ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ತರ್ ಪುರ್ ಕಾರಿಡಾರ್; ವರ್ಷವಿಡೀ ಭಾರತೀಯರಿಗೆ ವೀಸಾರಹಿತ ಪ್ರವೇಶ

|
Google Oneindia Kannada News

ಕರ್ತರ್ ಪುರ್ ನ ಪವಿತ್ರ ಗುರ್ ದ್ವಾರಕ್ಕೆ ಭಾರತೀಯರಿಗೆ ವರ್ಷವಿಡೀ ವೀಸಾ ಇಲ್ಲದೆಯೇ ಪ್ರವೇಶಕ್ಕೆ ಭಾನುವಾರ ಪಾಕಿಸ್ತಾನ ಒಪ್ಪಿಗೆ ನೀಡಿದೆ. ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದ್ದು, ಎರಡೂ ದೇಶಗಳ ಮಧ್ಯೆ ಈ ಬಗ್ಗೆ ನಡೆದ ಎರಡನೇ ಅಧಿಕೃತ ಭೇಟಿಯಲ್ಲಿ ಚರ್ಚೆ ನಡೆದಿದೆ. ಇದರ ಜತೆಗೆ ಪಾಕಿಸ್ತಾನಿ ಪ್ರದೇಶದಿಂದ ಖಲಿಸ್ತಾನ್ ಹೋರಾಟಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಯಿತು.

ಭಾರತದ ಪಾಸ್ ಪೋರ್ಟ್ ಇರುವವರಿಗೆ ಹಾಗೂ ಒಸಿಐ ಕಾರ್ಡ್ ಇರುವವರಿಗೆ ಕರ್ತರ್ ಪುರ್ ಸಾಹಿಬ್ ಗುರುದ್ವಾರಕ್ಕೆ ವಾರದ ಏಳೂ ದಿನ ವೀಸಾ ಇಲ್ಲದೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಹೀಗೆ ವರ್ಷವಿಡೀ ದರ್ಶನ ಪಡೆಯಬಹುದು. ದಿನಕ್ಕೆ ಐದು ಸಾವಿರ ಯಾತ್ರಾರ್ಥಿಗಳು ಭೇಟಿ ನೀಡಬಹುದು. ಒಬ್ಬೊಬ್ಬರಂತೆಯೂ ಅಥವಾ ಗುಂಪಾಗಿಯೂ ಹಾಗೂ ಪಾದಯಾತ್ರೆ ಮೂಲಕ ಅಲ್ಲಿಗೆ ತೆರಳಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆ

ಇದರ ಜತೆಗೆ ಎಲ್ಲ ರೀತಿಯ ಧಾರ್ಮಿಕ ನಂಬಿಕೆ ಇರುವ ಭಾರತೀಯ ನಾಗರಿಕರಿಗೆ ಅವಕಾಶ ನೀಡಬೇಕು ಎಂದು ಕೇಳಲಾಗಿದೆ. ಭಾರತ ಮತ್ತು ಇತರ ದೇಶಗಳಿಂದ ಬರುವ ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ವಿಶೇಷ ದಿನಗಳಲ್ಲಿ ಹೆಚ್ಚುವರಿಯಾಗಿ ಯಾತ್ರಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಲಾಗಿದೆ.

Indian Delegation

ಈ ವರ್ಷದ ಅಕ್ಟೋಬರ್ 31ರೊಳಗೆ ಕರ್ತರ್ ಪುರ್ ಕಾರಿಡಾರ್ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ದೆಹಲಿಯಿಂದ ಪಾಕಿಸ್ತಾನದ್ ನನ್ಕಾನ ಸಾಹಿಬ್ ಗೆ 'ನಗರ್ ಕೀರ್ತನ್' ಅನ್ನು ಜುಲೈ ಹಾಗೂ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಸಿಖ್ಖರ ಮೊದಲ ಗುರು ಜನ್ಮ ವರ್ಷಾಚರಣೆ ಪ್ರಯುಕ್ತ ಆಯೋಜಿಸಲು ಅವಕಾಶ ನೀಡಲು ಪಾಕಿಸ್ತಾನವನ್ನು ಒತ್ತಾಯಿಸಿದೆ.

English summary
Visa free entry for Indians to Pakistan, Kartharpur through out the year. Here is the details of the agreement between India and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X