ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೋನ್ ನೋಂದಣಿ ಮಾಡಿಸಿ, ಇಲ್ಲದಿದ್ದರೆ ಶಿಕ್ಷೆ ಖಚಿತ

|
Google Oneindia Kannada News

ನವದೆಹಲಿ, ಜನವರಿ 15: ಅಮೆರಿಕದ ಸೇನೆಯ ಡ್ರೋನ್ ದಾಳಿಗೆ ಇರಾನ್ ಸೇನಾ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆಯಾದ ಬಳಿಕ ಎಚ್ಚೆತ್ತುಕೊಂಡಿರುವ ವಿಮಾನಯಾನ ಸಚಿವಾಲಯ ಡ್ರೋನ್‌ಗಳ ನೋಂದಣಿಗೆ ಮುಂದಾಗಿದೆ.

ಎಲ್ಲಾ ಡ್ರೋನ್‌ಗಳು ಮತ್ತು ಅವುಗಳನ್ನು ಕಾರ್ಯನಿರ್ವಹಿಸುವವರು ಸ್ವಯಂ ನೋಂದಣಿ ಮಾಡಿಕೊಳ್ಳಲು ಜ.31ರವರೆಗೆ ಅವಕಾಶ ನೀಡುವ ಯೋಜನೆಯನ್ನು ವಿಮಾನಯಾನ ಸಚಿವಾಲಯ ಪ್ರಕಟಿಸಿದೆ.

ಬೆಂಗಳೂರಿನಲ್ಲಿ ಡ್ರೋನ್, ಬಲೂನ್ ಹಾರಾಟಕ್ಕೆ ನಿರ್ಬಂಧ: ಯಾಕೆ ಗೊತ್ತಾ?ಬೆಂಗಳೂರಿನಲ್ಲಿ ಡ್ರೋನ್, ಬಲೂನ್ ಹಾರಾಟಕ್ಕೆ ನಿರ್ಬಂಧ: ಯಾಕೆ ಗೊತ್ತಾ?

ಒಂದು ವೇಳೆ ಡ್ರೋನ್ ವಿವರಗಳನ್ನು ನೋಂದಣಿ ಮಾಡಿಕೊಳ್ಳುವಲ್ಲಿ ವಿಫಲರಾದರೆ ಅವರು ಭಾರತೀಯ ದಂಡ ಸಂಹಿತೆ ಮತ್ತು ವಿಮಾನಯಾನ ಕಾಯ್ದೆಗಳ ಅನ್ವಯ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ.

'ನಾಗರಿಕ ವಿಮಾನಯಾನ ಅಗತ್ಯ ‌ಷರತ್ತುಗಳನ್ನು (ಸಿಎಆರ್) ಪಾಲಿಸದ ಅಂತಹ ಡ್ರೋನ್ ಮತ್ತು ಡ್ರೋನ್ ಆಪರೇಟರ್‌ಗಳ ಅಸ್ತಿತ್ವವು ಸರ್ಕಾರದ ಗಮನಕ್ಕೆ ಬಂದಿದೆ' ಎಂದು ಸಚಿವಾಲಯ ಹೇಳಿದೆ.

ಜ.31ರೊಳಗೆ ನೋಂದಣಿ ಮಾಡಿ

ಜ.31ರೊಳಗೆ ನೋಂದಣಿ ಮಾಡಿ

'ನಾಗರಿಕ ಡ್ರೋನ್‌ಗಳು ಮತ್ತು ಡ್ರೋನ್ ಆಪರೇಟರ್‌ಗಳನ್ನು ಗುರುತಿಸುವ ಸಲುವಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ಅಂತಹ ಡ್ರೋನ್ ಮತ್ತು ಡ್ರೋನ್ ಆಪರೇಟರ್‌ಗಳಿಗೆ ತಮ್ಮ ಮಾಹಿತಿಗಳನ್ನು ಬಹಿರಂಗಪಡಿಸಲು ಒಂದು ಕಾಲಾವಕಾಶ ನೀಡಲಾಗುತ್ತಿದೆ. ಡ್ರೋನ್‌ಗಳನ್ನು ಹೊಂದಿರುವ ಪ್ರತಿಯೊಬ್ಬರೂ 2020ರ ಜನವರಿ 31ರ ಒಳಗೆ ಆನ್‌ಲೈನ್ ನೋಂದಣಿ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು' ಎಂದು ಸೂಚಿಸಲಾಗಿದೆ.

