ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಿಯ ಶವಸಂಸ್ಕಾರ ಮಾಡಲು ಹೊರಟ ಆನೆಗಳು: ವಿಡಿಯೋ ವೈರಲ್

|
Google Oneindia Kannada News

Recommended Video

ಸತ್ತ ಮರಿಯನ್ನು ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿರುವ ಆನೆ | Oneindia Kannada

ಮನುಷ್ಯನು ಮೃಗಗಳಿಗಿಂತ ಯಾಕೆ ಭಿನ್ನ ಎಂಬ ಪ್ರಶ್ನೆಗೆ ಸಿಗುವ ಉತ್ತರ ಅವನಿಗೆ ವಿವೇಚನಾ ಶಕ್ತಿ ಇದೆ, ಭಾವನೆಗಳಿವೆ ಎಂಬುದು. ಆದರೆ ವನ್ಯಮೃಗಗಳಲ್ಲೂ ಭಾವನೆಗಳಿವೆ, ತಮ್ಮವರಿಗಾಗಿ ಪರಿತಪಿಸುವ ಭಾವುಕ ಮನಸ್ಸಿದೆ ಎಂಬುದಕ್ಕೆ ಸಾಕ್ಷಿಯಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಗರಹೊಳೆ ಅಭಯಾರಣ್ಯದಲ್ಲಿ ಬಸ್ ಅನ್ನು ಅಟ್ಟಾಡಿಸಿಕೊಂಡು ಬಂದ ಗಜರಾಜ ನಾಗರಹೊಳೆ ಅಭಯಾರಣ್ಯದಲ್ಲಿ ಬಸ್ ಅನ್ನು ಅಟ್ಟಾಡಿಸಿಕೊಂಡು ಬಂದ ಗಜರಾಜ

ಸತ್ತ ಮರಿಯನ್ನು ಆನೆಯೊಂದು ಕಚ್ಚಿಕೊಂಡು ಹೋಗುತ್ತಿದ್ದು, ಅದರ ಶವ ಸಂಸ್ಕಾರಕ್ಕೆ ಆನೆಯ ಹಿಂಡೇ ನಾಯಕ ಆನೆಯನ್ನು ಹಿಂಬಾಲಿಸುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://twitter.com/ParveenKaswan/status/1136932777155108865

ಈ ವಿಡಿಯೋದಲ್ಲಿ ಆನೆಯೊಂದು ಸತ್ತ ಮರಿಯನ್ನು ಕಚ್ಚಿಕೊಂದು ಬರುತ್ತಿದ್ದು, ಮೊದಲಿಗೆ ರಸ್ತೆ ದಾಟುವ ಅದು ಮರಿಯ ಶವವನ್ನು ಅಲ್ಲಿಯೇ ಇರಿಸುತ್ತದೆ. ಕೆಲ ಕ್ಷಣದ ನಂತರ ಮತ್ತೊಂದು ಆನೆ ಬಂದು ಅದಕ್ಕೆ ಶ್ರದ್ಧಾಂಜಲಿ ಸಲ್ಲಿಸುವಂತೆ ಮಾಡುತ್ತದೆ. ಇದಾದ ನಂತರ ಆನೆಗಳ ಹಿಂದೊಂದು ಅಲ್ಲಿಗೆ ಬರುತ್ತದೆ. ಮತ್ತೆ ಆನೆಗಳೆಲ್ಲ ಸೇರಿ ಆ ಮರಿಯನ್ನು ಹೊತ್ತು, ಕಾಡಿನ ಮತ್ತೊಂದು ದಿಕ್ಕಿಗೆ ಹೋಗುತ್ತವೆ.

Viral Video of elephants carryig dead calf for Funeral

ಹಾಗೆ ನೋಡುವುದಕ್ಕೆ ಹೋದರೆ ಆನೆ ತನ್ನ ಮರಿಯನ್ನು ಸತ್ತ ಜಾಗದಲ್ಲೇ ಬಿಟ್ಟು ಬರಬಹುದಿತ್ತು. ಅಥವಾ ರಸ್ತೆಯ ಮೇಲೆ ಹಾಗೆಯೇ ಇಟ್ಟು ಹೋಗಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡದೆ, ಅದನ್ನು ತಮ್ಮೊಂದಿಗೇ ಹೊತ್ತುಕೊಂದು ಹೋಗುತ್ತಿರುವುದನ್ನು ನೋಡಿದರೆ ಮೃಗಗಳಲ್ಲೂ ಇರುವ ಭಾವನಾತ್ಮಕ ಸಂಬಂಧಗಳ ಸೆಳೆತ ಅರ್ಥವಾಗುತ್ತದೆ.

English summary
A video of elephants carrying a dead calf for Funeral procession becomes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X