ಡಿ.21, 26ರಂದು ಪ್ರತ್ಯೇಕವಾಗಿ ಕೊಹ್ಲಿ-ಅನುಷ್ಕಾ ಮದುವೆ ಆರತಕ್ಷತೆ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 12: ಪ್ರಣಯ ಪಕ್ಷಿಗಳಂತೆ ಕಳೆದ ನಾಲ್ಕು ವರ್ಷಗಳಿಂದ ಮಾಧ್ಯಮಗಳ ಕಣ್ತಪ್ಪಿಸಿ ದೇಶ-ವಿದೇಶ ಸುತ್ತಾಡುತ್ತಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಸೋಮವಾರ ಇಟಲಿಯ ಟಸ್ಕನಿ ಎಂಬಲ್ಲಿ ವಿರಾಟ್ ಮತ್ತು ಅನುಷ್ಕಾ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿದೆ. ವಿವಾಹದಲ್ಲಿ ಕುಟುಂಬಸ್ಥರು, ತೀರಾ ಆಪ್ತ ಬಂಧುಗಳು, ಸ್ನೇಹಿತರು ಉಪಸ್ಥಿತರಿದ್ದರು. ಇನ್ನುಳಿದ ಸ್ನೇಹಿತರು, ಆಫೀಸರ್, ಉದ್ಯಮಿಗಳಿಗೆ , ಕ್ರಿಕೆಟರ್ಸ್, ನಟ-ನಟಿಯರಿಗೆ ಪ್ರತ್ಯೇಕವಾಗಿ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮದುವೆ ಆರತಕ್ಷತೆ ಸಮಾರಂಭವನ್ನು ಆಯೋಜಿಸಿದ್ದಾರೆ.

'ವಿರುಷ್ಕಾ' ಮದುವೆಯ ಅಪರೂಪದ ವಿಡಿಯೋಗಳು

Virat Kohli, Anushka Sharma to hold grand reception in Delhi and mumbai on Dece 21, 26th

ಅನುಷ್ಕಾ ಹಾಗೂ ಕೊಹ್ಲಿ ತಮ್ಮ ಸಂಬಂಧಿಕರಿಗೆ ಡಿಸೆಂಬರ್ 21ರಂದು ದೆಹಲಿಯತಾಜ್ ಡಿಪ್ಲೊಮೆಟಿಕ್ ಎನ್ ಕ್ಲೇವ್ ನ ದರ್ಬಾರ್ ಹಾಲ್ ನಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದಾರೆ. ಇನ್ನು ಸ್ನೇಹಿತರಿಗೆ, ಕ್ರಿಕೆಟರ್ಸ್, ಉದ್ಯಮಿಗಳಿಗೆ, ನಟ-ನಟಿಯರಿಗೆ ಡಿಸೆಂಬರ್ 26 ಮುಂಬೈನಲ್ಲಿ ಅರತಕ್ಷತೆ ಆಯೋಜಿಸಿದ್ದಾರೆ.

ಬಳಿಕ ಮುಂಬರುವ ದಕ್ಷಿಣ ಆಫ್ರಿಕಾ ಟೂರ್ನಿ ಇರುವುದರಿಂದ ಕೊಹ್ಲಿ ಜೊತೆ ಅನುಷ್ಕಾ ಸಹ ತೆರಳಲಿದ್ದಾರೆ. ನವ ಜೋಡಿಗಳು ಹೊಸ ವರ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Virat Kohli, Anushka Sharma couple will be hosting a reception in New Delhi for their relatives on 21st December which will be followed by a reception for industry friends and cricketers in Mumbai on 26th December.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