ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆ

By Manjunatha
|
Google Oneindia Kannada News

ನವ ದೆಹಲಿ, ಜೂನ್ 28: ಎರಡು ವರ್ಷಗಳ ಹಿಂದೆ ಭಾರತೀಯ ಸೇನೆ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆ ಮಾಡಲಾಗಿದ್ದು ಹಲವು ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾಗಿದೆ.

2016ರ ಸೆಪ್ಟೆಂಬರ್ 29 ರಂದು ಭಾರತೀಯ ಸೇನೆಯು ಸರ್ಜಿಕಲ್ ದಾಳಿ ಮಾಡಿ, ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು.

ಏಕ ಶ್ರೇಣಿ ಏಕ ಪಿಂಚಣಿಯಿಂದ ಸರ್ಜಿಕಲ್ ಸ್ಟ್ರೈಕ್ ತನಕ ಸಾಧನೆ ಹಾದಿಏಕ ಶ್ರೇಣಿ ಏಕ ಪಿಂಚಣಿಯಿಂದ ಸರ್ಜಿಕಲ್ ಸ್ಟ್ರೈಕ್ ತನಕ ಸಾಧನೆ ಹಾದಿ

ಕಾಂಗ್ರೆಸ್‌ನ ಕೆಲವು ಮುಖಂಡರು ಸೇರಿದಂತೆ ಹಲವು ವಿರೋಧ ಪಕ್ಷಗಳು ಸರ್ಜಿಕಲ್ ಸ್ಟ್ರೈಟ್ ಮಾಡಿರುವುದಕ್ಕೆ ಸಾಕ್ಷ್ಯವನ್ನು ಕೇಳಿದ್ದವು. ಪಾಕಿಸ್ತಾನ ಸಹ ಆ ರೀತಿಯ ಯಾವುದೇ ದಾಳಿ ನಡೆದಿಲ್ಲ ಸರ್ಜಿಕಲ್ ದಾಳಿ ಎಂಬುದು ಸುಳ್ಳು ಎಂದೇ ವಾದಿಸಿತ್ತು.

Video of Indian Army led surgical strike released yesterday

ಇದೀಗ ಸರ್ಜಿಕಲ್ ದಾಳಿಯ ವಿಡಿಯೋ ಬಿಡುಗಡೆಯಾಗಿದ್ದು, ಈ ವಿಡಿಯೋ ನಿಜವಾದದ್ದು ಎಂದು ಸರ್ಜಿಕಲ್ ಸ್ಟ್ರೈಕ್‌ನ ಉಸ್ತುವಾರಿ ವಹಿಸಿದ್ದ ಈಗ ನಿವೃತ್ತರಾಗಿರುವ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ತಿಳಿಸಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ನಡೆದಾಗ ಉದಮ್‌ಪುರದ ಕಚೇರಿಯಲ್ಲಿ ನೇರ ಪ್ರಸಾರವಾದ ದೃಶ್ಯಗಳನ್ನೇ ಸುದ್ದಿ ಮಾಧ್ಯಮಗಳು ಪ್ರಸಾರ ಮಾಡಿವೆ. ಇದರ ವಿಡಿಯೋವನ್ನು ಬಿಡುಗಡೆ ಮಾಡಬೇಕು ಎಂಬುದು ನನ್ನ ಒತ್ತಾಯವೂ ಆಗಿತ್ತು ಎಂದು ಅವರು ಹೇಳಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಒಂದು ಸುಳ್ಳು ಎಂದು ಕೇಂದ್ರ ಮಾಜಿ ಸಚಿವ ಅರುಣ್ ಶೌರಿ ಹೇಳಿದ ಮರು ದಿನವೇ ವಿಡಿಯೋ ಆಗಿದೆ. ವಿಡಿಯೋ ಅಧಿಕೃತ ಸುದ್ದಿ ಮೂಲದಿಂದಲೇ ಲಭ್ಯವಾಗಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ಹೇಳಿವೆ.

ಉರಿಯ ಸೇನಾನೆಲೆಯಲ್ಲಿ ಮಗಿದ್ದ 20 ಕ್ಕೂ ಹೆಚ್ಚು ಸೈನಿಕರ ಮೇಲೆ ದಾಳಿ ಮಾಡಿ ಕೊಂದಿದ್ದ ಭಯೋತ್ಪಾದಕರ ಕೃತ್ಯಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆಯು ಸರ್ಜಿಕಲ್ ಸ್ಟ್ರೈಕ್ ಮಾಡಿ ಯಶಸ್ವಿಯಾಗಿತ್ತು. ಈ ದಾಳಿಯಲ್ಲಿ 7 ಉಗ್ರರ ನೆಲೆಗಳನ್ನು ಹೊಡೆದುರುಳಿಸಿತ್ತು.

English summary
Indian Army's Surgical strike video has been released yesterday. Some national news channels telecast it and said it is from authentic source. Indian army did surgical strike in 2016 September 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X