ಇನ್ನು ಮುಂದೆ ವಿವಿಟಿಎಟಿ ಮತಯಂತ್ರ ಬಳಕೆ: ಚುನಾವಣಾ ಆಯೋಗ

Posted By:
Subscribe to Oneindia Kannada

ನವದೆಹಲಿ, ಮೇ 12: ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ವಿವಿಪಿಎಟಿ (ವೋಟರ್ ವೆರಿಫೆಯಬಲ್ ಪೇಪರ್ ಆಡಿಟ್ ಟ್ರಯಲ್ ಸಿಸ್ಟಂ) ಮಾದರಿಯ ಮತಯಂತ್ರಗಳನ್ನು ಬಳಸಲಾಗುತ್ತದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿ) ಹೇಳಿದೆ.

ಮತಯಂತ್ರಗಳನ್ನು ತಿರುಚುವ ಆರೋಪಗಳು ಹೇಳಿಬಂದ ಹಿನ್ನೆಲೆಯಲ್ಲಿ ಶುಕ್ರವಾರ (ಮೇ 12) ಚುನಾವಣಾ ಆಯೋಗವು ಭಾರತದಲ್ಲಿ ಗುರುತಿಸಲ್ಪಟ್ಟ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಮುಖಂಡರ ಸಭೆ ನಡೆಸಿತು.

vvpat-enabled-evms-all-future-polls-hackathon-on-used-machines-ec

ಸಭೆಯಲ್ಲಿ ಮಾತನಾಡಿದ ಇಸಿ ಮುಖ್ಯಸ್ಥ ನಜೀಂ ಜೈದಿ, ಮತಯಂತ್ರಗಳ ತಿರುಚುವಿಕೆ ಕಪೋಲ ಕಲ್ಪಿತವೆಂದೂ, ಈ ಬಗ್ಗೆ ಕೇಳಿಬಂದಿರುವ ಆರೋಪಗಳು ನಿರಾಧಾರ ಎಂದೂ ಹೇಳಿತು.

ಅಲ್ಲದೆ, ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿಯ ಶಾಸಕರೊಬ್ಬರು ಮತಯಂತ್ರದ ಲೋಪ ದೋಷಗಳ ಪ್ರಾತ್ಯಕ್ಷಿಕೆಯನ್ನು ದೆಹಲಿ ವಿಧಾನಸಭೆಯಲ್ಲಿ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿಗಳು, ಈವರೆಗಿನ ಚುನಾವಣೆಗಳಲ್ಲಿ ಬಳಸಲಾದ ಮತಯಂತ್ರಗಳನ್ನು ಟ್ಯಾಂಪರ್ ಮಾಡಿ ತೋರಿಸುವಂತೆ ಸವಾಲು ಹಾಕಿದರು.

ಇಂಥ ಆರೋಪಗಳಿಂದ ಮುಕ್ತವಾಗಲು ಹಾಗೂ ಮತಯಂತ್ರಗಳ ಬಗೆಗಿನ ಗೊಂದಲವನ್ನು ನಿವಾರಣೆ ಮಾಡಲು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ವಿವಿಪಿಎಟಿ ವ್ಯವಸ್ಥೆಯುಳ್ಳ ಮತಯಂತ್ರಗಳನ್ನು ಉಪಯೋಗಿಸಲಾಗುವುದು ಎಂದು ಇಸಿ ಮುಖ್ಯಸ್ಥರು ತಿಳಿಸಿದರು.

ವಿವಿಪಿಎಟಿ ವ್ಯವಸ್ಥೆಯಿಂದ ಮತದಾರನು ತಾನು ಹಾಕಿದ ಮತವು ತನ್ನ ಆಯ್ಕೆಯ ಅಭ್ಯರ್ಥಿಗೆ ಸಂದಾಯವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Election Commission (EC) on Friday said that all future elections would be held on VVPAT-enabled Electronic Voting Machines (EVMs).
Please Wait while comments are loading...