ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ಯಾಣದಲ್ಲಿ ರೈತರ ಹೋರಾಟ; ರಾತ್ರಿಯಿಡೀ ಹೆದ್ದಾರಿಯಲ್ಲಿ ಟ್ರಾಫಿಕ್!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಹರ್ಯಾಣದಲ್ಲಿ ರೈತರು ಶುಕ್ರವಾರ ಪ್ರಾರಂಭಿಸಿದ ಪ್ರತಿಭಟನೆ ಕಾವು ರಾತ್ರಿ ವೇಳೆಗೆ ತೀವ್ರತೆ ಪಡೆದುಕೊಂಡಿತು. ರಾಷ್ಟ್ರೀಯ ಹೆದ್ದಾರಿವರೆಗೂ ಆವರಿಸಿದ ರೈತರ ಹೋರಾಟದ ಬಿಸಿ, ಟ್ರಾಫಿಕ್ ಜಾಮ್ ಸೃಷ್ಟಿಗೆ ಕಾರಣವಾಗಿ ಬಿಟ್ಟಿದೆ. ರಾತ್ರಿಯಿಡೀ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿ ನರಳುವಂತೆ ಆಯಿತು.
ಕುರುಕ್ಷೇತ್ರದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಾರಂಭವಾದ ರೈತರ ಪ್ರತಿಭಟನೆಯು ಸಂಜೆ ಹೊತ್ತಿಗೆ ತೀವ್ರವಾಯಿತು. ನೂರಾರು ಪ್ರತಿಭಟನಾಕಾರರು ರಸ್ತೆ ತಡೆದರೆ ವಾಹನಗಳು - ಟ್ರಕ್‌ಗಳು ಮತ್ತು ಇತರ ದೀರ್ಘ-ಮಾರ್ಗದ ವಾಹನಗಳು ಶಹಬಾದ್ ಬಳಿ ಸಿಲುಕಿಕೊಂಡವು. ಪೊಲೀಸರು ರೈತ ಸಂಘದ ಮುಖಂಡರೊಂದಿಗೆ ಸಂಧಾನ ನಡೆಸುತ್ತಿರುವುದು ಕಂಡು ಬಂದರೂ, ಮಧ್ಯರಾತ್ರಿಯಾದರೂ ರೈತರು ಈ ಸ್ಥಳದಿಂದ ಕದಲಲಿಲ್ಲ.

PM-PRANAM scheme : ಪಿಎಂ ಪ್ರಣಾಮ್ ಯೋಜನೆಯಿಂದ ರೈತರು, ಕೃಷಿಗೆ ಆಗುವ ಲಾಭವೇನು?PM-PRANAM scheme : ಪಿಎಂ ಪ್ರಣಾಮ್ ಯೋಜನೆಯಿಂದ ರೈತರು, ಕೃಷಿಗೆ ಆಗುವ ಲಾಭವೇನು?

ಈ ಹೆದ್ದಾರಿಯು ದೆಹಲಿಯನ್ನು ಚಂಡೀಗಢದೊಂದಿಗೆ ಸಂಪರ್ಕಿಸುತ್ತದೆ. ಹರಿಯಾಣದ ಒಂದು ತುದಿಯಿಂದ ಇನ್ನೊಂದು ತುದಿಗೆ ಹಾದು ಹೋಗುತ್ತದೆ. ಶಿಮ್ಲಾ ಮತ್ತು ಹಿಮಾಚಲ ಪ್ರದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ತೇವಾಂಶ ಮತ್ತು ಮಳೆಯಿಂದ ಧಾನ್ಯ ಹಾಳಾಗುವ ಭೀತಿಯಿಂದ ಭತ್ತವನ್ನು ಬೇಗ ಖರೀದಿಸುವಂತೆ ಒತ್ತಾಯಿಸಿ, ರೈತರು ಶಹಾಬಾದ್ ಪಟ್ಟಣದ ಬಳಿ ಹೆದ್ದಾರಿ ತಡೆ ನಡೆಸಿದರು. ಅವರ ಬಳಿ ಸಂಗ್ರಹಣೆ ಸ್ಥಳವಿಲ್ಲ, ಆದ್ದರಿಂದ ರಾಜ್ಯ ಸರ್ಕಾರವು ಸಂಗ್ರಹಣೆಯ ದಿನಾಂಕವನ್ನು ಮುಂಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

Video: How Farmers Protest created traffic Jam at Haryana Highway; Hundreds Stuck all Night

ರೈತರಿಗೆ ಯಾವುದೇ ಭರವಸೆ ನೀಡಿಲ್ಲ ಸರ್ಕಾರ:
ಭಾರತೀಯ ಕಿಸಾನ್ ಯೂನಿಯನ್-ಚಾರುಣಿ ನೇತೃತ್ವದ ಪ್ರತಿಭಟನಾಕಾರರು, ಅಂಬಾಲ, ಕೈತಾಲ್ ಮತ್ತು ಇತರ ಜಿಲ್ಲೆಗಳ ಧಾನ್ಯ ಮಾರುಕಟ್ಟೆಗಳಲ್ಲಿ "ತೇವಾಂಶ" ಹೆಚ್ಚಾಗಿರುವುದರಿಂದ ನೂರಾರು ಕ್ವಿಂಟಾಲ್‌ಗಳು ನಾಶವಾಗಿವೆ ಎಂದು ಹೇಳಿದರು. ಇದು ಖರೀದಿಯ ಮೊದಲು ಭತ್ತದ ಗುಣಮಟ್ಟದ ಅಳತೆಯಾಗಿದೆ.

ಅಧಿಕೃತ ಸಂಗ್ರಹವು ಅಕ್ಟೋಬರ್ 1 ರಿಂದ ಪ್ರಾರಂಭವಾಗುತ್ತದೆ. ಆದರೆ ಬೆಳೆಯನ್ನು ಮೊದಲೇ ಬಿತ್ತಿದ ಅಥವಾ ಆರಂಭಿಕ-ಮಾಗಿದ ತಳಿಗಳನ್ನು ಬಳಸಿದ ರೈತರಿದ್ದಾರೆ. ಅದಾಗ್ಯೂ, ರೈತರಿಗೆ ಸರ್ಕಾರವು ಇನ್ನೂ ಯಾವುದೇ ರೀತಿಯ ಭರವಸೆ ನೀಡಿಲ್ಲ.

English summary
Video: How Farmers Protest created traffic Jam at Haryana Highway; Hundreds Stuck all Night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X