ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಬಿ ಸ್ಪೋಟಕ ವರದಿ: ಬಂದ್ ಹಿಂಸಾಚಾರದ ಹಿಂದೆ ಭಾರೀ 'ಷಡ್ಯಂತ್ರ'

|
Google Oneindia Kannada News

ಏಪ್ರಿಲ್ ಎರಡರ ಭಾರತ್ ಬಂದ್ ವೇಳೆ ನಡೆದ ವ್ಯಾಪಕ ಹಿಂಸಾಚಾರ 'ಪೂರ್ವ ಯೋಜಿತ' ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ. ಆ ಮೂಲಕ, ಬಂದ್ ವೇಳೆ ನಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆದ ಹಿಂಸಾಚಾರದ ಹಿಂದೆ ಷಡ್ಯಂತ್ರ ಅಡಗಿದೆ ಎನ್ನುವ ಬಿಜೆಪಿ ಆರೋಪ ನಿಜವಾದಂತಾಗಿದೆ.

SC, ST ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಭಾರತ್ ಬಂದ್ ಗೆ ಕರೆನೀಡಿದ್ದವು. ಆ ವೇಳೆ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆದು ಒಂಬತ್ತು ಜನ ಸಾವನ್ನಪ್ಪಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟಾಗಿತ್ತು.

ಭಾರತ್ ಬಂದ್ ವೇಳೆ 9 ಮಂದಿ ಸಾವು: ದಿನದ 10 ಬೆಳವಣಿಗೆಭಾರತ್ ಬಂದ್ ವೇಳೆ 9 ಮಂದಿ ಸಾವು: ದಿನದ 10 ಬೆಳವಣಿಗೆ

ಮಧ್ಯಪ್ರದೇಶವೊಂದರಲ್ಲೇ ಎಂಟು ಜನ ಸಾವನ್ನಪ್ಪಿದ್ದರು. ಘಟನೆಯ ಕುರಿತು ಮಧ್ಯಪ್ರದೇಶ ಗುಪ್ತಚರ ಇಲಾಖೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆ ವರದಿ ನೀಡಿದ್ದು, ಹಿಂಸಾಚಾರ ನಡೆಸಲು ವಿವಿಧ ಸಂಘಟನೆಗಳು ಮತ್ತು ಹಲವಾರು ಮುಖಂಡರು ವೈಯಕ್ತಿಕವಾಗಿ ಹಣದ ಹೊಳೆಯನ್ನು ಹರಿಸಿದ್ದಾರೆಂದು ವರದಿಯಲ್ಲಿ ಉಲ್ಲೇಖವಾಗಿದೆ.

ಭಾರತ್ ಬಂದ್ ವೇಳೆ ಪ್ರಮುಖವಾಗಿ ದೇಶದ ಉತ್ತರ ಭಾಗದಲ್ಲಿ ಹಿಂಸಾಚಾರ ನಡೆದಿತ್ತು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇ ಹೆಚ್ಚಾಗಿ ಟಾರ್ಗೆಟ್ ಆಗಿದ್ದವು. ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಬಿಹಾರ, ದೆಹಲಿ ಮತ್ತು ಪಂಜಾಬ್ ನಲ್ಲಿ ಹಿಂಸೆ ಭುಗಿಲೆದ್ದಿತ್ತು.

ದಲಿತರ ಆಕ್ರೋಶದ ಬೆಂಕಿ ತೆರೆದಿಟ್ಟ ಭಾರತ್ ಬಂದ್ ಚಿತ್ರಗಳುದಲಿತರ ಆಕ್ರೋಶದ ಬೆಂಕಿ ತೆರೆದಿಟ್ಟ ಭಾರತ್ ಬಂದ್ ಚಿತ್ರಗಳು

ವರದಿಯಲ್ಲಿ ಉಲ್ಲೇಖವಾದ ಇನ್ನೊಂದು ಅಂಶವೇನೆಂದರೆ, ಸರಕಾರೀ ಅಧಿಕಾರಿಗಳೇ ಹಿಂಸೆಗೆ ಕುಮ್ಮುಕ್ಕು ನೀಡಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಗರ ಹಿಂಸಾಚಾರದ ಕೇಂದ್ರಬಿಂದುವಾಗಿತ್ತು ಎಂದು ರಾಜ್ಯದ ಐಜಿಪಿ ಮಕರಂದ್ ದಿಯೋಸ್ಕರ್ ಹೇಳಿದ್ದಾರೆ. ವರದಿಯಲ್ಲಿನ ಕೆಲವೊಂದು ಅಂಶಗಳು, ಮುಂದೆ ಓದಿ..

ಎರಡೂ ಹಿಂಸಾಚಾರಕ್ಕೂ ಸಾಮ್ಯತೆಗಳಿವೆ

ಎರಡೂ ಹಿಂಸಾಚಾರಕ್ಕೂ ಸಾಮ್ಯತೆಗಳಿವೆ

ಭಾರತ್ ಬಂದ್ ವೇಳೆ, ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು. ಕಳೆದ ಜೂನ್ ನಲ್ಲಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ 250 ಕಿ,ಮೀ ದೂರದ ಮಂಡಸೌರ್ - ರುತ್ಲಾಂ ನಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ಆರು ರೈತರು ಮೃತಪಟ್ಟಿದ್ದರು. ಪೊಲೀಸ್ ವರದಿಯ ಪ್ರಕಾರ ಬಂದ್ ವೇಳೆ ನಡೆದ ಘಟನೆಗೂ, ರೈತರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರಕ್ಕೆ ಸಾಮ್ಯತೆಗಳಿವೆ.

