ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೂ ದೇಶಗಳಿಗೆ ಮಹತ್ವವಾದ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 04: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಭಾರತಕ್ಕೆ ಭೇಟಿ ನೀಡಿದ್ದು, ಭಾರತದ ಪಾಲಿಗೆ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ. ಪುಟೀನ್ ಅವರ ಈ ಭೇಟಿ ಭಾರತ ಮತ್ತು ಅಮೆರಿಕ ಸಂಬಂಧದ ಮೇಲೆಯೂ ಪರಿಣಾಮ ಬೀರಲಿದೆ.

ರಾಷ್ಯಾ-ಭಾರತದ ದ್ವಿಪಕ್ಷೀಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂದು ನವದೆಹಲಿಗೆ ಆಗಮಿಸಲಿರುವ ಅವರು, ಭೇಟಿ ಅವಧಿಯಲ್ಲಿ ಹಲವು ಮಹತ್ತರವಾದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

ರಷ್ಯಾದಿಂದ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿ: ಪುಟಿನ್ ಜತೆ ಮೋದಿ ಚರ್ಚೆರಷ್ಯಾದಿಂದ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿ: ಪುಟಿನ್ ಜತೆ ಮೋದಿ ಚರ್ಚೆ

ಉಭಯ ದೇಶಗಳಿಗೆ ಈ ಭೇಟಿ ಅತ್ಯಂತ ಮಹತ್ತರವಾದುದು ಎಂದೇ ಪರಿಗಣಿಸಲಾಗುತ್ತಿದೆ. ಎರಡೂ ದೇಶಗಳ ವಿದೇಶಾಂಗ ನೀತಿಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಶೇಷವಾಗಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಮೇಲೆ ಈ ಭೇಟಿ ಪರಿಣಾಮ ಬೀರಲಿದೆ.

Vladimir Putin visiting India today, expected sign big deals with India

ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಿದರೆ ಭಾರತಕ್ಕೆ ನಿರ್ಭಂಧ ಹೇರಲಾಗುವುದು ಎಂದು ಈಗಾಗಲೇ ಅಮೆರಿಕ ಕಠಿಣ ಎಚ್ಚರಿಕೆಯನ್ನು ಭಾರತಕ್ಕೆ ನೀಡಿದೆ. ಆದರೆ ಇಂದು ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಸಹಿ ಹಾಕುತ್ತಿದೆ. ಹಾಗಾಗಿ ಈ ಭೇಟಿಯು ಅಮೆರಿಕ-ಭಾರತದ ನಡುವಿನ ಸಂಬಂಧದ ಮೇಲೂ ಭಾರಿ ಪರಿಣಾಮ ಬೀರಲಿದೆ.

ಪುಟಿನ್ ಹಾಗೂ ಮೋದಿ ಅವರು ಭದ್ರತೆ ಸೇರಿದಂತೆ ಬಾಹ್ಯಾಕಾಶ ಹಾಗೂ ಶಕ್ತಿ ಸಂಪನ್ಮೂಲ ಉತ್ಪಾದನೆಗಳ ಒಪ್ಪಂದಗಳಿಗೆ ಈ ಸಮಯದಲ್ಲಿ ಸಹಿ ಮಾಡಲಿದ್ದಾರೆ. ಪುಟಿನ್ ಅವರ ಈ ಭೇಟಿಯು ಭಾರತದ ಅಂತರಿಕ್ಷ ವಿಜ್ಞಾನ ವಿಭಾಗಕ್ಕೆ ಉತ್ತಮ ಕೊಡುಗೆ ನೀಡಲಿದೆ ಎನ್ನಲಾಗಿದೆ.

ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?

ರಷ್ಯಾ-ಭಾರತವು ಜಂಟಿಯಾಗಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುವ ಬಗ್ಗೆ ಇದೇ ಸಮಯದಲ್ಲಿ ಘೋಷಣೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ. S-400 ಟ್ರಿಯುಂಫ್ ಏರ್ ಡಿಫೆನ್ಸ್ ಸಿಸ್ಟಮ್ ಮಹತ್ವದ ಭದ್ರತಾ ಒಪ್ಪಂದ ಉಭಯ ನಾಯಕರ ನಡುವೆ ಆಗಲಿದೆ. ಇದು ಭಾರತದ ರಕ್ಷಣಾ ಇಲಾಖೆಗೆ ಮಹತ್ವದ ಶಕ್ತಿ ಒದಗಿಸಲಿದೆ.

ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಬೇಡಿ: ಭಾರತಕ್ಕೆ ಅಮೆರಿಕ ಎಚ್ಚರಿಕೆ ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸಬೇಡಿ: ಭಾರತಕ್ಕೆ ಅಮೆರಿಕ ಎಚ್ಚರಿಕೆ

ರಷ್ಯಾವು ಭಾರತದ 'ಮೇಕ್‌ ಇನ್ ಇಂಡಿಯಾ' ಅಭಿಯಾನಕ್ಕೆ ಯಾಂತ್ರಿಕ ನೆರವು ಹಾಗೂ ತರಬೇತಿಯನ್ನು ನೀಡಲು ಮುಂದೆ ಬಂದಿದೆ. ಈ ಕುರಿತು ಸಹ ಒಪ್ಪಂದ ಸಹಿ ಆಗಲಿದೆ.

English summary
Russia president Vladimir Putin visiting India today meeting PM Narendra Modi in the evening. Both leaders expected to sign agreements related to security, space and energy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X