ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಡೊಳ್ಳು ಬಾರಿಸುತ್ತಾ ಡ್ಯಾನ್ಸ್‌ ಮಾಡಿದ ರಾಹುಲ್ ಗಾಂಧಿ

|
Google Oneindia Kannada News

ರಾಯ್ಪುರ, ಡಿಸೆಂಬರ್ 27: ಜಾರ್ಖಂಡ್ ಚುನಾವಣೆ ಮುಗಿಸಿ ಫಲಿತಾಂಶದಿಂದ ಕೊಂಚ ನೆಮ್ಮದಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚತ್ತೀಸ್‌ಘಡದಲ್ಲಿ ನೃತ್ಯ ಮಾಡಿ ಗಮನಸೆಳೆದಿದ್ದಾರೆ.

ಚತ್ತೀಸ್‌ಘಡ ರಾಜ್ಯಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿ ಡೊಳ್ಳು ಮಾದರಿಯ ವಾದ್ಯ ಬಾರಿಸುತ್ತಾ ಸಖತ್ ಸ್ಟೆಪ್ಸ್‌ ಹಾಕಿದ್ದಾರೆ.

ಚತ್ತೀಸ್‌ಘಡದಲ್ಲಿ ಆಯೋಜಿಸಲಾಗಿರುವ ಬುಡಕಟ್ಟು ಉತ್ಸವ-2017 ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಇಂದು ಉದ್ಘಾಟನೆ ಮಾಡಿದ್ದಾರೆ.

Video: Rahul Gandhi Dance In Trible Fest Chhattisgarh

ಉದ್ಘಾಟನೆಗೆ ವೇದಿಕೆಗೆ ಬರುವ ವೇಳೆ ಆದಿವಾಸಿಗಳ ನೃತ್ಯತಂಡತೊಂದಿಗೆ ಡ್ಯಾನ್ಸ್‌ ಮಾಡುತ್ತಲೇ ವೇದಿಕೆ ಬಂದಿದ್ದಾರೆ. ಅಲ್ಲದೆ ಆದಿವಾಸಿಗಳ ಸಾಂಪ್ರದಾಯಿಕ ಶೈಲಿಯನ್ನು ಅನುಸರಿಸಿ ನರ್ತಿಸಿದ್ದಾರೆ. ರಾಹುಲ್ ಗಾಂಧಿ ಅವರು ನೃತ್ಯ ಮಾಡಿರುವ ವಿಡಿಯೋ ಕೆಲವೇ ನಿಮಿಷಗಳಲ್ಲಿ ಭಾರಿ ವೈರಲ್ ಆಗಿದೆ.

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಅರ್ಧ ದಾರಿಯಲ್ಲೇ ಪೊಲೀಸರು ತಡೆದಿದ್ದೇಕೆ..?ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಅರ್ಧ ದಾರಿಯಲ್ಲೇ ಪೊಲೀಸರು ತಡೆದಿದ್ದೇಕೆ..?

ಸ್ಥಳೀಯ ಆದಿವಾಸಿ ಸಂಪ್ರದಾಯದಂತೆ ತಲೆಗೆ ಎತ್ತಿನ ಕೊಂಬನ್ನು ಹೋಲುವ ಕಿರೀಟ ಧರಿಸಿ, ಆದಿವಾಸಿ ತಂಡದೊಂದಿಗೆ ಕುಣಿಯುತ್ತಾ ವೇದಿಕೆ ಮೇಲೆ ಸುತ್ತು ಹೊಡೆದಿದ್ದಾರೆ. ಅವರು ಮಾತ್ರವಲ್ಲದೆ ಇನ್ನೂ ಕೆಲವು ಕಾಂಗ್ರೆಸ್ ಮುಖಂಡರನ್ನೂ ಕುಣಿಯುವಂತೆ ರಾಹುಲ್ ಪ್ರೇರೇಪಿಸಿದ್ದಾರೆ.

ಚತ್ತೀಸ್‌ಘಡದ ರಾಯ್ಪುರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಆದಿವಾಸಿ ಉತ್ಸವ ನಡೆಯಲಿದೆ. 25 ರಾಜ್ಯಗಳು ಹಾಗೂ ಕೇಂದ್ರಾಡಳಿತ 1350 ಕ್ಕೂ ಹೆಚ್ಚು ಮಂದಿ ಈ ಉತ್ಸವದಲ್ಲಿ ಪ್ರದರ್ಶನ ನೀಡಲಿದ್ದಾರೆ. ಆರು ರಾಷ್ಟ್ರಗಳ ವಿವಿಧ ಕಲಾತಂಡಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

ಮೋದಿ, ಶಾ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದಾರೆ: ರಾಹುಲ್ ಗಾಂಧಿಮೋದಿ, ಶಾ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದಾರೆ: ರಾಹುಲ್ ಗಾಂಧಿ

ಈ ನೃತ್ಯ ಸ್ಪರ್ಧೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದು, ಮದುವೆ ಸಮಾರಂಭ ಅಥವಾ ಶುಭ ಸಂದರ್ಭ, ಕೃಷಿ ಸಂಬಂಧಿ ಕುಣಿತ-ಹಾಡುಗಳು, ಸಾಂಸ್ಕೃತಿಕ ಹಬ್ಬಗಳು ಮತ್ತು ಮುಕ್ತ ಸ್ಪರ್ಧೆ ಈ ನಾಲ್ಕು ವಿಭಾಗಗಳಲ್ಲಿ ಸ್ಪರ್ಧಿಗಳು ನೃತ್ಯ-ಹಾಡು ಪ್ರದರ್ಶಿಸಲಿದ್ದಾರೆ.

English summary
Congress leader Rahul Gandhi dance with tribles in Chhattisgarh. Video of Rahul Gandhi dancing went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X