಾರ ಮತ್ತು ಮಂಗಳವಾರದಂದು) ಗ್ರಾಮೀಣ ಬ್ಯಾಂಕುಗಳು ಸೇರಿದಂತೆ ಸಾರ್ವಜನಿಕ ಬ್ಯಾಂಕುಗಳು ಮುಷ್ಕರ ಹೂಡಲಿವೆ.

ಬಾರಿ ಸಂಬಳ ಪರಿಷ್ಕರಣೆಯನ್ನು ಕೋರಿ :
ಗಮನಾರ್ಹವೆಂದರೆ ಈ ಬಾರಿ ಸಂಬಳ ಪರಿಷ್ಕರಣೆಯನ್ನು ಕೋರಿ ಸಿಬ್ಬಂದಿ ಮುಷ್ಕರ ನಡೆಸುತ್ತಿವೆ. ಶೇ. 32 ಸಂಬಳಗಳನ್ನು ಹೆಚ್ಚಿಸಿ ಎಂದು 14 ತಿಂಗಳುಗಳಿಂದ (November 2012ನಿಂದ) ಕೇಳುತ್ತಿದ್ದೇವೆ. ಆದರೆ ಯಾವುದೇ ಆಶಾದಾಯಕ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಮುಷ್ಕರ ನಡೆಸುತ್ತಿದ್ದೇವೆ ಎಂದು UFBU ರಾಷ್ಟ್ರೀಯ ಸಂಚಾಲಕ ಎಂವಿ ಮುರಳಿ ತಿಳಿಸಿದ್ದಾರೆ.

ಜತೆಗೆ, ಸಿಬ್ಬಂದಿಗೆ ಮಾರಕವಾಗುವ ನೀತಿಗಳ ಬಗ್ಗೆ ಗಮನಸೆಳೆದಿರುವ United Forum of Bank Unions ಬ್ಯಾಂಕ್ ವ್ಯವಸ್ಥೆ ಸುಧಾರಣಾ ನೀತಿಗಳನ್ನು ಕೈಬಿಡಿ ಎಂದು ಕೇಂದ್ರ ಸರಕಾರವನ್ನು ಕೋರಿದೆ. ಇತ್ತೀಚೆಗೆ ಸಭೆ ಸೇರಿದ್ದ ನಾನಾ ಒಕ್ಕೂಟಗಳು ಒಟ್ಟು ನಿರ್ಣಯಕ್ಕೆ ಬಂದಿದ್ದು ಮುಷ್ಕರ ಹೂಡುವ ವಿಷಯವನ್ನು UFBU ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಬ್ಯಾಂಕುಗಳ ಸ್ಥಾಪನೆಗೆ ಭಾರತ ಸರಕಾರ ಅವಕಾಶ ಕಲ್ಪಿಸುತ್ತಿದೆ. ಅಷ್ಟೇ ಅಲ್ಲ, ವಿದೇಶಿ ಬ್ಯಾಂಕುಗಳಿಂದ ಖಾಸಗಿ ಬ್ಯಾಂಕುಗಳ ಸ್ವಾಧೀನವೂ ನಡೆಯುತ್ತಿದೆ. ಇದು ಅಪಾಯಕಾರಿ ಎಂದು UFBU ಬಣ್ಣಿಸಿದೆ. ದೇಶದಲ್ಲಿ ಒಟ್ಟು 27 ಸಾರ್ವಜನಿಕ ಬ್ಯಾಂಕುಗಳಿವೆ. ಸುಮಾರು 50 ಬ್ಯಾಂಕ್ ಸಾವಿರ ಶಾಖೆಗಳಿವೆ. ಸುಮಾರು 8 ಲಕ್ಷ ಸಿಬ್ಬಂದಿಯಿದ್ದಾರೆ.

English summary
Bank strike on Jan 20-21 by United Forum of Bank Unions. Pressing various demands alongwith Demanding for wage revision, the United Forum of Bank Unions, representing employees of public and private sector banks, has decided to observe a two-day nationwide strike on Jan 20-21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X