ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋದಲ್ಲಿ ಓಡಾಡುವ ಪ್ರಯಾಣಿಕರೇ ದಯವಿಟ್ಟು ಗಮನಿಸಿ

|
Google Oneindia Kannada News

ಬೆಂಗಳೂರು, ಆಗಸ್ಟ್ 29: ಮುಂದಿನ ತಿಂಗಳಿನಿಂದ ಮೆಟ್ರೋ ರೈಲು ಸಂಚಾರ ದೇಶದ ಅನೇಕ ಕಡೆ ಮತ್ತೆ ಶುರುವಾಗುವ ಸಾಧ್ಯತೆ ಇದೆ. ನಗರದೊಳಗಿನ ದೂರದ ಸ್ಥಳಗಳಿಗೆ ತೆರಳಲು ಪರದಾಡುತ್ತಿರುವ ಪ್ರಯಾಣಿಕರು ಇದರಿಂದ ತುಸು ನಿರಾಳರಾಗಬಹುದು. ಹಾಗೆಂದು ಅವರು ಮೈಮರೆಯುವಂತಿಲ್ಲ. ಏಕೆಂದರೆ ಮೆಟ್ರೋ ರೈಲುಗಳು ಕೊರೊನಾ ವೈರಸ್ ಹರಡುವ ಪ್ರಮುಖ ಜಾಗಗಳಾಗಬಹುದು. ಹಾಗೆಯೇ ಪ್ರಯಾಣಿಕರು ಮುಂಜಾಗ್ರತೆಯ ನಿಯಮಗಳನ್ನು ಪಾಲಿಸದೆ ಇದ್ದರೆ ದೊಡ್ಡ ಮೊತ್ತದ ದಂಡ ಪಾವತಿಸುವ ಕಷ್ಟಕ್ಕೂ ಸಿಲುಕಬಹುದು.

Recommended Video

Metro ಸಂಚಾರ ಆರಂಭ! | Oneindia Kannada

ಮಾಸ್ಕ್ ಇಲ್ಲದೆ ಪ್ರಯಾಣ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಖಾಲಿ ಇರಿಸುವಂತೆ ಸೂಚಿಸಲಾಗಿರುವ ಸೀಟುಗಳಲ್ಲಿ ಕೂರುವುದು, ರೈಲು ಅಥವಾ ಪ್ಲಾಟ್‌ಫಾರ್ಮ್‌ಗಳಲ್ಲಿ ಉಗುಳುವುದು ಇವುಗಳು ಭಾರಿ ದಂಡಕ್ಕೆ ಆಹ್ವಾನ ನೀಡಬಹುದು.

ಸೆ.1ರಿಂದ ನಮ್ಮ ಮೆಟ್ರೋ ಸಂಚಾರ; ಪ್ರಯಾಣಿಕರಿಗೆ ಸೂಚನೆ ಸೆ.1ರಿಂದ ನಮ್ಮ ಮೆಟ್ರೋ ಸಂಚಾರ; ಪ್ರಯಾಣಿಕರಿಗೆ ಸೂಚನೆ

ದೆಹಲಿ ಮೆಟ್ರೋದಲ್ಲಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಿದ್ದಾರೆ. ಕೋವಿಡ್-19 ಹರಡುವಂತಹ ಯಾವುದೇ ರೀತಿಯ ನಿಯಮ ಉಲ್ಲಂಘನೆ ಕಂಡುಬಂದರೂ ದಂಡ ವಿಧಿಸಲು ಹಿಂದೇಟು ಹಾಕುವುದಿಲ್ಲ. ಮೊದಲ ಬಾರಿ ತಪ್ಪು ಎಸಗಿದರೆ 500 ರೂ ದಂಡ ವಿಧಿಸಲಾಗುತ್ತದೆ. ತಪ್ಪು ಮರುಕಳಿಸಿದರೆ ದಂಡದ ಮೊತ್ತವೂ ಹೆಚ್ಚಾಗಲಿದೆ. ಮುಂದೆ ಓದಿ.