50,000ಕ್ಕೂ ಹೆಚ್ಚು ಅಕ್ರಮ ಡ್ರೋನ್‌ಗಳು

50,000ಕ್ಕೂ ಹೆಚ್ಚು ಅಕ್ರಮ ಡ್ರೋನ್‌ಗಳು

ಭಾರತದಲ್ಲಿ 50,000-60,000 ಅಕ್ರಮ ಡ್ರೋನ್‌ಗಳು ಇರಬಹುದು ಎಂದು ಕಳೆದ ವರ್ಷದ ಅಕ್ಟೋಬರ್ 22ರಂದು ಡ್ರೋನ್‌ಗಳ ಕುರಿತಾದ ಎಫ್‌ಐಸಿಸಿ ಸಮಿತಿ ಉಪಾಧ್ಯಕ್ಷ ಅಂಕಿತ್ ಮೆಹ್ತಾ ಹೇಳಿದ್ದರು.

ಪಂಜಾಬಿನಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನಿ ಡ್ರೋನ್: ಎಲ್ಲೆಲ್ಲೂ ಆತಂಕಪಂಜಾಬಿನಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನಿ ಡ್ರೋನ್: ಎಲ್ಲೆಲ್ಲೂ ಆತಂಕ

ಇರಾನ್‌ನ ಉನ್ನತ ಸೇನೆಯಾದ ಅಲ್-ಖುದ್ಸ್ ದಳದ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಸೋಲೆಮನಿ (62) ಅವರನ್ನು ಅಮೆರಿಕದ ಸೇನೆಯು ಇರಾಕ್‌ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ಕ್ಷಿಪಣಿ ದಾಳಿ ನಡೆಸಿ ಹತ್ಯೆ ಮಾಡಿತ್ತು.

ಗ್ಯಾಟ್‌ವಿಕ್‌ನಲ್ಲಿ ಭಯ ಮೂಡಿಸಿದ್ದ ಡ್ರೋನ್

ಗ್ಯಾಟ್‌ವಿಕ್‌ನಲ್ಲಿ ಭಯ ಮೂಡಿಸಿದ್ದ ಡ್ರೋನ್

ಈ ದಾಳಿಯ ಘಟನೆ, ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂರಾರು ಡ್ರೋನ್‌ಗಳನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 2018ರ ಡಿಸೆಂಬರ್‌ನಲ್ಲಿ ಗ್ಯಾಟ್‌ವಿಕ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಘಟನೆ ಕೂಡ ನಮ್ಮ ಮನದಲ್ಲಿತ್ತು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೀಥ್ರೂ ವಿಮಾನ ನಿಲ್ದಾಣದ ಬಳಿಕ ಬ್ರಿಟನ್‌ನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದ ಎನಿಸಿರುವ ಗ್ಯಾಟ್‌ವಿಕ್‌ ಅನ್ನು 2018ರ ಡಿ. 19-21ರ ವರೆಗೆ ಮುಚ್ಚಲಾಗಿತ್ತು. ವಿಮಾನ ನಿಲ್ದಾಣದ ಗಡಿಯ ಪರಿಧಿಯೊಳಗೆ ಅನೇಕ ಡ್ರೋನ್‌ಗಳು ಹಾರಾಟ ನಡೆಸಿದ್ದವು. ಹೀಗಾಗಿ ಈ ಮೂರು ದಿನಗಳವರೆಗೆ ಯಾವುದೇ ಅಪಾಯಕ್ಕೆ ಆಸ್ಪದ ನೀಡದಂತೆ ತಡೆಯಲು ಮುನ್ನೆಚ್ಚರಿಕೆಯಿಂದ ಸುಮಾರು ಒಂದು ಸಾವಿರ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು ಹಾಗೂ ಬೇರೆಡೆಗೆ ತಿರುಗಿಸಲಾಗಿತ್ತು.

