ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನದ ಮಸಿ ಬದಲಿಗೆ ಮಾರ್ಕರ್ ಪೆನ್ ಬಳಕೆ!

By Mahesh
|
Google Oneindia Kannada News

ನವದೆಹಲಿ, ನ.22: ಮತದಾನದ ವೇಳೆ ಬಳಸಲಾಗುವ ಮಸಿ ಬದಲಿಗೆ ಮಾರ್ಕರ್ ಪೆನ್ ಗಳನ್ನು ಬಳಸಲು ಕೇಂದ್ರ ಚುನಾವಣಾ ಆಯೋಗ ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ಪೂರ್ವ ತಯಾರಿ, ಪ್ರಯೋಗ ಹಾಗೂ ಪರೀಕ್ಷೆ ಮೈಸೂರಿನ ಕೇಂದ್ರದಲ್ಲಿ ಜಾರಿಯಲ್ಲಿದೆ.

ಮೈಸೂರಿನ ಲ್ಯಾಕ್ಸ್ ಮತ್ತು ಪೈಂಟ್ ವರ್ಕ್ಸ್ ಲಿಮಿಟೆಡ್ ಸಂಸ್ಥೆಯಿಂದ ತಯಾರಾಗುವ ಭಾರತ ಮಾತ್ರವಲ್ಲದೆ ವಿದೇಶಗಳಿಗೂ ರಫ್ತಾಗುತ್ತದೆ. ಈಗ ಬಳಕೆಯಲ್ಲಿರುವ ಇಂಕ್ ಹಾಗೂ ಬ್ರಷ್ ಗಳ ಬದಲಿಗೆ ಮಾರ್ಕರ್ ಪೆನ್ ಗಳನ್ನು ಬಳಸಲು ಆಯೋಗ ಬಯಸಿದ್ದು ಇದರ ಪ್ರಯೋಗ ಹಾಗೂ ಪರೀಕ್ಷೆ ಜಾರಿಯಲ್ಲಿದೆ ಎಂದು ಮೈಸೂರು ಪೈಂಟ್ಸ್ ಸಂಸ್ಥೆ ಹೇಳಿದೆ. [ಎನ್ನಾರೈಗಳಿಗೆ ಮತದಾನದ ಹಕ್ಕು, ಮೋದಿ ಸರ್ಕಾರದ ವಿಕ್ರಮ]

Voter's ink: Marker pen likely to replace bottle

1962ರಲ್ಲಿ ಮೊದಲ ಬಾರಿಗೆ ದೇಶದ ಮತದಾನ ಪ್ರಕ್ರಿಯೆಯಲ್ಲಿ ಮೈಸೂರಿನಲ್ಲಿ ಮಾಡಿದ ಮಸಿಯನ್ನು ಬಳಸಲಾಯಿತು. ಅಂದಿನಿಂದ ಇಂದಿನ ವರೆಗೂ ಮಸಿ ಬಳಕೆ ಜಾರಿಯಲ್ಲಿದೆ. ಈಗ ಇತ್ತೀಚೆಗೆ ಸಾರ್ವಜನಿಕರು ಅದರಲ್ಲೂ ಯುವ ಸಮುದಾಯ ನೀಡಿದ ಅಭಿಪ್ರಾಯ ಸಂಗ್ರಹಿಸಿದ ಆಯೋಗ ಈ ಹೊಸ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ.

ಅಫ್ಘಾನಿಸ್ತಾನದಲ್ಲಿ ಮೊದಲು ಬಳಕೆ: ಮೈಸೂರಿನಲ್ಲಿ ತಯಾರಾದ ಮಾರ್ಕರ್ ಪೆನ್ ಗಳನ್ನು ಮೊದಲ ಬಾರಿಗೆ ಇತ್ತೀಚೆಗೆ ನಡೆದ ಅಫ್ಘಾನಿಸ್ತಾನದ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಬಳಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೃಹತ್ ಪ್ರಮಾಣದಲ್ಲಿ ಪೆನ್ ತಯಾರಿಕೆ ಮಾಡಬೇಕಾಗಿರುವುದರಿಂದ ಮಾರ್ಕರ್ ಪೆನ್ ಬಳಕೆ ಬಗ್ಗೆ ತಕ್ಷಣಕ್ಕೆ ನಿರ್ಧಾರ ಸಾಧ್ಯವಿಲ್ಲ. ಇನ್ನಷ್ಟು ಪರೀಕ್ಷೆಗಳು ನಡೆಯಬೇಕಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
Trendy marker pens could soon replace bottle and brush at polling booths for marking index fingers of voters with indelible ink as a proof that they have voted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X