ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಫೋಟೋ; ವಿಮಾನದಲ್ಲೂ ಮೋದಿ ಕೆಲಸದಲ್ಲಿ ಬ್ಯುಸಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23; ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಬುಧವಾರ ನದೆಹಲಿಯಿಂದ ಹೊರಟಿದ್ದ ಏರ್ ಇಂಡಿಯಾ ಒನ್ ವಿಮಾನ ವಾಷಿಂಗ್ಟನ್ ಡಿಸಿಯಲ್ಲಿ ಲ್ಯಾಂಡ್ ಆಗಿದೆ.

ಸೆಪ್ಟೆಂಬರ್ 22ರಿಂದ 25ರ ತನಕ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಭೇಟಿಯಾಗಲಿದ್ದಾರೆ. ವಾಷಿಂಗ್ಟನ್‌ ಡಿಸಿಯಲ್ಲಿ ಮೋದಿಗೆ ಭಾರತೀಯರು ಸುರಿಯುವ ಮಳೆಯ ನಡುವೆಯೇ ಮೋದಿಗೆ ಅದ್ದೂರಿ ಸ್ವಾಗತವನ್ನು ಕೋರಿದರು.

'ಏರ್ ಇಂಡಿಯಾ ಒನ್‌'ನಲ್ಲಿ ಮೊದಲ ಅಮೆರಿಕ ಪ್ರವಾಸ ಕೈಗೊಂಡ ಮೋದಿ'ಏರ್ ಇಂಡಿಯಾ ಒನ್‌'ನಲ್ಲಿ ಮೊದಲ ಅಮೆರಿಕ ಪ್ರವಾಸ ಕೈಗೊಂಡ ಮೋದಿ

ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಭಾರತೀಯರ ಜೊತೆ ಮಾತುಕತೆ ಮೋದಿ ನಡೆಸಿದರು. ಮಾಸ್ಕ್ ಧರಿಸದೇ, ಭಾರತೀಯರ ಕೈ ಕುಲುಕಿ ಮೋದಿ ಸಂತಸಪಟ್ಟರು. ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಅವರು ತೆರಳಿದ್ದು, ಇಂದು ಕ್ವಾಡ್ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ.

ಯುಎಸ್ ಪ್ರವಾಸದ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ: 10 ಪ್ರಮುಖ ಅಂಶಗಳನ್ನು ಓದಿ ಯುಎಸ್ ಪ್ರವಾಸದ ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ: 10 ಪ್ರಮುಖ ಅಂಶಗಳನ್ನು ಓದಿ

Modi

ದೆಹಲಿಯಿಂದ ನರೇಂದ್ರ ಮೋದಿ ಬೋಯಿಂಗ್ 777-3000 ಈಆರ್ ವಿಮಾನ ಏರ್ ಇಂಡಿಯಾ ಒನ್‌ನಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳ ಪ್ರವಾಸಕ್ಕಾಗಿಯೇ ಈ ಐಷಾರಾಮಿ ವಿಮಾನ ಖರೀದಿ ಮಾಡಲಾಗಿದೆ. ಮೊದಲ ಬಾರಿಗೆ ವಿಮಾನದಲ್ಲಿ ಮೋದಿ ದೂರ ಪ್ರಯಾಣ ಕೈಗೊಂಡಿದ್ದಾರೆ.

ಮೋದಿ ಅಮೆರಿಕ ಪ್ರವಾಸ: ತನ್ನ ವಾಯು ಪ್ರದೇಶ ಬಳಸಲು ಪಾಕ್ ಅನುಮತಿಮೋದಿ ಅಮೆರಿಕ ಪ್ರವಾಸ: ತನ್ನ ವಾಯು ಪ್ರದೇಶ ಬಳಸಲು ಪಾಕ್ ಅನುಮತಿ

