ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪತಿಯ ಕಳೇಬರದ ಮುಂದೆ ನಿಂತರೂ ಆಕೆಯ ಕಣ್ಣಲ್ಲಿ ಹನಿ ನೀರಿಲ್ಲ!

|
Google Oneindia Kannada News

ಪುಲ್ವಾಮಾ ಘಟನೆಯ ನಂತರ ನಡೆದ ಉಗ್ರರ ವಿರುದ್ಧ ಎನ್ ಕೌಂಟರ್ ದಾಳಿಯಲ್ಲಿ ಸೋಮವಾರ ಹುತಾತ್ಮರಾದ ಉತ್ತರಾಖಂಡದ ಡೆಹ್ರಾಡೂನ್ ನ ಮೇಜರ್ ವಿ ಎಸ್ ಧೌಂಡಿಯಾಳ್ ಅವರ ಪತ್ನಿ, ಪತಿಯ ಕಳೇಬರದ ಮುಂದೆ ಕಣ್ಣೀರು ಸುರಿಸದೆ ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತಿಯ ಚಿತ್ರವನ್ನೇ ನೋಡುತ್ತ, ಅದೇನನ್ನೋ ಗುನುಗುತ್ತ, ಸಿಹಿಮುತ್ತು ನೀಡುವ ಆಕೆಯ ವರ್ತನೆ ಕರುಳು ಹಿಂಡುವಂತೆ ಮಾಡುತ್ತದೆ.

ವಿಧಿಯ ಆಟ... ಈ ಯೋಧನಿಗೆ ಕಡೆಯ ಕ್ಷಣದಲ್ಲಿ ರಜಾ ಸಿಗದಿದ್ದರೆ...ವಿಧಿಯ ಆಟ... ಈ ಯೋಧನಿಗೆ ಕಡೆಯ ಕ್ಷಣದಲ್ಲಿ ರಜಾ ಸಿಗದಿದ್ದರೆ...

ಫೆಬ್ರವರಿ 14 ರಂದು ಜೈಷ್ ಇ ಮೊಹಮ್ಮದ್ ಉಗ್ರ ಆದಿಲ್ ದಾರ್, ಸಿಆರ್ ಪಿಎಫ್ ಯೋಧರಿದ್ದ ಬಸ್ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಒಟ್ಟು 44 ಯೋಧರು ಹುತಾತ್ಮರಾಗಿದ್ದರು. ಈ ಘಟನೆಗೆ ಪ್ರತೀಕಾರ ಎಂಬಂತೆ ಪುಲ್ವಾಮದಲ್ಲಿ ಸೋಮವಾರ ಉಗ್ರರ ವಿರುದ್ಧ ನಡೆದ ಎನ್ ಕೌಂಟರ್ ದಾಳಿಯಲ್ಲಿ ಮೇ.ವಿ.ಎಸ್. ಧೌಂಡಿಯಾಲ್ ಹುತಾತ್ಮರಾಗಿದ್ದರು. ಇವರೊಂದಿಗೆ ನಾಲ್ವರು ಯೋಧರು ಹುತಾತ್ಮರಾಗಿದ್ದರೆ, ಇಬ್ಬರು ಉಗ್ರರನ್ನು ಬಲಿಹಾಕಲಾಗಿತ್ತು. ಈ ಇಬ್ಬರು ಪುಲ್ವಾಮಾ ದಾಳಿಯ ಸಂಚುಕೋರರು ಎನ್ನಲಾಗಿತ್ತು.

Array

ದುಃಖ ಕಣ್ಣೀರಾಗಿ ಹರಿಯಲಿಲ್ಲ!

ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಪತಿಯ ಕಳೇಬರದ ಮುಂದೆ ಕಲ್ಲಿನಂತೆ ನಿಂತ ಆಕೆಯನ್ನು ಕಂಡರೆ ಇದೆಂಥ ವಿಚಿತ್ರ ಅನ್ನಿಸೋದು ಸಹಜ. ಆದರೆ ಎದೆಯಲ್ಲಿ ಹುದುಗಿದ ದುಃಖವನ್ನು ಕಣ್ಣೀರಾಗಿ ಹರಿಬಿಡದೆ ರಣಧೀರ ಪತಿಗೆ ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಈಕೆ.

'ಯೋಧರ ದೇಹದ ಭಾಗಗಳು 600ಮೀ ದೂರ ಚಿಮ್ಮಿದ್ದನ್ನು ಕಣ್ಣಾರೆ ಕಂಡೆವು!''ಯೋಧರ ದೇಹದ ಭಾಗಗಳು 600ಮೀ ದೂರ ಚಿಮ್ಮಿದ್ದನ್ನು ಕಣ್ಣಾರೆ ಕಂಡೆವು!'

