ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ; ಕೇಕ್‌ಗಾಗಿ ಜಗಳ, ಜನ ಮಾಡಿದ ರಂಪಾಟ ಅಷ್ಟಿಷ್ಟಲ್ಲ...

|
Google Oneindia Kannada News

ನವದೆಹಲಿ, ಫೆಬ್ರುವರಿ 09: ಸಚಿವರು ಕೇಕ್ ಕತ್ತರಿಸುತ್ತಿದ್ದಂತೇ ಅದರ ಮೇಲೆ ಮುಗಿಬಿದ್ದ ಜನರು ಕೇಕ್ ಅನ್ನು ಚೆಲ್ಲಾಪಿಲ್ಲಿ ಮಾಡಿ ರಂಪಾಟ ನಡೆಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾಕಿಸ್ತಾನಿ ವಿದೇಶಾಂಗ ಸಚಿವ ಶಾಹ್ ಮಹಮೂದ್ ಖುರೇಶಿ ಎದುರು ಕೇಕ್‌ಗಾಗಿ ಜನರು ಹೀಗೆ ಮುಗಿಬಿದ್ದು ನಡೆಸಿದ ಗಲಭೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಮವಾರ ಮುಲ್ತಾನಾ ಎಂಬಲ್ಲಿ ಸಚಿವ ಖುರೇಷಿ ರಸ್ತೆ ಉದ್ಘಾಟನೆ ಸಲುವಾಗಿ ಬಂದಿದ್ದರು. ರಸ್ತೆ ಉದ್ಘಾಟನೆಗೂ ಮುನ್ನ ಬೃಹತ್ ಕೇಕ್ ಕತ್ತರಿಸುವಂತೆ ಸಚಿವರಿಗೆ ತಿಳಿಸಲಾಗಿತ್ತು. ಸಚಿವರು ಕೇಕ್ ಕತ್ತರಿಸುವುದನ್ನೇ ಕಾಯುತ್ತಿದ್ದಂತೆ, ಜನರು ನೂಕುನುಗ್ಗಲಲ್ಲಿ ಮುಗಿಬೀಳಲು ಆರಂಭಿಸಿದರು. ಇದನ್ನು ನೋಡುತ್ತಿದ್ದಂತೆ ಗಾಬರಿಯಾದ ಸಚಿವರು ಅಲ್ಲಿಂದ ದೌಡಾಯಿಸಿದರು.

Video Of Pakistanis Go Crazy Of Cake Goes Viral

ಆದರೆ ಕೇಕ್ ಸ್ಥಿತಿ ಮಾತ್ರ ಅಧೋಗತಿಯಾಗಿತ್ತು. ಕೇಕ್‌ಗಾಗಿ ಕಿತ್ತಾಡಿ, ಅರಚಾಡಿ, ಒಬ್ಬರ ಮೇಲೆ ಒಬ್ಬರು ಬೀಳುತ್ತಾ ಎರಡೂ ಕೈಗಳಲ್ಲಿ ಬಾಚಿಕೊಂಡು ಬಂದವರು ಕೆಲವರಾದರೆ, ಮುಖ ತಲೆಗೆಲ್ಲಾ ಕೇಕ್ ಮೆತ್ತಿಕೊಂಡು ಒಂದು ಪೀಸ್ ಹಿಡಿದು ಹೊರಬಂದವರು ಇನ್ನಷ್ಟು ಮಂದಿ. ಕೆಲವರೋ, ನೆಲದ ಮೇಲೆ ಬಿದ್ದ ಕೇಕನ್ನೂ ತೆಗೆದುಕೊಂಡು ತಿಂದರು. ಮತ್ತಷ್ಟು ಮಂದಿ ಕೇಕ್ ಸಿಗದೇ ನಿರಾಸೆಯಿಂದ ವಾಪಸ್ಸಾದರು.

ಪ್ರತಿಭಟನೆ ಮಾಡ್ತೀರಾ? ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕ್ತೀರಾ?: ಕೆಲಸಕ್ಕೆ ಕುತ್ತು ಬರಬಹುದು ಎಚ್ಚರ!ಪ್ರತಿಭಟನೆ ಮಾಡ್ತೀರಾ? ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕ್ತೀರಾ?: ಕೆಲಸಕ್ಕೆ ಕುತ್ತು ಬರಬಹುದು ಎಚ್ಚರ!

ಒಟ್ಟಾರೆ ಒಂದೇ ನಿಮಿಷದಲ್ಲಿ ಕೇಕ್ ಚೆಲ್ಲಾಡಿ ಇಡೀ ಜಾಗವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದರು. ಈ ವಿಡಿಯೋವನ್ನು ಪತ್ರಕರ್ತರಾದ ನಯ್ಲಾ ಇಯಾಯತ್ ಎಂಬುವರು ಹಂಚಿಕೊಂಡಿದ್ದಾರೆ. ಇಷ್ಟಲ್ಲದೇ, ಸಚಿವರು ಮಾಸ್ಕ್‌ ಹಾಕಿರುವುದನ್ನೂ ಮರೆತು ಕೇಕ್ ತಿನ್ನಲು ಮುಂದಾಗಿರುವ ಸಂಗತಿ ವಿಡಿಯೋದಲ್ಲಿ ಸೆರೆಯಾಗಿದೆ.

English summary
A video of people rushed to eat cake in pakistan has gone viral on he social media. In front of Pakistan's foreign minister, Shah Mahmood Qureshi, a fight erupts over cake,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X