ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ರಾಷ್ಟ್ರಗೀತೆಗೆ ಸ್ತಬ್ಧವಾಗುವ ಅಪರೂಪದ ನಗರ

|
Google Oneindia Kannada News

ಜಮ್ಮಿಕುಂಟ(ತೆಲಂಗಾಣ), ಮೇ 30: ಅದು ಜನಜಂಗುಳಿಯಿಂದ ಸದಾ ಗಿಜುಗುಡುವ ಒಂದು ಸಣ್ಣ ಪಟ್ಟಣ. ಹೆಸರು ಜಮ್ಮಿಕುಂಟ. ತೆಲಂಗಾಣದ ಕರೀಮ್ ನಗರದಲ್ಲಿರುವ ಈ ಪಟ್ಟಣ ದೇಶಭಕ್ತಿಗೆ ಮತ್ತೊಂದು ಹೆಸರು!

Viral Video: Jammikunta a town is a good example for patriotism

ಹೌದು, ಇಲ್ಲಿ ದಿನವೂ ಬೆಳಿಗ್ಗೆ 7:54 ಇಲ್ಲಿ 16 ಲೌಡ್ ಸ್ಪೀಕರ್ ಗಳಿಂದ 'ಜನಗಣಮನ...' ರಾಷ್ಟ್ರಗೀತೆ ಮೊಳಗುತ್ತದೆ. ರಸ್ತೆಯಲ್ಲಿ ತರಾತುರಿಯಲ್ಲಿ ನಡೆದುಹೋಗುತ್ತಿದ್ದ ಜನ, ವಾಹನಗಳು, ಕೆಲಸದಲ್ಲಿ ನಿರತರಾದವರು, ಶಾಲೆಗೆ ಹೊರಟ ಮಕ್ಕಳು, ಹಾಲು ಮಾರುವ ವೃದ್ಧ, ಪೇಪರ್ ಮಾರುವ ಹುಡುಗ ಸೇರಿದಂತೆ ಎಲ್ಲರೂ ಸುಮಧುರ ಕಂಠದಲ್ಲಿ ಮೊಳಗುವ ರಾಷ್ಟ್ರಗೀತೆಯನ್ನು ಕೇಳುತ್ತಿದ್ದಂತೆಯೇ ಸೆಲ್ಯೂಟ್ ಹೊಡೆದು ನಿಂತುಬಿಡುತ್ತಾರೆ!

ರಾಷ್ಟ್ರಗೀತೆ ಮೊಳಗುವ ಆ 48 ರಿಂದ 52 ಸೆಕೆಂಡ್ ಗಳ ಕಾಲ ಇಡೀ ಪಟ್ಟಣವೂ ಸ್ತಬ್ಧ! ಇಡೀ ಪಟ್ಟಣವನ್ನೂ 52 ಸೆಕೆಂಡ್ ಗಳ ಕಾಲ ಹಿಡಿದಿಡುವ ರಾಷ್ಟ್ರಗೀತೆಯ ಶಕ್ತಿಗೆ ಹ್ಯಾಟ್ಸಾಪ್!

ಇಷ್ಟೇ ಅಲ್ಲ, ಈ ಪಟ್ಟಣದಲ್ಲಿ ಪ್ರತಿದಿನ 16 ಕಡೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ಗೌರವ ಸಲ್ಲಿಸಲಾಗುತ್ತದೆ.

English summary
Viral Video: Jammikunta, a small town in Telangana has set an example of patriotism to the nation. Every morning , National Anthem is played by 16 loud speakers around. All the people stay still and salute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X