• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಸೆಂಬರ್ 16 ವಿಜಯ್ ದಿವಸ್; ಹಿನ್ನಲೆ ತಿಳಿಯಿರಿ

|
Google Oneindia Kannada News

ನವದೆಹಲಿ, ಡಿಸೆಂಬರ್ 15; 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ಭಾರತದ ವಿಜಯದ ನೆನಪಿಗಾಗಿ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ. ಡಿಸೆಂಬರ್ 3ರಂದು ಆರಂಭವಾದ ಯುದ್ಧ ಡಿಸೆಂಬರ್ 16ರಂದು ಅಂತ್ಯಗೊಂಡಿತು.

ಈ ಯುದ್ಧದ ಸಮುದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ನಮನ ಸಲ್ಲಿಸಲು ವಿಜಯ್ ದಿವಸ್ ಅನ್ನು ಪ್ರತಿವರ್ಷದ ಡಿಸೆಂಬರ್ 16ರಂದು ಆಚರಿಸಲಾಗುತ್ತದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ಬಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಬೇಷರತ್‌ ಆಗಿ ಶರಣಾದರು.

ಭಾರತದಲ್ಲಿ 21ನೇ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಸಂಭ್ರಮ ಭಾರತದಲ್ಲಿ 21ನೇ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಸಂಭ್ರಮ

ಈ ಯುದ್ಧಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಪಾಕಿಸ್ತಾನದ ಸೈನಿಕರು ಪೂರ್ವ ಪಾಕಿಸ್ತಾನದ ಜನರನ್ನು ಶೋಷಿಸುತ್ತಿದ್ದರು. ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದರು, ಜನರನ್ನು ಕೊಂದು ಹಾಕುತ್ತಿದ್ದರು.

ಪೊಲೀಸ್ ಪೇದೆಯಾಗಿದ್ದ ಕಾರ್ಗಿಲ್ ವೀರನನ್ನು ಕೊನೆಗೂ ಗುರುತಿಸಿದ ಸರ್ಕಾರಪೊಲೀಸ್ ಪೇದೆಯಾಗಿದ್ದ ಕಾರ್ಗಿಲ್ ವೀರನನ್ನು ಕೊನೆಗೂ ಗುರುತಿಸಿದ ಸರ್ಕಾರ

1971ರ ಯುದ್ಧ ಅಂತ್ಯದಲ್ಲಿ ಭಾರತ ಪೂರ್ವ ಪಾಕಿಸ್ತಾನದ ಬೆಂಬಲಕ್ಕೆ ನಿಂತಿತು. ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವಾಗಿ ಮಾಡಲಾಯಿತು. ವಿಜಯ್ ದಿವಸ್ ಅಂಗವಾಗಿ ಕೋಲ್ಕತ್ತಾದಲ್ಲಿರುವ ಈಸ್ಟರ್ನ್ ಕಮಾಂಡ್ ಹೆಡ್ ಕ್ವಾರ್ಟರ್ಸ್ ಪೋರ್ಟ್‌ ಮಿಲಿಯಂನಲ್ಲಿ ವಿಜಯ್ ಸ್ಮಾರಕ್‌ನಲ್ಲಿ ಮಾಲಾರ್ಪಣೆ ನಡೆಯುತ್ತದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ.

ಕಾರ್ಗಿಲ್ ವಿಜಯ್ ದಿವಸಕ್ಕೆ ಇಪ್ಪತ್ತು; ದೇಶ ಕಾಯುವ ಯೋಧರಿಗೆ ವಂದೇ ಕಾರ್ಗಿಲ್ ವಿಜಯ್ ದಿವಸಕ್ಕೆ ಇಪ್ಪತ್ತು; ದೇಶ ಕಾಯುವ ಯೋಧರಿಗೆ ವಂದೇ

ಜನರಲ್ ಅಯೂಬ್ ಖಾನ್‌ನ ಮಿಲಿಟರಿ ಆಡಳಿತ ಬಗ್ಗೆ ಪೂರ್ವ ಪಾಕಿಸ್ತಾನದಲ್ಲಿ ಅಸಮಾಧಾನವಿತ್ತು. 1971ರ ಡಿಸೆಂಬರ್ 3ರಂದು ಭಾರತ ಸರ್ಕಾರ ಪೂರ್ವ ಪಾಕಿಸ್ತಾನದ ಜನರ ಹಕ್ಕುಗಳ ರಕ್ಷಣೆಗಾಗಿ ಪಾಕಿಸ್ತಾನದ ಮೇಲೆ ಯುದ್ಧ ನಡೆಸುವಂತೆ ಸೇನೆಗೆ ಆದೇಶ ನೀಡಿತು.

ಫೀಲ್ಡ್ ಮಾರ್ಷಕ್ ಮಾಣಿಕ್ ಷಾ ನೇತೃತ್ವದಲ್ಲಿ ಯುದ್ಧ ನಡೆಯಿತು. 1400ಕ್ಕೂ ಅಧಿಕ ಸೈನಿಕರು ಯುದ್ಧದಲ್ಲಿ ಹುತಾತ್ಮರಾದರು. ಡಿಸೆಂಬರ್ 16ರಂದು ಯುದ್ಧ ಅಂತ್ಯಗೊಂಡಿತು. 93 ಸಾವಿರ ಸೈನಿಕರು ಭಾರತೀಯ ಸೇನೆಯ ಮುಂದೆ ಡಾಕಾದಲ್ಲಿ ಶರಣಾದರು.

English summary
On December 3, 1971 a war broke out and lasted 13 days between India and Pakistan. On December 16 Pakistan surrendered to the Indian armed forces. This day is celebrated as Vijay Diwas or victory day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X