ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಎದುರಲ್ಲೇ ಅಗರ್ತಲಾದಲ್ಲಿ ಮಂತ್ರಿಯಿಂದ ಕಂತ್ರಿ ಕೆಲಸ

|
Google Oneindia Kannada News

Recommended Video

ಮೋದಿ ಎದುರೇ ಮಹಿಳಾ ಸಚಿವರನ್ನು ತಬ್ಬಿಕೊಳ್ಳಲು ಮುಂದಾದ ಮಂತ್ರಿ..! | Oneindia Kannada

ಅಗರ್ತಲಾ (ತ್ರಿಪುರಾ), ಫೆಬ್ರವರಿ 12 : ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿ ಇರುವಾಗಲೇ ಸಚಿವರೊಬ್ಬರು ಮಹಿಳಾ ಸಚಿವರನ್ನು ಹಿಂದಿನಿಂದ ತಬ್ಬಿಕೊಳ್ಳಲು ಯತ್ನಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ ಘಟನೆ ವಿಡಿಯೋದಲ್ಲಿ ದಾಖಲಾಗಿದ್ದು, ಭಾರೀ ವಿವಾದದ ಕಿಡಿಯೆಬ್ಬಿಸಿದೆ.

ಈ ರೀತಿ ಅಸಭ್ಯವಾಗಿ ವರ್ತಿಸಿದ ಸಚಿವ ಮನೋಜ್ ಕಾಂತಿ ದೇಬ್ ಅವರನ್ನು ಕೂಡಲೆ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಮತ್ತು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಬೇಕು ಎಂದು ವಿರೋಧ ಪಕ್ಷವಾಗಿರುವ ಲೆಫ್ಟ್ ಫ್ರಂಟ್ ಆಗ್ರಹಿಸಿದೆ. ಈ ಘಟನೆ ನಡೆದಾಗ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಕೂಡ ವೇದಿಕೆಯಲ್ಲಿದ್ದರು.

ಬೃಂದಾವನದಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸಿದ ಪ್ರಧಾನಿ ಮೋದಿಬೃಂದಾವನದಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸಿದ ಪ್ರಧಾನಿ ಮೋದಿ

ಬಿಜೆಪಿಯ ಮನೋಜ್ ಕಾಂತಿ ಅವರು ಮಹಿಳಾ ಸಚಿವೆಯ ಸೊಂಟಕ್ಕೆ ಕೈಹಾಕಲು ಯತ್ನಿಸಿದ್ದಲ್ಲದೆ ಹಿಂದೆ ನಿಂತು ಅಸಭ್ಯವಾಗಿ ವರ್ತಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರಿಂದ ದೌರ್ಜನ್ಯಕ್ಕೊಳದಾಗ ಮಹಿಳೆ ಸಮಾಜ ಕಲ್ಯಾಣ ಸಚಿವೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಪ್ಲಬ್ ದೇಬ್ ರಂಥ ಗೌರವಾನ್ವಿತರು ವೇದಿಕೆಯ ಮೇಲಿದ್ದಾಗ ಏಕಾಂಗಿಯಾಗಿ ನಿಂತಿದ್ದ ಸಚಿವೆಯ ಜೊತೆ ಅಸಹ್ಯಕರವಾಗಿ ವರ್ತಿಸಿ ಮಹಿಳೆಯ ಪಾವಿತ್ರ್ಯಕ್ಕೆ, ಗೌರವಕ್ಕೆ ಚ್ಯುತಿ ತಂದಿದ್ದಾರೆ ಲೆಫ್ಟ್ ಫ್ರಂಟ್ ನ ಬಿಜನ್ ಧಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುಪ್ಪೂರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶತಿರುಪ್ಪೂರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ

ಬಿಜೆಪಿ ನೇತೃತ್ವದ ಸರಕಾರ ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದ ಮೇಲೆ, ಕಳೆದ 11 ತಿಂಗಳಲ್ಲಿ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಹಿಳೆಯರ ಅಪರಹಣ, ಅತ್ಯಾಚಾರ, ಮತ್ತಿತರ ದೌರ್ಜನ್ಯಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಅವರು, ಮನೋಜ್ ಅವರನ್ನು ಉಚ್ಚಾಟಿಸದಿದ್ದರೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳಾಗಲಿವೆ ಎಂದು ಎಚ್ಚರಿಸಿದ್ದಾರೆ.

Viral video : Tripura minister gropes woman colleague with Modi on stage

ಈ ಬಗ್ಗೆ ನ್ಯೂಸ್ ಏಜೆನ್ಸಿ ಐಎಎನ್ಎಸ್ ಮನೋಜ್ ಕಾಂತಿ ದೇಬ್ ಅವರನ್ನು ಸಂಪರ್ಕಿಸಿದಾಗ, ಆಹಾರ, ಯೂತ್ ಅಫೇರ್ಸ್ ಮತ್ತು ಸ್ಪೋರ್ಟ್ಸ್ ಸಚಿವರಾಗಿರುವ ಮನೋಜ್ ಅವರು, ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಈ ಘಟನೆಯ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಅಂಥದೇನೂ ಘಟಿಸದಿದ್ದರೂ ವಿರೋಧ ಪಕ್ಷ ಚಾರಿತ್ರ್ಯವಧೆ ನಡೆಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದೆ. ಈ ಬಗ್ಗೆ ದೌರ್ಜನ್ಯಕ್ಕೊಳಗಾಗಿರುವ ಮಹಿಳಾ ಸಚಿವೆ ಯಾವುದೇ ಹೇಳಿಕೆ ನೀಡಿಲ್ಲ.

English summary
Tripura minister gropes woman colleague with prime minister Narendra Modi on stage at a rally in Agartala in Tripura. The video has gone viral and opposition party Left Front is demanding sacking of the minister for sexual harassment and harming modesty of woman in public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X