ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಮಿಡಿವ ಕಥೆ: ಜೀವ ಉಳಿಸಿದ ಅರಣ್ಯ ರಕ್ಷಕನ ಹೆಗಲು ಏರಿದ ಮರಿಯಾನೆ

|
Google Oneindia Kannada News

ಚೆನ್ನೈ, ಏಪ್ರಿಲ್.14: ವಿಶ್ವದಾದ್ಯಂತ ಕೊರೊನಾ ವೈರಸ್ ನದ್ದೇ ಸದ್ದು ಗದ್ದಲ. ಎಲ್ಲಲ್ಲೂ ಮಹಾಮಾರಿ ಬಗ್ಗೆ ಜನರು ಮಾತನಾಡುವಂತಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ.

ತಮಿಳುನಾಡಿನಲ್ಲಿ ಅರಣ್ಯ ಇಲಾಖೆ ಗಾರ್ಡ್ ಒಬ್ಬರು ಅಪಾಯದಲ್ಲಿದ್ದ ಮರಿ ಆನೆಯನ್ನು ರಕ್ಷಿಸಿ ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಫೋಟೋವನ್ನು ದೀಪಿಕಾ ಭಾಜಪೈ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಮುಸ್ಲಿಂ ಬಾಂಧವರು ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಮುಸ್ಲಿಂ ಬಾಂಧವರು

ಅಸಲಿಗೆ ಇದು ಇತ್ತೀಚಿಗೆ ನಡೆದ ಘಟನೆಯೂ ಅಲ್ಲ. 2017ರಲ್ಲಿ ಮರಿಯಾನೆ ಕಂದಕಕ್ಕೆ ಉರುಳಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಅಂದು ಅರಣ್ಯ ಸಿಬ್ಬಂದಿ ಪಳನಿಚಾಮಿ ಮರಿಯಾನೆಯನ್ನು ರಕ್ಷಿಸಿದ್ದಾರೆ. ತಮ್ಮ ಹೆಗಲ ಮೇಲೆ ಆ ಮರಿಯಾನೆಯನ್ನು ಹೊತ್ತುಕೊಂಡು ಬಂದು ತಾಯಿ ಆನೆಯ ಜೊತೆಗೆ ಸೇರಿಸಿದ್ದರು.

Viral News: Tamilunadu Forest Guard Carried Elephant Calf On Shoulder

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್:

2017ರಲ್ಲಿ ನಡೆದ ಘಟನೆಯ ಬಗ್ಗೆ ದೀಪಿಕಾ ಭಾಜಪೈ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಮರಿಯಾನೆಯನ್ನು ಹೆಗಲ ಮೇಲೆ ಹೊತ್ತುಕೊಂಡ ಅರಣ್ಯ ಸಿಬ್ಬಂದಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 2 ಸಾವಿರ ಮಂದಿ ಫೋಟೋವನ್ನು ಲೈಕ್ ಮಾಡಿದ್ದು, ಸಾವಿರಾರು ಜನರು ಶೇರ್ ಮಾಡಿದ್ದಾರೆ. ಮರಿಯಾನೆಯನ್ನೇ ಹೆಗಲ ಮೇಲೆ ಹೊತ್ತುಕೊಂಡ ಸಿಬ್ಬಂದಿಯನ್ನು ಈ ಮೊದಲು ಎಲ್ಲಿಯೂ ನೋಡಿರಲಿಲ್ಲ. ಇದೊಂದು ಅಪರೂಪದ ಘಟನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪಳನಿಚಾಮಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

English summary
Viral News: Tamilunadu Forest Guard Carried Elephant Calf On Shoulder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X