ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟ ಮಕ್ಕಳಿಗೆ ಯಾಕಿಷ್ಟು ಹೋಂ ವರ್ಕ್; ಮೋದಿಗೆ ಮುದ್ದಾಗಿ ದೂರಿದ ಪುಟಾಣಿ

|
Google Oneindia Kannada News

ನವದೆಹಲಿ, ಜೂನ್ 01: ಕೊರೊನಾ ಸೋಂಕು ಎಷ್ಟೆಲ್ಲಾ ಬದಲಾವಣೆಗೆ ಕಾರಣವಾಗಿಬಿಟ್ಟಿದೆ! ಈ ಸಣ್ಣ ಸೋಂಕು ನಮ್ಮಿಡೀ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುವಂತೆ ಮಾಡಿಬಿಟ್ಟಿದೆ. ದೊಡ್ಡವರದ್ದು ಒಂದು ಆತಂಕವಾದರೆ, ಮಕ್ಕಳ ಮಾನಸಿಕ ಸ್ಥಿತಿ ಮೇಲೂ ಕೊರೊನಾ ಕರಿನೆರಳು ಕಾಣುತ್ತಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆಯಾಗಬಾರದು ಎಂಬ ಕಾರಣಕ್ಕೆ ಆರಂಭಿಸಿರುವ ಆನ್‌ಲೈನ್ ಕ್ಲಾಸ್ ಕಲಿಕೆ ಎಷ್ಟೋ ಮಕ್ಕಳಿಗೆ ಸಮಸ್ಯೆಯಾಗಿಯೂ ಕಾಣುತ್ತಿದೆ. ಹೀಗೆ ಆನ್‌ಲೈನ್ ಕಲಿಕೆ ಹಾಗೂ ಹೋಂ ವರ್ಕ್‌ನಿಂದ ಬೇಸರಗೊಂಡಿರುವ, ಕಾಶ್ಮೀರದ ಆರು ವರ್ಷದ ಪುಟಾಣಿಯೊಬ್ಬಳು ಪ್ರಧಾನಿ ಮೋದಿ ಅವರಿಗೆ ವಿಡಿಯೋ ಮಾಡಿ ಸಂದೇಶ ನೀಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಮೋದಿ ಅವರನ್ನುದ್ದೇಶಿಸಿ ಮಾತನಾಡಿರುವ ಬಾಲಕಿ, "ಮೋದಿ ಸಾಬ್, ನಾನು ಆರು ವರ್ಷದ ಬಾಲಕಿ. ನನಗೆ ಆನ್‌ಲೈನ್‌ನಲ್ಲಿ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಸಣ್ಣ ಮಕ್ಕಳಾದ ನಮಗೂ ಹೆಚ್ಚಿನ ಹೋಂ ವರ್ಕ್ ಕೊಡುತ್ತಿದ್ದಾರೆ. 7-8ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೋಂ ವರ್ಕ್ ಕೊಡಿ. ನಮಗೆ ಯಾಕೆ ಇಷ್ಟು ಹೋಂ ವರ್ಕ್ ಕೊಡಬೇಕು" ಎಂದು ಕೇಳಿದ್ದಾಳೆ.

ಮಕ್ಕಳಿಗೆ ಲಸಿಕೆ ಸುರಕ್ಷಿತವೇ ಅಥವಾ ಅಪಾಯವೇ? ಮಕ್ಕಳ ತಜ್ಞೆ ಡಾ. ಆಶಾ ಬೆನಕಪ್ಪ ನೀಡಿದ ಸಲಹೆಗಳುಮಕ್ಕಳಿಗೆ ಲಸಿಕೆ ಸುರಕ್ಷಿತವೇ ಅಥವಾ ಅಪಾಯವೇ? ಮಕ್ಕಳ ತಜ್ಞೆ ಡಾ. ಆಶಾ ಬೆನಕಪ್ಪ ನೀಡಿದ ಸಲಹೆಗಳು

Video Of Six Year Old Girl Questioning PM Modi Viral In Social Media

ನಮಗೆ ಆನ್‌ಲೈನ್ ಕ್ಲಾಸ್‌ಗಳನ್ನು ಒಂದರ ನಂತರ ಒಂದರಂತೆ ತೆಗೆದುಕೊಳ್ಳುತ್ತಿದ್ದಾರೆ. ಗಣಿತ ಆಗುತ್ತಿದ್ದಂತೆ ಇಂಗ್ಲಿಷ್, ಇಂಗ್ಲಿಷ್ ಆಗುತ್ತಿದ್ದಂತೆ ಕಂಪ್ಯೂಟರ್, ಇವಿಎಸ್... ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೂ ಬಿಡುವೇ ಇರುವುದಿಲ್ಲ ಎಂದು ದೂರಿದ್ದಾಳೆ. ಇಷ್ಟು ಸಣ್ಣ ಮಕ್ಕಳಿಗೆ ಇಷ್ಟು ದೊಡ್ಡ ಕೆಲಸ ಯಾಕೆ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಾಳೆ. ಈ ಪುಟ್ಟ ಹುಡುಗಿ ದೂರಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
Video of six year old Kashmiri girl questioning PM Modi about home work viral in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X