Array

ಆಕೆಯ ಸೆಲ್ಯೂಟ್ ಮುಂದೆ ಯಾವ ಶಬ್ದವೂ ಕೇಳಲಿಲ್ಲ!

"ಭಾರತ್ ಮಾತಾ ಕೀ ಜೈ, ವೀರ್ ಮೇಜರ್ ಧೌಂಡಿಯಾಳ್ ಅಮರ್ ರಹೇ, ಪಾಕಿಸ್ತಾನ್ ಮುರ್ದಾಬಾದ್" ಎಂಬಿತ್ಯಾದಿ ಘೋಷಣೆಯ ನಡುವೆ ಹುತಾತ್ಮ ಯೋಧ ಧೌಂಡಿಯಾಳ್ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿದ್ದರೆ, ಇತ್ತ ಪತಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ಪತ್ನಿಯ ಚಿತ್ರದ ಮುಂದೆ ಆ ಯಾವ ಘೋಷಣೆಯೂ ಕೇಳಲಿಲ್ಲ. ದೇಶಕ್ಕಾಗಿ ಪ್ರಾಣ ತೆತ್ತ ಪತಿಗೆ ಮೆಚ್ಚುಗೆ ಎಂಬಂತೆ ಆಕೆ ಸೆಲ್ಯೂಟ್ ಹೊಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಹೆಮ್ಮೆ ಮೂಡಿಸುತ್ತಿದೆ.

ನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿ ನಾನೂ ಸೇನೆಗೆ ಸೇರಿ ಉಗ್ರರ ರುಂಡ ಚೆಂಡಾಡುತ್ತೇನೆ:ಹುತಾತ್ಮ ಗುರು ಪತ್ನಿ ಕಲಾವತಿ

ನನ್ನ ಮಗನ ಬಗ್ಗೆ ಹೆಮ್ಮೆ ಇದೆ!

"ತಾಯ್ನಾಡಿಗಾಗಿ ಮಡಿದ ನನ್ನ ಮಗನ ಮೇಲೆ ಹೆಮ್ಮೆ ಇದೆ. ಪಾಕಿಸ್ತಾನವನ್ನು ನಾವು ಒಂದೇ ದಿನದಲ್ಲಿ ನಾಶ ಮಾಡಬಹುದು. ನಮಗೆ ಅದು ಸಾಧ್ಯವಿಲ್ಲ ಎಂದುಕೊಂಡರೆ ಅದು ಪಾಕಿಸ್ತಾನ ಮೂರ್ಖತನ. ನನ್ನ ಮಗ ದೇಶಕ್ಕಾಗಿ ಪ್ರಾಣ ನೀಡಿದ್ದಾನೆ, ಅವನಿಗೆ ನನ್ನ ಸಲಾಂ" ಎಂದು ಸೋಮವಾರ ಹುತಾತ್ಮರಾದ ಇನ್ನೋರ್ವ ಯೋಧ ಸಿಪಾಯ್ ಅಜಯ್ ಕುಮಾರ್ ಅವರ ತಾಯಿ ಹೆಮ್ಮೆಯಿಂದ ನುಡಿಯುತ್ತಾರೆ!

ಪುಲ್ವಾಮಾ ಘಟನೆಗೆ ಪ್ರತೀಕಾರ

ಪುಲ್ವಾಮಾ ಘಟನೆಗೆ ಪ್ರತೀಕಾರ

ಫೆಬ್ರವರಿ 14 ರಂದು ಸಿಆರ್ ಪಿಎಫ್ ಯೋಧರಿದ್ದ ಬಸ್ ಮೇಲೆ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದರು. ಈ ಘಟನೆಗೆ ಪ್ರತೀಕಾರ ಎಂಬಂತೆ ಸೋಮವಾರ ಬೆಳಿಗ್ಗೆ ಭಾರತೀಯ ಸೇನೆಯು ಉಗ್ರರ ವಿರುದ್ಧ ಎನ್ ಕೌಟರ್ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮರಾದರೆ, ಪುಲ್ವಾಮಾ ಘಟನೆಯ ಮಾಸ್ಟರ್ ಮೈಂಡ್ ಆಗಿದ್ದ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು.

English summary
Video of Wife of Major VS Dhoundiyal , who lost his life in an encounter in Pulwama yesterday by his mortal remains becomes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X