ಅನುಮತಿಗಳನ್ನು ಪಡೆಯಬೇಕು

ಅನುಮತಿಗಳನ್ನು ಪಡೆಯಬೇಕು

2018ರ ಆಗಸ್ಟ್ 27ರಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಭಾರತದ ವಾಯು ಪ್ರದೇಶದಲ್ಲಿ ನಾಗರಿಕ ಡ್ರೋನ್‌ಗಳ ಬಳಕೆಯನ್ನು ನಿಯಂತ್ರಿಸಲು ಸಿಎಆರ್ ಹೊರಡಿಸಿತ್ತು.

ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋಣ್ ದಾಳಿಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋಣ್ ದಾಳಿ

ಈ ನಿಯಂತ್ರಣಗಳ ಅಡಿಯಲ್ಲಿ ಡ್ರೋನ್ ಆಪರೇಟರ್‌ಗಳು ವಿಶಿಷ್ಟ ಗುರುತಿನ ಸಂಖ್ಯೆ (ಯುಎಎನ್), ಮಾನವರಹಿತ ವಿಮಾನ ಕಾರ್ಯನಿರ್ವಹಣೆ ಪರವಾನಗಿ (ಯುಎಒಪಿ) ಮತ್ತು ಇತರೆ ಅನುಮತಿಗಳನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಅಂತರ್ಜಾಲದಲ್ಲಿ ಪ್ರಕ್ರಿಯೆ

ಅಂತರ್ಜಾಲದಲ್ಲಿ ಪ್ರಕ್ರಿಯೆ

ಭಾರತದಲ್ಲಿ ಡ್ರೋನ್‌ಗಳನ್ನು ಬಳಸುವ ಮುನ್ನ ಡ್ರೋನ್ ಬಳಕೆದಾರರು ಸೂಕ್ತ ಪರವಾನಗಿ ಮತ್ತು ಅನುಮತಿಗಳನ್ನು ಪಡೆದುಕೊಳ್ಳಲು ಡಿಜಿಸಿಎಯ ಸಾಫ್ಟ್‌ವೇರ್ ಕಾರ್ಯಕ್ರಮ ಡಿಜಿಸ್ಕೈ ಅನ್ನು ಬಳಸಿಕೊಳ್ಳಬೇಕು. ಇಲ್ಲದಿದ್ದರೆ 'ಅನುಮತಿ ಇಲ್ಲ-ಹಾರಾಟವೂ ಇಲ್ಲ' ನಿಯಂತ್ರಣಕ್ಕೆ ಒಳಪಡಬೇಕಾಗುತ್ತದೆ.

'ಡ್ರೋನ್ ಹೊಂದಿರುವುದಕ್ಕೆ ಸ್ವಯಂ ಮಾಹಿತಿ ಬಹಿರಂಗದ ಸಲ್ಲಿಕೆ ಯಶಸ್ವಿಯಾದ ಬಳಿಕ ಡ್ರೋನ್ ಸ್ವೀಕೃತಿ ಸಂಖ್ಯೆ (ಡಿಎಎನ್) ಮತ್ತು ಮಾಲೀಕತ್ವದ ಸ್ವೀಕೃತಿ ಸಂಖ್ಯೆಗಳನ್ನು (ಒಎಎನ್) ಅಂತರ್ಜಾಲದಲ್ಲಿ ನೀಡಲಾಗುತ್ತದೆ. ಇದರಿಂದ ಭಾರತದಲ್ಲಿ ಕಾರ್ಯನಿರ್ವಹಿಸುವ ಡ್ರೋನ್‌ಗಳನ್ನು ಊರ್ಜಿತಗೊಳಿಸಲು ಸಾಧ್ಯವಾಗುತ್ತದೆ' ಎಂದು ಸೋಮವಾರ ಹೊರಡಿಸಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ನೋಂದಣಿ ಇಲ್ಲದಿದ್ದರೆ ಶಿಕ್ಷೆ

