ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದ ನೆಲದಲ್ಲಿ ಪವಾಡ ಮಾಡುವವರು... ಇವರ ಋಣ ತೀರಿಸುವವರ್ಯಾರು?

|
Google Oneindia Kannada News

ತಿರುವನಂತಪುರಂ, ಆಗಸ್ಟ್ 18: ಒಂದೆಡೆ ಧೋ ಎಂದು ಸುರಿವ ಧಾರಾಕಾರ ಮಳೆ, ಇನ್ನೊಂದೆಡೆ ಭೂಮಿಯನ್ನೇ ಕೊಚ್ಚಿಕೊಂಡು ಹೋಗುವ ಪ್ರವಾಹ, ಇಷ್ಟು ಸಾಲದೆಂಬಂತೆ ಬೀಸುವ ಬಿರುಗಾಳಿ... ಪ್ರಕೃತಿ ಮಾತೆಯ ಮುನಿಸಿಗೆ ಕೇರಳ ಅಕ್ಷರಶಃ ಸ್ಮಶಾನವಾಗಿದೆ!

ಇಂಥ ಪ್ರತಿಕೂಲ ಸನ್ನಿವೇಶದಲ್ಲೂ ಜೀವದ ಹಂಗು ತೊರೆದು ಪ್ರವಾಹದ ನೆಲದಲ್ಲಿ ಪವಾಡ ನಡೆಸುವವರೆಂದರೆ ನಮ್ಮ ಹೆಮ್ಮೆಯ ಯೋಧರು, ರಕ್ಷಣಾ ಸಿಬ್ಬಂದಿಗಳು. ಮೈನಡುಗಿಸುವ ಕೇರಳ ಪ್ರವಾಹದ ಭೀಕರ ದೃಶ್ಯಗಳ ನಡುವಲ್ಲಿ ಮಾನವೀಯತೆಯ ಕುರಿತು ಒಂದಷ್ಟು ಭರವಸೆ ಮೂಡಿಸುವವರೆಂದರೆ ಇವರೇ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಪ್ರವಾಹಕ್ಕೆ ಸಿಕ್ಕಿದ ನೂರಾರು ಜನರನ್ನು ತಮ್ಮ ಹತ್ತಿರದ ಬಂಧುಗಳೋ, ಒಡಹುಟ್ಟಿದವರೋ, ತಂದೆ-ತಾಯಿಯೋ, ಮಕ್ಕಳೋ ಎಂಬಷ್ಟು ಆಸ್ಥೆಯಿಂದ, ಬಾಚಿ, ತಬ್ಬಿ ಕಾಪಾಡಿದ ಆ ಎಲ್ಲ ಸಿಬ್ಬಂದಿಗೂ ನಮ್ಮ ನೂರು ನಮನ. ಈ ಸಿಬ್ಬಂದಿಗಳ ಸಾಹಸದ ಬದುಕು, ಪವಾಡ ಸೃಷ್ಟಿಸಬಲ್ಲ ಅವರ ಮಾಂತ್ರಿಕ ಶಕ್ತಿಯ ಕೆಲವು ವಿಡಿಯೋಗಳು ಇಲ್ಲಿವೆ. ನೋಡಿ.

Array

ಆಗಸದಿಂದ ಆಹಾರ ಪೂರೈಕೆ!

ಪ್ರವಾಹ ಪೀಡಿತ ಕೊಚ್ಚಿಯಲ್ಲ ಸಂತ್ರಸ್ತರಿಗೆ ಆಹಾರ ಒದಗಿಸುತ್ತಿರುವ ಭಾರತೀಯ ವಾಯುಪಡೆಯ ಸಿಬ್ಬಂದಿ.

ಕೊಡಗು ಜಿಲ್ಲೆಯಾದ್ಯಂತ 3ಸಾವಿರಕ್ಕೂ ಅಧಿಕ ಸಂತ್ರಸ್ತರ ರಕ್ಷಣೆಕೊಡಗು ಜಿಲ್ಲೆಯಾದ್ಯಂತ 3ಸಾವಿರಕ್ಕೂ ಅಧಿಕ ಸಂತ್ರಸ್ತರ ರಕ್ಷಣೆ

Array

ಇಂಥವರ ಋಣ ತೀರಿಸುವವರ್ಯಾರು?

