ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ವಿದೇಶಿಗರ ವೀಸಾ, ಇ-ವೀಸಾ ಅವಧಿ ವಿಸ್ತರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 14: ಲಾಕ್‌ಡೌನ್‌ಗೂ ಮುನ್ನ ಭಾರತಕ್ಕೆ ಬಂದು ಸಿಲುಕಿರುವ ವಿದೇಶಿಯರ ವೀಸಾ ಹಾಗೂ ಇ-ವೀಸಾದ ಅವಧಿ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಮಾ. 24ರಂದು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಅನೇಕ ವಿದೇಶಿ ಪ್ರರಜೆಗಳು ದೇಶದೊಳಗೆಯೇ ಸಿಲುಕಿದ್ದರು.

ಲಾಕ್‌ಡೌನ್‌ಗಿಂತ ಮೊದಲು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹಲವು ವಿದೇಶಿಯರು ಇಲ್ಲೇ ಸಿಲುಕಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯವನ್ನು ನಿಲ್ಲಿಸಿವೆ. ಏಕಾಏಕಿ ಲಾಕ್‌ಡೌನ್ ಮಾಡಿದ್ದರಿಂದ ಅವರು ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗಿಲ್ಲ.

foreigner

ಅಂತವರನ್ನು ಪತ್ತೆ ಹಚ್ಚಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಹಾಯವಾಣಿಯನ್ನು ತೆರೆದಿದೆ. ಜೊತೆಗೆ strandedindia.com ಎನ್ನುವ ವೆಬ್‌ಸೈಟ್‌ನ್ನು ಕೂಡ ತೆರೆದಿದೆ. ಅದರಲ್ಲಿ ಕೊವಿಡ್ 19 ಸಹಾಯವಾಣಿ, ಇ-ಮೇಲ್ ಐಡಿ ಹಾಗೂ ವಾಟ್ಸಾಪ್ ನಂಬರ್‌ನ್ನು ನೀಡಲಾಗಿದೆ.

ಅದರಲ್ಲಿ ನಿಮ್ಮ ಹೆಸರು, ಯಾವ ದೇಶದಿಂದ ಭಾರತಕ್ಕೆ ಬಂದಿದ್ದೀರಿ, ಭಾರತದ ಯಾವ ಪ್ರದೇಶದಲ್ಲಿ ನೀವು ಸಿಲುಕಿದ್ದೀರಿ, ಮೊಬೈಲ್ ನಂಬರ್, ಇ-ಮೇಲ್ ಐಡಿ ಹಾಗೂ ನಿಮ್ಮ ಮಾತುಗಳನ್ನು ಅಲ್ಲಿ ನೀಡಿರುವ ಮೆಸೇಜ್ ಬಾಕ್ಸ್‌ನಲ್ಲಿ ತಿಳಿಸಬಹುದಾಗಿದೆ.

ಬಳಿಕ ಸಬ್‌ಮಿಟ್ ನೀಡಬೇಕು. ಕೊವಿಡ್ 19 ಸಹಾಯವಾಣಿ ಸಂಖೆ ಇಂತಿದೆ: +91-11-23978046 ಅಥವಾ 1075ಗೆ ಕರೆ ಮಾಡಿ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.

English summary
India has extended validity of regular and e-visas of foreign nationals stranded in the country due to Covid-19 till April 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X