ನೋಂದಣಿ ಇಲ್ಲದಿದ್ದರೆ ಶಿಕ್ಷೆ

ಆದರೆ ಡಿಎಎನ್ ಮತ್ತು ಒಎಎನ್ ಸಂಖ್ಯೆಗಳನ್ನು ಹೊಂದುವುದು ಡಿಜಿಸಿಎದ ಡ್ರೋನ್ ನಿಯಮಗಳನ್ನು ಪೂರ್ಣಗೊಳಿಸಿದಂತೆ ಅರ್ಥವಲ್ಲ. ಈ ಸಂಖ್ಯೆ ಹೊಂದಿದ ಮಾತ್ರಕ್ಕೆ ಭಾರತದಲ್ಲಿ ಡ್ರೋನ್ ಹಾರಿಸಲು ಅವಕಾಶ ದೊರಕಿದೆ ಎಂದಲ್ಲ ಎಂಬುದನ್ನು ಸಚಿವಾಲಯ ಸ್ಪಷ್ಟಪಡಿಸಿದೆ.

ಸೂಕ್ತವಾದ ಡಿಎಎನ್ ಅಥವಾ ಒಎಎನ್ ಇಲ್ಲದೆ ಭಾರತದಲ್ಲಿ ಡ್ರೋನ್‌ಗಳನ್ನು ಹೊಂದುವುದು ವಿವಿಧ ಕಾನೂನುಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಪ್ರತಿ ಪ್ರಕರಣದಲ್ಲಿಯೂ ಹೆಚ್ಚಿನ ಮಾಹಿತಿಗಳು ಅಗತ್ಯವಿದ್ದರೆ ನಿಯಮಾವಳಿಗಳ ಅಡಿಯಲ್ಲಿ ಅವುಗಳನ್ನು ಕೇಳಲಾಗುತ್ತದೆ.

ಡ್ರೋನ್ ಸಂಖ್ಯೆ ತಿಳಿಯಲು ಸಹಾಯ

ಡ್ರೋನ್ ಸಂಖ್ಯೆ ತಿಳಿಯಲು ಸಹಾಯ

'ನಾಗರಿಕ ವಿಮಾನಯಾನ ಸಚಿವಾಲಯ ತೆಗೆದುಕೊಂಡಿರುವ ಇಂತಹ ನಿರ್ಧಾರವು ಭಾರತದಲ್ಲಿ ಎಷ್ಟು ಸಂಖ್ಯೆಯಲ್ಲಿ ಡ್ರೋನ್‌ಗಳಿವೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ನೆರವಾಗಲಿದೆ' ಎಂದು ಭಾರತೀಯ ಡ್ರೋನ್ ಸಂಸ್ಥೆ (ಡಿಎಫ್ಐ) ಸಹ ನಿರ್ದೇಶಕ ಸ್ಮಿತ್ ಶಾ ಹೇಳಿದ್ದಾರೆ.

ಅಸ್ಟೇರಿಯಾ ಏರೋಸ್ಪೇಸ್, ಕ್ಯುಡಿಚ್ ಇನ್ನೋವೇಷನ್ ಲ್ಯಾಬ್ಸ್, ಆಟೋ ಮೈಕ್ರೋ ಯುಎಎಸ್, ಆರವ್ ಅನ್ ಮ್ಯಾನಡ್ ಸಿಸ್ಟಮ್ ಮತ್ತು ಇನ್‌ಡ್ರೋನ್ಸ್ ಮುಂತಾದ ಡ್ರೋನ್ ತಯಾರಕ ಕಂಪೆನಿಗಳೊಂದಿಗೆ ಡಿಎಫ್ಐ ಸಹಭಾಗಿತ್ವ ಹೊಂದಿದೆ.

English summary
The Aviation Ministry has issued a notice to giving deadline with a scheme for registration of all drones and their operators before January 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X