ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಗಿನಕಾಯಿ ಮೂಲಕ ನುಡಿಯಲಾದ ವಿಶಿಷ್ಟ ಲೋಕಸಭಾ ಚುನಾವಣಾ ಭವಿಷ್ಯ!

|
Google Oneindia Kannada News

Recommended Video

Lok Sabha Elections 2019: ತೆಂಗಿನಕಾಯಿ ಮೂಲಕ ನುಡಿಯಲಾದ ಲೋಕಸಭಾ ಚುನಾವಣಾ ಭವಿಷ್ಯ

ತಾಳೇಗರಿ, ಪಗಡೆ, ವೀಳ್ಯದ ಎಲೆಯ ಮೂಲಕ ಭವಿಷ್ಯ ಹೇಳುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಇಲ್ಲೊಬ್ಬರು, ಕೈಯಲ್ಲಿ ತೆಂಗಿನಕಾಯಿಯನ್ನು ಇಟ್ಟುಕೊಂಡು ಭವಿಷ್ಯ ನುಡಿದಿದ್ದಾರೆ.

ಸಿಪ್ಪೆ ತೆಗೆದ ತೆಂಗಿನಕಾಯಿಯನ್ನು ಕೈಯಲ್ಲಿ ಹಿಡಿದುಕೊಂಡು, ದಕ್ಷಿಣಕನ್ನಡದ ಮೂಲದ ಎಂ ಕೃಷ್ಣಪ್ರಸಾದ್ ಎನ್ನುವವರು ಲೋಕಸಭಾ ಚುನಾವಣಾ ಭವಿಷ್ಯವನ್ನು ತನ್ನದೇ ಲೆಕ್ಕಾಚಾರದ ಮೂಲಕ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ತೆಂಗಿನಕಾಯಿಯಲ್ಲಿ ನಿಖರ ಫಲಿತಾಂಶ ಪ್ರತಿಶತ ಎನ್ನುವ ಇವರು, ಕರ್ನಾಟಕದ ಯಾವಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಮತ್ತು ರಾಜ್ಯಾವಾರು ಬಿಜೆಪಿ ಎಷ್ಟು ಸ್ಥಾನವನ್ನು ಗೆಲ್ಲಬಹುದು ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.

ಕ್ಷೇತ್ರ/ರಾಜ್ಯದ ಹೆಸರನ್ನು ಹೇಳುತ್ತಿದ್ದಂತೆಯೇ ಕೈಯಲ್ಲಿ ತೆಂಗಿನಕಾಯಿಯ ಚಲನೆಯನ್ನು ಆಧರಿಸಿ ಈ ಭವಿಷ್ಯ ನುಡಿಯಲಾಗಿದೆ. ಇವರ ಪ್ರಕಾರ, ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ. ಇವರ ಪ್ರಕಾರ ಎಲ್ಲಿ ಯಾರು?

ರಾಜಧಾನಿ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳು

ರಾಜಧಾನಿ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳು

ಬೆಂಗಳೂರು ಕೇಂದ್ರ : ಬಿಜೆಪಿ
ಬೆಂಗಳೂರು ಉತ್ತರ : ಬಿಜೆಪಿ
ಬೆಂಗಳುರು ದಕ್ಷಿಣ : ಬಿಜೆಪಿ
ಬೆಂಗಳೂರು ಗ್ರಾಮಾಂತರ : ಕಾಂಗ್ರೆಸ್

ಇಂಡಿಯಾ ಟುಡೇ ಎಕ್ಸಿಟ್ ಪೋಲ್: 'ಚೌಕೀದಾರ್ ಚೋರ್ ನಹೀ ಹೇ'ಇಂಡಿಯಾ ಟುಡೇ ಎಕ್ಸಿಟ್ ಪೋಲ್: 'ಚೌಕೀದಾರ್ ಚೋರ್ ನಹೀ ಹೇ'

ಕೃಷ್ಣಪ್ರಸಾದ್ ಪ್ರಕಾರ ದೇವೇಗೌಡರಿಗೆ ಸೋಲು

ಕೃಷ್ಣಪ್ರಸಾದ್ ಪ್ರಕಾರ ದೇವೇಗೌಡರಿಗೆ ಸೋಲು

ಚಿಕ್ಕಬಳ್ಳಾಪುರ : ಬಿಜೆಪಿ
ಚಾಮರಾಜನಗರ : ಬಿಜೆಪಿ
ಮೈಸೂರು, ಕೊಡಗು : ಬಿಜೆಪಿ
ಕೋಲಾರ : ಕಾಂಗ್ರೆಸ್
ತುಮಕೂರು : ಬಿಜೆಪಿ
ಹಾಸನ : ಜೆಡಿಎಸ್

