• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಧೇ ಮಾಗಾಗಿ ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್

By Mahesh
|

ನವದೆಹಲಿ, ಸೆ. 14 : ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ವಿವಾದಗಳಿಗೆ ಸಂಬಂಧಿಸಿದಂತೆ ಐಬಿಎನ್ ಲೈವ್ ತನ್ನ ಆಜ್ ಕಾ ಮುದ್ದಾ ಕಾರ್ಯಕ್ರಮದಲ್ಲಿ ನೇರ ಚರ್ಚೆ ಹಮ್ಮಿಕೊಂಡಿತ್ತು. ಆದರೆ, ರಾಧೇ ಮಾ ಬಗ್ಗೆ ಚರ್ಚಿಸಲು ಬಂದಿದ್ದ ಅತಿಥಿಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದು ಕಂಡು ಪ್ರೇಕ್ಷಕರು ದಂಗಾಗಿದ್ದಾರೆ.

ರಾಧೇ ಮಾ ವಿವಾದಕ್ಕೆ ಸಂಬಂಧಿಸಿದಂತೆ ಐಬಿಎನ್ 7 ನಲ್ಲಿ ಭಾನುವಾರ ರಾತ್ರಿ ನಡೆದ 'ಆಜ್ ಕಾ ಮುದ್ದಾ' ಲೈವ್ ಚರ್ಚೆಯಲ್ಲಿ ಭಾಗವಹಿಸಿದ್ದ ಅತಿಥಿಗಳು ಪರಸ್ಪರ ಕಪಾಳಮೋಕ್ಷ ನಡೆಸಿ, ಹೊಡೆದಾಡಿಕೊಂಡ ಘಟನೆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.[ರಾಧೇ ಮಾ 'ಸೆಕ್ಸ್ ರಾಕೆಟ್' ನಡೆಸುತ್ತಾರೆ: ರೂಪದರ್ಶಿ]

ಹಿಂದೂ ಮಹಾಸಭಾದ ಸ್ವಾಮೀಜಿಯೊಬ್ಬರು ಮತ್ತೋರ್ವ ಸಾಧ್ವಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಓಂಜೀ ಮಹಾರಾಜ್ ಹಾಗೂ ಸಾಧ್ವಿ ದೀಪಾ ಕಿತ್ತಾಟ ಜನತೆ ಮನರಂಜನೆ ಜೊತೆಗೆ ಅಸಹ್ಯ ಹುಟ್ಟಿಸಿದೆ.

ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ ವಿವಾದಗಳಿಗೆ ಸಂಬಂಧಿಸಿದಂತೆ ಐಬಿಎನ್ ಲೈವ್ ತನ್ನ ಆಜ್ ಕಾ ಮುದ್ದಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಾಮೀಜಿ, ಜೋತಿಷಿ ಸಹಿತ ಧಾರ್ಮಿಕ ವ್ಯಕ್ತಿಗಳನ್ನು ಚರ್ಚೆಗೆ ಆಹ್ವಾನಿಸಿತ್ತು. ಈ ಸಂದರ್ಭದಲ್ಲಿ ಓಂ ಜೀ ಮಹಾರಾಜ್ ಹಾಗೂ ಸಾಧ್ವಿ ರಾಖಿ ಜೊತೆ ಮಾತಿನ ಜಟಾಪಟಿ ಮುಂದೆ ದೀಪಾ ಶರ್ಮ ಜೊತೆ ಕೈ ಕೈ ಮಿಲಾಯಿಸುವ ದೃಶ್ಯಗಳು ನಡೆದು ಬಿಟ್ಟಿತು.

ಓಂಜೀ ಮೇಲೆ ಕೈ ಮಾಡಿದ ದೀಪಾ ಶರ್ಮಾ

ಓಂಜೀ ಮೇಲೆ ಕೈ ಮಾಡಿದ ದೀಪಾ ಶರ್ಮಾ

ಮೊದಲಿಗೆ ಸುಮ್ಮನ್ನಿದ್ದ ದೀಪಾ ಶರ್ಮ ಅವರು ತಮ್ಮ ಬಗ್ಗೆ ಓಂಜೀ ಹೇಳಿದ್ದಕ್ಕೆ ಕೋಪಗೊಂಡು ಓಂಜೀ ಮೇಲೆ ಕೈ ಮಾಡಲು ಯತ್ನಿಸಿದ್ದಾರೆ. ಅನಿರೀಕ್ಷಿತ ಹೊಡೆತದಿಂದ ವಿಚಲಿತರಾದ ಓಂ ಜೀ ಅವರು ದೀಪಾ ಶರ್ಮಾರ ಕೆನ್ನೆಗೆ ಬಾರಿಸಿದ್ದಾರೆ. ಇಬ್ಬರ ನಡುವೆ ಫೈಟ್ ಮುಂದುವರೆಯುತ್ತಿದ್ದಂತೆ ಚಾನೆಲ್ ಕಾರ್ಯಕ್ರಮದ ಪ್ರಸಾರವನ್ನು ಮೊಟಕುಗೊಳಿಸಿ ಇಬ್ಬರಿಗೂ ಛೀಮಾರಿ ಹಾಕಿದೆ.

ರಾಧೇ ಮಾ ದೆಸೆಯಿಂದ ಕಪಾಳಮೋಕ್ಷ

ರಾಧೇ ಮಾ ದೆಸೆಯಿಂದ ಕಪಾಳಮೋಕ್ಷ

ಮೈಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತಾಡಿ ಎಂದು ಓಂಜೀ ಅವರು ಗುಡುಗಿದ್ದಾರೆ, ನಂತರ ದೀಪಾ ಕೆನ್ನೆಗೆ ಬಾರಿಸಿದ್ದಾರೆ. ಇಬ್ಬರು ಪರಸ್ಪರ ಕೈ ಕೈ ಹಿಡಿದು ಕೊಂಡು ಜಟ್ಟಿಗಳಂತೆ ಯುದ್ಧಕ್ಕೆ ನಿಂತಿದ್ದಾರೆ. 'ತು ಕ್ಯಾ ಮರೆಗಿ?' ಎಂದು ಆಕೆಗೆ ಆತ ಕೇಳಿದ್ದಾನೆ.

ಇದು ನಾಚಿಕೆಗೇಡಿನ ಪ್ರಸಂಗ

ಇದು ನಾಚಿಕೆಗೇಡಿನ ಪ್ರಸಂಗ

ಘಟನೆಯಿಂದ ಚರ್ಚೆ ಅರ್ಧಕ್ಕೆ ನಿಂತಿದೆ. ಚಾನೆಲ್ ಗೆ ಜನ ಉಗಿದರೆ, ಬಂದ ಅತಿಥಿಗಳಿಗೆ ಐಬಿಎನ್ 7 ಚಾನೆಲ್ ನವರು ಉಗಿದಿದ್ದಾರಂತೆ. ಒಟ್ಟಾರೆ ಇದು ನಾಚಿಕೆಗೇಡಿನ ಪ್ರಸಂಗ ಎಂದು ಜನಾಭಿಪ್ರಾಯ.

ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್ ವಿಡಿಯೋ

ರಾಧೇ ಮಾಗಾಗಿ ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್ ವಿಡಿಯೋ

English summary
Video: Self styled Godwoman Radhe Maa continues to hog limelight for wrong reasons. On Sunday night, a live TV debate on controversial godwoman Radhe Maa took a nasty turn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X