ಲಾಠಿ, ಬ್ಯಾನರ್, ಪೋಸ್ಟರ್ ಅನ್ನು ಪೂರೈಸಲಾಗಿತ್ತು

ಲಾಠಿ, ಬ್ಯಾನರ್, ಪೋಸ್ಟರ್ ಅನ್ನು ಪೂರೈಸಲಾಗಿತ್ತು

ಐಬಿ ವರದಿಯ ಪ್ರಕಾರ 35 ವಿವಿಧ ಸಂಘಟನೆಗಳು ಮತ್ತು ಮುಖಂಡರಿಗೆ ಹಣದ ಜೊತೆ ಲಾಠಿ, ಬ್ಯಾನರ್, ಪೋಸ್ಟರ್ ಅನ್ನು ಪೂರೈಸಲಾಗಿತ್ತು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗಳು ಇದ್ದಕ್ಕಿದ್ದಂತೇ ಹಿಂಸಾಚಾರಕ್ಕೆ ತಿರುಗಿತ್ತು. ಅಂಬೇಡ್ಕರ್ ಪ್ರತಿಮೆಗಳನ್ನು ಭಗ್ನಗೊಳಿಸುವ ಹಲವಾರು ಪ್ರಯತ್ನಗಳನ್ನು ವಿಫಲಗೊಳಿಸಲು ಸ್ಥಳೀಯರು, ಪೊಲೀಸರಿಗೆ ಸಹಕರಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಹಿಂಸಾಚಾರ ಪೂರ್ವಯೋಜಿತ ಎಂದ ಗುಪ್ತಚರ ವರದಿ

ಹಿಂಸಾಚಾರ ಪೂರ್ವಯೋಜಿತ ಎಂದ ಗುಪ್ತಚರ ವರದಿ

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸರಕಾರೀ ಅಧಿಕಾರಿಗಳನ್ನು ಸದ್ಯಕ್ಕೆ ಕೆಲಸದಿಂದ ಸಸ್ಪೆಂಡ್ ಮಾಡಲಾಗಿದ್ದು, ಹಿಂಸಾಚಾರದಲ್ಲಿ ಭಾಗಿಯಾದ ಎಲ್ಲಾ ಸಂಘಟನೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಜೊತೆಗೆ ಸಂಘಟನೆಯ ಪ್ರಮುಖರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ಹಿಂಸಾಚಾರ ಪೂರ್ವಯೋಜಿತ ಎಂದು ಗುಪ್ತಚರ ವರದಿಯಲ್ಲಿ ಹೇಳಲಾಗಿದೆ.

ಮಧ್ಯಪ್ರದೇಶವೊಂದರಲ್ಲೇ 250ಕ್ಕೂ ಹೆಚ್ಚು ಜನರ ಬಂಧನ

ಮಧ್ಯಪ್ರದೇಶವೊಂದರಲ್ಲೇ 250ಕ್ಕೂ ಹೆಚ್ಚು ಜನರ ಬಂಧನ

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶವೊಂದರಲ್ಲೇ 250ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, 50ಕ್ಕೂ ಹೆಚ್ಚು ಜನರ ಮೇಲೆ FIR ದಾಖಲಿಸಲಾಗಿದೆ. ಹಿಂಸಾಚಾರದ ವೇಳೆ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿ ಪರಾಯಿಯಾಗಿದ್ದ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

ಭಾರತ್ ಬಂದ್ ಗೆ ಉತ್ತರ ಭಾರತ ತತ್ತರಿಸಿತ್ತು

ಭಾರತ್ ಬಂದ್ ಗೆ ಉತ್ತರ ಭಾರತ ತತ್ತರಿಸಿತ್ತು

ವಿವಿಧ ದಲಿತ ಸಂಘಟನೆಗಳು ಏ 2ರಂದು ಕರೆನೀಡಿದ್ದ ಭಾರತ್ ಬಂದ್ ಗೆ ಉತ್ತರ ಭಾರತ ತತ್ತರಿಸಿತ್ತು. ಪರಿಶಿಷ್ಟ ಜಾತಿ/ಪಂಗಡ ಕಾಯ್ದೆಯಲ್ಲಿ ತಿದ್ದುಪಡಿ ತರುವ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ನಡೆಯುತ್ತಿರುವ ಬಂದ್ ಗೆ 9 ಜನ ಮೃತರಾಗಿದ್ದರು. ಹಿಂಸಾಚಾರ ತೀವ್ರಗೊಂಡ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪರಾಮರ್ಶಿಸುವಂತೆ ಮನವಿ ಮಾಡಿತ್ತು.

English summary
As per IB report, several organizations and individuals were provided funds for spreading violence during the Bharat bandh which claimed nine lives. Madhya Pradesh’s inspector general of police (Intelligence) Makrand Deouskar said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X