ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ; ಡಿಕ್ಕಿ ತಪ್ಪಿಸಲು ಹೋಗಿ 35 ಕಿ.ಮೀವರೆಗೂ ಹಿಮ್ಮುಖವಾಗಿ ಚಲಿಸಿದ ರೈಲು

|
Google Oneindia Kannada News

ಡೆಹ್ರಾಡೂನ್, ಮಾರ್ಚ್ 18: ದಿಢೀರನೆ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಉತ್ತರಾಖಂಡದ ಪೂರ್ಣಗಿರಿ ಜನಶತಾಬ್ದಿ ಎಕ್ಸ್‌ಪ್ರೆಸ್ ಸುಮಾರು 35 ಕಿಲೋ ಮೀಟರ್‌ವರೆಗೂ ಹಿಮ್ಮುಖವಾಗಿ ಚಲಿಸಿದ ಸಂಗತಿ ನಡೆದಿದೆ.

ಜಾನುವಾರುಗಳಿಗೆ ಡಿಕ್ಕಿ ತಪ್ಪಿಸಲು ಹೋದ ಸಂದರ್ಭ ಹೀಗಾಗಿದೆ. ಸುಮಾರು 35 ಕಿಲೋ ಮೀಟರ್‌ವರೆಗೂ ರೈಲು ಹಿಮ್ಮುಖವಾಗಿ ಚಲಿಸಿದ್ದು, ನಂತರ ಹಳಿ ಮೇಲೆ ಮಣ್ಣು, ಹೊಟ್ಟು ಹಾಕಿ ರೈಲಿಗೆ ತಡೆಯೊಡ್ಡಲಾಗಿದೆ. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ.

ಗುರುವಾರ ದೆಹಲಿಯಿಂದ ತಾನಕ್ ಪುರಕ್ಕೆ ರೈಲು ಹೊರಟಿತ್ತು. ಖತಿಮಾ- ತಾನಕ್‌ಪುರದ ಸಮೀಪ ಜಾನುವಾರುಗಳು ಹಳಿ ದಾಟುತ್ತಿದ್ದು, ಅವುಗಳಿಗೆ ಡಿಕ್ಕಿ ತಪ್ಪಿಸಲು ದಿಢೀರನೆ ಬ್ರೇಕ್ ಹಾಕಲಾಗಿದೆ. ಆನಂತರ ಹಿಮ್ಮುಖವಾಗಿ ರೈಲು ಚಲಿಸಲು ಆರಂಭವಾಗಿದೆ. ಬಂಬಾಸಾದಿಂದ ಹಿಮ್ಮುಖವಾಗಿ ಚಲಿಸಿ, ಚಕರ್‌ಪುರದಲ್ಲಿ ರೈಲು ನಿಂತಿದೆ.

Video Of Train Runs In Reverse For Several Kms In Uttarakhand

ರೈಲಿನಲ್ಲಿ 60-70 ಪ್ರಯಾಣಿಕರಿದ್ದು, ಅವರನ್ನು ಸುರಕ್ಷಿತವಾಗಿ ಚಕರ್‌ಪುರಕ್ಕೆ ಕರೆತರಲಾಯಿತು. ನಂತರ ಅವರನ್ನು ಬಸ್‌ ಮೂಲಕ ಕಳುಹಿಸಲಾಗಿದೆ. ಈ ಘಟನೆ ನಡೆಯುತ್ತಿದ್ದಂತೆ ಲೋಕೊ ಪೈಲಟ್ ಹಾಗೂ ಗಾರ್ಡ್‌ಇಬ್ಬರನ್ನು ಅಮಾನತು ಮಾಡಲಾಗಿದೆ.

 ವಿಡಿಯೋ; ರೈಲಿಗೆ ಸಿಲುಕುತ್ತಿದ್ದವನನ್ನು ಕೂದಲೆಳೆ ಅಂತರದಲ್ಲಿ ಪಾರು ಮಾಡಿದ ಸಿಬ್ಬಂದಿ ವಿಡಿಯೋ; ರೈಲಿಗೆ ಸಿಲುಕುತ್ತಿದ್ದವನನ್ನು ಕೂದಲೆಳೆ ಅಂತರದಲ್ಲಿ ಪಾರು ಮಾಡಿದ ಸಿಬ್ಬಂದಿ

"ಗುರುವಾರ ಖತಿಮಾ ತಾನಕ್‌ಪುರದ ನಡುವೆ ಈ ಘಟನೆ ಸಂಭವಿಸಿದೆ. ಹಳಿ ತಪ್ಪಿ ಈ ಅವಘಡ ಸಂಭವಿಸಿಲ್ಲ. ಇಬ್ಬರನ್ನು ಅಮಾನತು ಮಾಡಲಾಗಿದೆ" ಎಂದು ಈಶಾನ್ಯ ರೈಲ್ವೆ ಈ ಘಟನೆ ಕುರಿತು ಟ್ವೀಟ್ ಮಾಡಿದೆ. ಕಳೆದ ಶನಿವಾರವೂ ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಬಿದ್ದಿತ್ತು. ಇದಾದ ವಾರದ ನಂತರ ನಡೆಯುತ್ತಿರುವ ಎರಡನೇ ಅವಘಡ ಇದಾಗಿದೆ.

English summary
Purnagiri Janshatabdi Express started running in reverse direction on the railway tracks for a few kilometres after it developed a technical fault in uttarakhand,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X