ಎಲ್ಲಾ ಎಕ್ಸಿಟ್ ಪೋಲ್ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ್ದು: ಡಾ. ಪರಮೇಶ್ವರ್ಎಲ್ಲಾ ಎಕ್ಸಿಟ್ ಪೋಲ್ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ್ದು: ಡಾ. ಪರಮೇಶ್ವರ್

ಮಂಡ್ಯದಲ್ಲಿ ಸುಮಲತಾಗೆ ಗೆಲುವು

ಮಂಡ್ಯದಲ್ಲಿ ಸುಮಲತಾಗೆ ಗೆಲುವು

ಮಂಡ್ಯ : ಪಕ್ಷೇತರ
ಚಿತ್ರದುರ್ಗ : ಬಿಜೆಪಿ
ಉಡುಪಿ, ಚಿಕ್ಕಮಗಳೂರು : ಬಿಜೆಪಿ
ದಕ್ಷಿಣಕನ್ನಡ : ಬಿಜೆಪಿ
ಬಾಗಲಕೋಟೆ : ಕಾಂಗ್ರೆಸ್
ಶಿವಮೊಗ್ಗ : ಬಿಜೆಪಿ

ಹಾವೇರಿ, ಕೊಪ್ಪಳ, ಚಿಕ್ಕೋಡಿ

ಹಾವೇರಿ, ಕೊಪ್ಪಳ, ಚಿಕ್ಕೋಡಿ

ವಿಜಯಪುರ : ಜೆಡಿಎಸ್
ಹಾವೇರಿ : ಬಿಜೆಪಿ
ಕೊಪ್ಪಳ : ಬಿಜೆಪಿ
ದಾವಣಗೆರೆ : ಕಾಂಗ್ರೆಸ್
ಧಾರವಾಡ : ಬಿಜೆಪಿ
ಚಿಕ್ಕೋಡಿ : ಬಿಜೆಪಿ

ಉತ್ತರಕನ್ನಡ, ಬಳ್ಳಾರಿ ಭವಿಷ್ಯ ನುಡಿದಿಲ್ಲ

ಉತ್ತರಕನ್ನಡ, ಬಳ್ಳಾರಿ ಭವಿಷ್ಯ ನುಡಿದಿಲ್ಲ

ರಾಯಚೂರು : ಬಿಜೆಪಿ
ಬೆಳಗಾವಿ : ಕಾಂಗ್ರೆಸ್
ಕಲಬುರಗಿ : ಕಾಂಗ್ರೆಸ್
ಬೀದರ್ : ಕಾಂಗ್ರೆಸ್
ಉತ್ತರಕನ್ನಡ : ಭವಿಷ್ಯ ನುಡಿದಿಲ್ಲ
ಬಳ್ಳಾರಿ : ಭವಿಷ್ಯ ನುಡಿದಿಲ್ಲ

ಇವರ ಪ್ರಕಾರ, ರಾಜ್ಯದಲ್ಲಿ ಇಪ್ಪತ್ತು ಕ್ಷೇತ್ರದಲ್ಲಿ ಬಿಜೆಪಿ, ಐದರಲ್ಲಿ ಕಾಂಗ್ರೆಸ್, ಎರಡರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲಲಿದ್ದಾರೆ. ಆದರೆ, ಕ್ಷೇತ್ರಾವಾರು ಫಲಿತಾಂಶ ಅವರು ಹೇಳಿದ ಪ್ರಕಾರ, ಏಳು ಕಡೆ ಕಾಂಗ್ರೆಸ್ ಗೆಲುವು ಎಂದಾಗ ಬೇಕಿತ್ತು. ಜೊತೆಗೆ, ಯಾದಗಿರಿ ಮತ್ತು ಗದಗ ಪ್ರತ್ಯೇಕ ಕ್ಷೇತ್ರ ಎಂದು ತಪ್ಪಾಗಿ ಹೇಳಿದ್ದಾರೆ.

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ಡಿಎ

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ಡಿಎ

ಬಿಹಾರ - 19, ಗುಜರಾತ್ - 23, ಕೇರಳ - 0, ಮಹಾರಾಷ್ಟ್ರ - 21, ಒರಿಸ್ಸಾ - 9, ರಾಜಸ್ಥಾನ - 20, ಉತ್ತರಪ್ರದೇಶ - 56, ಪಶ್ಚಿಮ ಬಂಗಾಳ - 05, ದೆಹಲಿ - 07, ಮಧ್ಯಪ್ರದೇಶ - 25,

ಒಟ್ಟಾರೆಯಾಗಿ
ಬಿಜೆಪಿ : 251
ಎನ್ಡಿಎ : 306
ಕಾಂಗ್ರೆಸ್ : 86
ಯುಪಿಎ : 140
ಇತರರು : 97

English summary
Loksabha elections 2019: Prediction through coconut NDA, will retain the power and BJP will win 20 seats in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X