ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಾರ ಮೆಚ್ಚುಗೆ ಪಡೆದ ರಾಹುಲ್-ಪ್ರಿಯಾಂಕಾ ವಿಡಿಯೋ

|
Google Oneindia Kannada News

ಕಾನ್ಪುರ, ಏಪ್ರಿಲ್ 27 : ಅಣ್ಣ 49 ವರ್ಷದ ರಾಹುಲ್ ಗಾಂಧಿ, ತಂಗಿ 47 ವರ್ಷದ ಪ್ರಿಯಾಂಕಾ ವಾದ್ರಾ! ಇವರಿಬ್ಬರ ಬಗ್ಗೆ ವೈಯಕ್ತಿಕ, ರಾಜಕೀಯ, ಸಾರ್ವಜನಿಕ ಅಭಿಪ್ರಾಯಗಳು ಏನೇ ಇರಲಿ, ಇಂದು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಇಬ್ಬರ ಚಿತ್ರ ಮಾತ್ರ ಎಲ್ಲರ ಮನ ಕದ್ದಿದೆ.

ಉತ್ತರ ಪ್ರದೇಶದ ಕಾನ್ಪುರ ಏರ್ಪೋರ್ಟ್ ನಲ್ಲಿ ಇಬ್ಬರು ಅಚಾನಕ್ಕಾಗಿ ಭೇಟಿಯಾಗಿದ್ದಾರೆ. ಇಬ್ಬರೂ ಅನ್ಯೋನ್ಯವಾಗಿರುವುದು, ಕಷ್ಟಸುಖಗಳನ್ನು ಹಂಚಿಕೊಳ್ಳುವುದು, ವಿಚಾರವಿನಿಮಯ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಇಂದಿನ ಭೇಟಿಯಲ್ಲಿ, ತೆಗೆದ ಫೋಟೋದಲ್ಲಿ, ರಾಹುಲ್ ಆಡಿರುವ ಮಾತುಗಳ ವಿಡಿಯೋದಲ್ಲಿ ಏನೋ ವಿಶೇಷತೆಯಿದೆ.

ಚೌಕಿದಾರ್ ಚೋರ್ ಹೈ ಘೋಷಣೆ: ರಾಹುಲ್ ಗಾಂಧಿ ವಿರುದ್ಧ ಪ್ರಕರಣ ಚೌಕಿದಾರ್ ಚೋರ್ ಹೈ ಘೋಷಣೆ: ರಾಹುಲ್ ಗಾಂಧಿ ವಿರುದ್ಧ ಪ್ರಕರಣ

ರಾಜಕೀಯವನ್ನು ಸಂಪೂರ್ಣವಾಗಿ ಹೊರತುಪಡಿಸಿ ನೋಡಿದರೆ, ಮುದ್ದಾಗಿರುವ ವಿಡಿಯೋ ಮತ್ತು ರಾಹುಲ್ ಗಾಂಧಿ ಅವರು ತಮ್ಮ ತಂಗಿ ಬಗ್ಗೆ ಆಡಿರುವ ಮಾತುಗಳು ಅಷ್ಟೇ ಮುದ್ದಾಗಿವೆ. ಎಲ್ಲೂ ಅವರು ಕೃತಕವಾಗಿ, ಪ್ರಚಾರ ಗಿಟ್ಟಿಸಿಕೊಳ್ಳಲೆಂದು ಮಾತುಗಳನ್ನು ಆಡಿದ್ದಾರೆ ಎಂದು ಎಲ್ಲೂ ಅನ್ನಿಸುವುದಿಲ್ಲ. ಇವರಿಬ್ಬರ ಬಾಂಧವ್ಯ ಹೀಗೆಯೇ ಇರಲಿ.

Video of Rahul and Priyanka goes viral on social media

ತಂಗಿ ಪ್ರಿಯಾಂಕಾ ವಾದ್ರಾಳ ಹೆಗಲ ಮೇಲೆ ಪ್ರೀತಿಯಿಂದ ಕೈಹಾಕಿದ್ದ ರಾಹುಲ್ ಗಾಂಧಿ ಅವರು, ಪುಟ್ಟ ತಂಗಿಯನ್ನು ಮುದ್ದಿಸುವ ರೀತಿಯಲ್ಲಿ ಮಾತುಗಳನ್ನಾಡಿದ್ದಾರೆ. ಅಣ್ಣ ಆಡಿದ ಮಾತುಗಳಿಂದ ಪ್ರಿಯಾಂಕಾ ಕೂಡ ಅಷ್ಟೇ ಆನಂದತುಂದಿಲರಾಗಿ ನಕ್ಕು ಹಗುರಾಗಿದ್ದಾರೆ.

ಗಾಂಧಿ ಕುಟುಂಬ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣ: ವಿಚಾರಣೆ ಜುಲೈ 5ಕ್ಕೆ ಮುಂದೂಡಿಕೆ ಗಾಂಧಿ ಕುಟುಂಬ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣ: ವಿಚಾರಣೆ ಜುಲೈ 5ಕ್ಕೆ ಮುಂದೂಡಿಕೆ

"ಒಬ್ಬ ಉತ್ತಮ ಅಣ್ಣ ಆಗುವುದೇ ಹೇಗೆ ಎಂದು ನಿಮಗೆ ಹೇಳುತ್ತೇನೆ ಕೇಳಿ, ಸರೀನಾ? ನಾನು ಪುಟ್ಟ ವಿಮಾನದಲ್ಲಿ ಮುದುಡಿ ಕುಳಿತುಕೊಂಡು ಸುದೀರ್ಘ ಹಾರಾಟಗಳನ್ನು ಮಾಡುತ್ತಿದ್ದೇನೆ. ಆದರೆ ನನ್ನ ಸಹೋದರಿ ದೊಡ್ಡ ಹೆಲಿಕಾಪ್ಟರ್ ಗಳಲ್ಲಿ ಸಣ್ಣ ಪ್ರಯಾಣಗಳನ್ನು ಮಾಡುತ್ತಿದ್ದಾಳೆ. ಬಟ್ ಐ ಲವ್ ಹರ್" ಎಂದು ತಂಗಿಯ ಕೆಂಪುಕೆಂಪಾದ ಗಲ್ಲಕ್ಕೆ ಮುದ್ದುಕೊಟ್ಟು ರಾಹುಲ್ ಗಾಂಧಿ ಮುಂದಿನ ಕಾರ್ಯಕ್ರಮಕ್ಕೆ ಹೊರಡುತ್ತಾರೆ.

ವಿಡಿಯೋ: ರಾಹುಲ್ ಗಾಂಧಿಯಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ವಿಡಿಯೋ: ರಾಹುಲ್ ಗಾಂಧಿಯಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

ಈ ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಪಕ್ಷಭೇದ ಮರೆತು ನೆಟ್ಟಿಗರು ಮೆಚ್ಚುಗೆಯ ಸುರಿಮಳೆಯನ್ನು ಸುರಿಸುತ್ತಿದ್ದಾರೆ. ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಆದರೆ, ಇವರಿಬ್ಬರ ಈ ಚಿತ್ರ ಮತ್ತು ಬಾಂಧವ್ಯ ನಿಜಕ್ಕೂ ಅಪರೂಪದ್ದಾಗಿದೆ ಎಂದು ನೂರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Video of Rahul Gandhi and Priyanka Gandhi Vadra goes viral on social media. Rahul explains how it takes to be good brother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X