ಮೆಟ್ರೋ ಆರಂಭಕ್ಕೆ ತಯಾರಿ

ಮೆಟ್ರೋ ಆರಂಭಕ್ಕೆ ತಯಾರಿ

ಬೆಂಗಳೂರು ಮತ್ತು ದೆಹಲಿಗಳಲ್ಲಿ ಈಗಾಗಲೇ ಮೆಟ್ರೋ ಸಂಚಾರ ಪುನರಾರಂಭಕ್ಕೆ ಸಿದ್ಧತೆ ನಡೆದಿದೆ. ಮೆಟ್ರೋ ಮಾರ್ಗಗಳು, ನಿಲ್ದಾಣದಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸುತ್ತಿದ್ದು, ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಮುಂದಿನ ಅನ್‌ಲಾಕ್ ನಿರ್ಧಾರಗಳು ಪ್ರಕಟಗೊಂಡ ಬಳಿಕ ಸೆ. 1ರಿಂದ ಮೆಟ್ರೋ ಸಂಚಾರ ಶುರುವಾಗಲಿದೆ ಎನ್ನಲಾಗಿದೆ.

ಗಲೀಜು ಮಾಡಿದರೆ ದಂಡ

ಗಲೀಜು ಮಾಡಿದರೆ ದಂಡ

ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಸಿದ್ಧಪಡಿಸಿರುವ ಮಾರ್ಗದರ್ಶಿಗಳನ್ನು ಮೆಟ್ರೋ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು. ಯಾವುದೇ ಪ್ರಯಾಣಿಕರು ಉಗುಳುವ ಅಥವಾ ಗಲೀಜು ಮಾಡುವ ಕೃತ್ಯ ಕಂಡುಬಂದರೆ ಅವರಿಗೆ ದಂಡ ವಿಧಿಸಲಾಗುವುದು. ಮಾಸ್ಕ ಧರಿಸದೆ ಇರುವುದು, ಖಾಲಿ ಬಿಡಬೇಕಾದ ಆಸನಗಳಲ್ಲಿ ಕೂರುವುದು ಅಥವಾ ಉದ್ದೇಶಪೂರ್ವಕವಾಗಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡುವುದು ಮುಂತಾದ ನಿಯಮ ಪಾಲನೆ ನಡೆಯದೆ ಇದ್ದರೆ ಅವರಿಗೂ ದಂಡ ಹಾಕಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಯಾಣಿಕರ ಸಂಖ್ಯೆ ಇಳಿಕೆ

ಪ್ರಯಾಣಿಕರ ಸಂಖ್ಯೆ ಇಳಿಕೆ

ಸಾಮಾನ್ಯ ದಿನದಲ್ಲಿ ಪ್ರತಿ ಟ್ರಿಪ್‌ಗೆ 1 ಸಾವಿರ ಜನರು ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸುತ್ತಿದ್ದರು. ಆದರೆ ಈಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಪ್ರತಿ ಸಂಚಾರದಲ್ಲಿನ ಪ್ರಯಾಣಿಕರ ಸಂಖ್ಯೆಗೆ ಮಿತಿ ಹಾಕಲಾಗುತ್ತದೆ.

ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು

ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು

ನಮ್ಮ ಮೆಟ್ರೋದ ಎಲ್ಲ ರೈಲು ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಪ್ರಯಾಣಿಕರು ರೈಲಿನಲ್ಲಿ ಸಂಚಾರ ನಡೆಸಬೇಕಾದರೆ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಪಾಡಲು ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಆರೋಗ್ಯ ಸೇತು ಆಪ್ ಕಡ್ಡಾಯ

ಆರೋಗ್ಯ ಸೇತು ಆಪ್ ಕಡ್ಡಾಯ

ಮೆಟ್ರೋದಲ್ಲಿ ಸಂಚಾರ ನಡೆಸುವ ಜನರು ಸಾಮಾನ್ಯವಾಗಿ ಸ್ಮಾರ್ಟ್‌ ಫೋನ್ ಹೊಂದಿರುತ್ತಾರೆ. ಆದ್ದರಿಂದ, ಎಲ್ಲಾ ಪ್ರಯಾಣಿಕರಿಗೆ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಜತೆಗೆ ಟೋಕನ್ ಬದಲು ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳ ಬಳಕೆಗೆ ಮನವಿ ಮಾಡಲಾಗಿದೆ.

English summary
Metro services may resume from next month with strict rules. Violating any norms may attract heafty fines from the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X