ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ ಹಿಡಿದ ನಾಸಾ

|
Google Oneindia Kannada News

ನವದೆಹಲಿ, ಡಿಸೆಂಬರ್ 03 : ಭಾರತದ ಚಂದ್ರಯಾನ- 2 ಯೋಜನೆಯ 'ವಿಕ್ರಮ್ ಲ್ಯಾಂಡರ್' ಚಂದ್ರನ ಮೇಲೆ ಪತನಗೊಂಡಿತ್ತು. ನಾಸಾ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರವನ್ನು ಸೆರೆ ಹಿಡಿದಿದ್ದು, ಬಿಡುಗಡೆ ಮಾಡಿದೆ.

ಅಮೆರಿಕದ ದಿ ಲೂನಾರ್‌ ರಿಕಾನೈಸೆನ್ಸ್‌ ಆರ್ಬಿಟರ್‌ (ಎಲ್‌ಆರ್‌ಓ) ಉಪಗ್ರಹ ಸೆರೆಹಿಡಿದಿರುವ ಚಂದ್ರನ ದಕ್ಷಿಣ ಧ್ರುವದ ಚಿತ್ರಗಳಲ್ಲಿ ವಿಕ್ರಮ್‌ ಲ್ಯಾಂಡರ್‌ ಪತನಗೊಂಡ ಸ್ಥಳ ಪತ್ತೆಯಾಗಿದೆ. ಈ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ.

ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ? ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?

ವಿಕ್ರಮ್ ಲ್ಯಾಂಡರ್ ಪತನಗೊಂಡ ಬಳಿಕ ಅದರ ಭಾಗಗಳು 24 ವಿವಿಧ ಸ್ಥಳಗಳಲ್ಲಿ ಚದುರಿ ಹೋಗಿವೆ. ಕೆಲವು ಕಿಲೋಮೀಟರ್ ತನಕ ಬಿಡಿಭಾಗಗಳು ಹರಡಿಕೊಂಡಿರುವುದು ಚಿತ್ರದ ಮೂಲಕ ತಿಳಿದು ಬರುತ್ತಿದೆ ಎಂದು ನಾಸಾ ಹೇಳಿದೆ.

ಚಂದ್ರಯಾನ 2 ಲ್ಯಾಂಡರ್ ವಿಕ್ರಮ್ ವೈಫಲ್ಯಕ್ಕೆ ಏನು ಕಾರಣ? ಚಂದ್ರಯಾನ 2 ಲ್ಯಾಂಡರ್ ವಿಕ್ರಮ್ ವೈಫಲ್ಯಕ್ಕೆ ಏನು ಕಾರಣ?

Vikram Lander

2019ರ ಸೆಪ್ಟೆಂಬರ್ 7ರಂದು ಮುಂಜಾನೆ 1.55ಕ್ಕೆ ಚಂದ್ರನ ಮೇಲೆ ಇಳಿಯುವ ಕೊನೆ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಈ ಮೂಲಕ ಭಾರತದ ಮಹತ್ವದ ಚಂದ್ರಯಾನ -2 ಯೋಜನೆ ಕೊನೆ ಕ್ಷಣದಲ್ಲಿ ವಿಫಲಾಗಿತ್ತು.

ನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರ ನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಕುಳಿತು ಚಂದ್ರಯಾನ -2 ಯೋಜನೆಯನ್ನು ವೀಕ್ಷಣೆ ಮಾಡುತ್ತಿದ್ದರು. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ 2.17ಕ್ಕೆ ಪ್ರಕಟಿಸಿದ್ದರು.

ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳ ಹೇಗಿದೆ? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ನಾಸಾ ಈಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರವನ್ನು ಸೆರೆ ಹಿಡಿದಿದೆ. ನಾಸಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಅಪ್‌ಲೋಡ್ ಮಾಡಲಾಗಿದೆ.

ಅಂದು ಏನಾಗಿತ್ತು? : ವಿಕ್ರಮ್ ಲ್ಯಾಂಡರ್ ಸೆಪ್ಟೆಂಬರ್ 7ರ ಮುಂಜಾನೆ 1.38ಕ್ಕೆ ಲ್ಯಾಂಡರ್ ಗಗನನೌಕೆಯಿಂದ ಕಳಚಿಕೊಂಡಿತ್ತು. ಚಂದ್ರನ ದಕ್ಷಿಣ ಭಾಗದ ಮೇಲ್ಮೈ ಸನಿಹಕ್ಕೆ ಬಂದಿತ್ತು. ಕೊನೆಯ ಕ್ಷಣದಲ್ಲಿ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು.

ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 600 ಕಿ. ಮೀ. ದೂರದಲ್ಲಿ ವಿಕ್ರಮ್ ಲ್ಯಾಂಡರ್ ಪತನಗೊಂಡು ಅಪ್ಪಳಿಸಿರಬಹುದು ಎಂದು ಅಂದಾಜಿಸಲಾಗಿತ್ತು. ನಾಸಾ ಈಗ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಪತ್ತೆ ಹಚ್ಚಿದೆ.

English summary
The Vikram lander that crashed on the lunar surface has been found by a NASA. Image taken by Lunar Reconnaissance Orbiter (LRO) released by NASA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X