ಎನ್ ಡಿಆರ್ ಎಫ್ ಸಿಬ್ಬಂದಿಯೊಬ್ಬರು ವೃದ್ಧರೊಬ್ಬರನ್ನು ಕಾಪಾಡುತ್ತಿರುವ ಈ ದೃಶ್ಯವಂತೂ ಕೆಲಹೊತ್ತು ರೋಮಾಂಚನಗೊಳಸೀತು!

ಹಾರದ ಹೆಲಿಕಾಪ್ಟರ್‌: ರಸ್ತೆ ಮೂಲಕ ಪ್ರವಾಹ ಸಮೀಕ್ಷೆಗೆ ಸಿಎಂ ನಿರ್ಧಾರಹಾರದ ಹೆಲಿಕಾಪ್ಟರ್‌: ರಸ್ತೆ ಮೂಲಕ ಪ್ರವಾಹ ಸಮೀಕ್ಷೆಗೆ ಸಿಎಂ ನಿರ್ಧಾರ

Array

ವಾಯುಸೇನೆಯ ನೆರವಿನಿಂದ ಪ್ರವಾಹದಿಂದ ಪಾರಾದ ವ್ಯಕ್ತಿ

ಪ್ರವಾಹಕ್ಕೆ ಸಿಕ್ಕ ವ್ಯಕ್ತಿಯೋರ್ವನನ್ನು ಹೆಲಿಕಾಪ್ಟರ್ ಮೂಲಕ ಎತ್ತಿ ಕಾಪಾಡಿದ ಭಾರತೀಯ ವಾಯು ಸೇನೆ. ಈ ಘಟನೆ ನಡೆದಿದ್ದು ಕೇರಳದ ಪಠನಂತಿಟ್ಟ ಜಿಲ್ಲೆಯಲ್ಲಿ.

ಹೆಚ್ಚುವರಿ ಸೇನಾಪಡೆ: ರಕ್ಷಣಾ ಸಚಿವೆ ನಿರ್ಮಲಾ ಜತೆ ಎಚ್ಡಿಕೆ ಚರ್ಚೆ ಹೆಚ್ಚುವರಿ ಸೇನಾಪಡೆ: ರಕ್ಷಣಾ ಸಚಿವೆ ನಿರ್ಮಲಾ ಜತೆ ಎಚ್ಡಿಕೆ ಚರ್ಚೆ

ಇವರದೆಂಥ ನಿಸ್ವಾರ್ಥ ಬದುಕು!

ಕೇರಳದ ಪಾಲಕ್ಕಾಡ್ ನ ಮಂಗಲಮ್ ಡ್ಯಾಮ್ ಬಳಿಯ ಹಳ್ಳಿಯೊಂದರಲ್ಲಿ ಪ್ರವಾಹಕ್ಕೆ ಸಿಕ್ಕು, ನಂತರ ಸಂತ್ರಸ್ತ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿರುವ ಜನರಿಗೆ ಆಹಾರ ಒದಗಿಸುತ್ತಿರುವ ಸಿಬ್ಬಂದಿ!

ಪ್ರವಾಹದಿಂದ ರಕ್ಷಣೆ

ಕರ್ನಾಟಕದ ಕೊಡಗು ಜಿಲ್ಲೆಯಾದ್ಯಂತ ತಲೆದೋರಿದ ಪ್ರವಾಹ ಸ್ಥಿತಿಯಿಂದ ಕೊಡಗು ಜನತೆ ಚಿಂತಾಕ್ರಾಂತವಾಗಿದೆ. ಈ ನಡುವೆ ಪ್ರವಾಹದಲ್ಲಿ ಸಿಕ್ಕ ಕೆಲವರನ್ನು ಎನ್ ಡಿಆರ್ ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ) ಮತ್ತು ಪೊಲೀಸ್ ಸಿಬ್ಬಂದಿ ಕಾಪಾಡಿದ ಪರಿ ಇದು!

ಉಳಿಯಿತು ಮುದ್ದು ಮಗುವಿನ ಜೀವ

ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಯೊಬ್ಬರು ಕೇರಳದ ಪ್ರವಾಹ ಪೀಡಿತ ಅಳುವಾ ಪ್ರದೇಶದಲ್ಲಿ ಹೆಲಿಕಾಪ್ಟರ್ ನೆರವಿನಿಂದ ಮಗುವನ್ನು ಕಾಪಾಡಿದ ದೃಶ್ಯ.

English summary
Kerala and Karnataka floods: After heavey rain in Kerala and Karnataka, more than 320 people died so far in Kerala. NDRF, Indian Army, and also police forces are restlessly involve in relief operations. They are saving thounsands of lives miraculously. Here are few viral videos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X