ಬುಧವಾರ ಹೊರಟ ಪ್ರಧಾನಿ ಮೋದಿ ಅವರಿದ್ದ ವಿಮಾನ ತಡೆ ರಹಿತವಾಗಿ ಸಂಚಾರ ನಡೆಸಿ ವಾಷಿಂಗ್ಟನ್‌ ಡಿಸಿಯಲ್ಲಿ ಸುರಿಯುವ ಮಳೆಯ ನಡುವೆಯೇ ಲ್ಯಾಂಡ್ ಆಗಿದೆ. ದೂರ ಪ್ರಯಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಯವನ್ನು ಹೇಗೆ ಕಳೆದರು?.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿರುವ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೋದಿ ಅಭಿಮಾನಿಗಳು ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Narendra Modi

'A long flight also means opportunities to go through papers and some file work' ಎಂದು ಬರೆದು ವಿಮಾನದಲ್ಲಿ ಕಡತಗಳನ್ನು ಪರಿಶೀಲನೆ ಮಾಡುತ್ತಿರುವ ಫೋಟೋವನ್ನು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಾರ್ಯ ವೈಖರಿ ಹೇಗಿರುತ್ತದೆ? ಎಂಬುದು ಎಲ್ಲರಿಗೂ ತಿಳಿದಿದೆ. ದಿನಕ್ಕೆ 3, 4 ಸಮಾವೇಶ ಉದ್ದೇಶಿಸಿ ಅವರು ಭಾಷಣ ಮಾಡುತ್ತಾರೆ. ಯಾವುದೇ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಾರೆ. ದೂರ ಪ್ರಯಾಣದಲ್ಲಿಯೂ ಮೋದಿ ಇದನ್ನೇ ಮಾಡಿದ್ದಾರೆ. ವಿಮಾನದಲ್ಲಿ ಕಡತಗಳ ಪರಿಶೀಲನೆ ಮಾಡಿದ್ದಾರೆ.

ವಾಷಿಂಗ್ಟನ್‌ ತಲುಪಿದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, "ವಾಷಿಂಗ್ಟನ್‌ನಲ್ಲಿ ಲ್ಯಾಂಡ್ ಆಗಿದ್ದೇನೆ. ಮುಂದಿನ ಎರಡು ದಿನ ಅಮೆರಿಕ ಅಧ್ಯಕ್ಷರಾದ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಭೇಟಿ ಮಾಡಲಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

7ನೇ ಅಮೆರಿಕ ಭೇಟಿ; 2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ಬಳಿಕ 7ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. 2015ರಲ್ಲಿ ಭಾರತ-ಅಮೆರಿಕ ಸಮಯದಾಯದ ಕಾರ್ಯಕ್ರಮ, ಬಳಿಕ ಸಿಲಿಕಾನ್ ವ್ಯಾಲಿ ಭೇಟಿ ಕೈಗೊಂಡಿದ್ದರು. 2019ರಲ್ಲಿ ಹೌಡಿ-ಮೋಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೋದಿ ಇಂದಿನ ಕಾರ್ಯಕ್ರಮ

* ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಒಂದು ಗಂಟೆ ಸಭೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರದ ಬಗ್ಗೆ ಚರ್ಚೆ.

* ಕ್ವಾಡ್ ಸದಸ್ಯ ರಾಷ್ಟ್ರಗಳ ಪ್ರಮುಖರಾದ ಆಸ್ಟ್ರೇಲಿಯಾ ಪ್ರಧಾನಿ, ಜಪಾನ್ ಪ್ರಧಾನಿ ಅವರೊಂದಿಗೆ ಸಭೆ

* ವಾಷಿಂಗ್ಟನ್‌ನಲ್ಲಿ ಜಾಗತಿಕ ಕಂಪನಿಗಳ ಪ್ರಮುಖ ಸಿಇಒಗಳ ಜೊತೆ ಚರ್ಚೆ.

ಶುಕ್ರವಾರ ಪ್ರಧಾನಿ ಮೋದಿ ಕ್ವಾಡ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್‌ರನ್ನು ಮೊದಲ ಬಾರಿ ಭೇಟಿ ಮಾಡುತ್ತಿದ್ದಾರೆ.

English summary
How PM Narendra Modi spent time on long flight to the US. Narendra Modi tweeted the photo working on flight went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X