ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: 'ತಿತ್ಲಿ' ಚಂಡಮಾರುತದ ಉಗ್ರರೂಪ ನೋಡಿ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 11: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಎದ್ದಿರುವ 'ತಿತ್ಲಿ' ಚಂಡಮಾರುತ ಆಂಧ್ರಪ್ರದೇಶ ಹಾಗೂ ಒಡಿಸ್ಸಾ ಕ್ಕೆ ಭಾರಿ ನಷ್ಟ ತಂದೊಡ್ಡುತ್ತಿದೆ.

ಈಗಾಗಲೇ ಆಂಧ್ರ ಪ್ರದೇಶದಲ್ಲಿ 8 ಜನರನ್ನು ಬಲಿ ಪಡೆದಿರುವ ತಿತ್ಲಿ ಚಂಡಮಾರುತ ಸೌಮ್ಯರೂಪಕ್ಕೆ ಬರುತ್ತಿಲ್ಲ. ತಿತ್ಲಿ ಹೆದರಿಕೆಗೆ ಒರಿಸ್ಸಾದಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.

ಅತ್ಯುಗ್ರ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಬಲಿಅತ್ಯುಗ್ರ ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಬಲಿ

ಭಾರಿ ವೇಗದಲ್ಲಿ ಬೀಡುತ್ತಿರುವ ಚಂಡಮಾರುತದಿಂದ ಕಡಲು ಪ್ರಕ್ಷುಬ್ಧಗೊಂಡಿದೆ. ಚಂಡಮಾರುತದ ಭೀಕರ ಹೊಡೆತಕ್ಕೆ ಸಿಕ್ಕಿ ಹಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿವೆ.

ಸಾಗರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಾಗಿದೆ. ಭಾರಿ ಮಳೆ-ಗಾಳಿಯಿಂದ ಒರಿಸ್ಸಾದಲ್ಲಿ ಭೂ ಕುಸಿತ ಉಂಟಾಗಿದೆ. ತಿತ್ಲಿಯ ಆರ್ಭಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತಿವೆ.

14 ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ನಿಯೋಜನೆ

ಒರಿಸ್ಸಾ ಸರ್ಕಾರವು 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವವರನ್ನು ರಕ್ಷಿಸಲು ನಿಯೋಜಿಸಿದೆ. ಪುರಿ, ಕೇಂದ್ರಪರ, ಭದ್ರಕ್‌ ಮುಂತಾದ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದೆ.

Array

ವೇಗ ಹೆಚ್ಚಿಸಿಕೊಳ್ಳುತ್ತಿರುವ ಚಂಡಮಾರುತ

ತಿತ್ಲಿ ಚಂಡಮಾರುತವು ಪ್ರತಿ ಗಂಟೆಗೂ ವೇಗ ಹೆಚ್ಚಿಸಿಕೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ವರದಿ ಮಾಡುತ್ತಿದ್ದು, ತೀವ್ರದಿಂದ ಅತಿತೀವ್ರ ಚಂಡಮಾರುತವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಹೇಳಿರುವುದು ಜನರನ್ನು ಆತಂಕಕ್ಕೆ ಈಡು ಮಾಡಿದೆ.

ತಿತ್ಲಿ ಚಂಡಮಾರುತ: ವೈರಲ್ ಆಯ್ತು ಭಯಂಕರ ವಿಡಿಯೋತಿತ್ಲಿ ಚಂಡಮಾರುತ: ವೈರಲ್ ಆಯ್ತು ಭಯಂಕರ ವಿಡಿಯೋ

145 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ

ಒರಿಸ್ಸಾದಲ್ಲಿ ಚಂಡಮಾರುತದ ವೇಗ ಗಂಟೆಗೆ 145 ಕಿ.ಮೀ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ವೇಗ ಇನ್ನೂ ಹೆಚ್ಚಾಗಬಹುದು ಎಂಬ ಮುನ್ಸೂಚನೆಯೂ ಇದೆ. ಒರಿಸ್ಸಾದಲ್ಲಿ ಭಾರಿ ಮಳೆ ಸಹ ಆಗುತ್ತಿದ್ದು ಚಂಡಮಾರುತದ ತೀವ್ರತೆ ಕಡಿಮೆ ಆಗಲು ಇನ್ನೂ ಕೆಲವು ದಿನಗಳು ಬೇಕು ಎಂದಿದೆ ಇಲಾಖೆ.

Array

ಪಶ್ಚಿಮ ಬಂಗಾಳಕ್ಕೆ ನುಗ್ಗಲಿದೆ ಚಂಡಮಾರುತ

ಇನ್ನು 24 ಗಂಟೆಗಳಲ್ಲಿ ಚಂಡಮಾರುತವು ಉತ್ತರ ಆಂಧ್ರಪ್ರದೇಶ ಹಾಗೂ ಒರಿಸ್ಸಾದಿಂದ ಪಶ್ಚಿಮ ಬಂಗಾಳ ರಾಜ್ಯದ ಕಡೆಗೆ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಹ ನೀಡಲಾಗಿದೆ.

ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾ-ಆಂಧ್ರದಲ್ಲಿ ಹೈಅಲರ್ಟ್ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾ-ಆಂಧ್ರದಲ್ಲಿ ಹೈಅಲರ್ಟ್

Array

ಒರಿಸ್ಸಾದ ಎಲ್ಲ ಜಿಲ್ಲೆಗಳಲ್ಲೂ ಹೈ-ಅಲರ್ಟ್‌

ಒರಿಸ್ಸಾದಲ್ಲಿ ಈ ವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಆದರೂ ಸಹ ಎಲ್ಲ ಜಿಲ್ಲೆಗಳಲ್ಲೂ ಹೈ-ಅಲರ್ಟ್‌ ಘೋಷಿಸಲಾಗಿದೆ.

ಮಂಗಳೂರಿನಲ್ಲಿ ಏಕಾಏಕಿ ಪ್ರಕ್ಷುಬ್ಧಗೊಂಡ ಕಡಲು: ತಿತ್ಲಿ ಪ್ರಭಾವ?ಮಂಗಳೂರಿನಲ್ಲಿ ಏಕಾಏಕಿ ಪ್ರಕ್ಷುಬ್ಧಗೊಂಡ ಕಡಲು: ತಿತ್ಲಿ ಪ್ರಭಾವ?

English summary
Video: titli cyclone creating havoc in Andhra Pradesh and Odisha states. cyclone likely to enter West Bengal in 24 hours. Odisha gave red alert to all districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X