ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ನಾಲ್ಕು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯ ಮೇಲೆ ಹತ್ತಿದ ಗೂಳಿ

|
Google Oneindia Kannada News

ಅಂಬಾಲಾ ಜುಲೈ 18: ದೇಶದ ಹಲವು ರಾಜ್ಯಗಳಲ್ಲಿ ಬೀದಿ ಬದಿಯ ಪ್ರಾಣಿಗಳು ಸಾಮಾನ್ಯ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿವೆ. ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದುವರೆಗೆ ಬೀದಿ ಗೂಳಿಗಳಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಮಧ್ಯೆ ಬಿಡಾಡಿ ಗೂಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ನಾಲ್ಕು ಅಂತಸ್ತಿನ ಕಟ್ಟಡದ ಛಾವಣಿಯ ಮೇಲೆ ಗೂಳಿ ಹತ್ತುತ್ತಿರುವುದನ್ನು ಕಾಣಬಹುದು.

ಈ ವಿಡಿಯೋ ಹರ್ಯಾಣದ ಕೈತಾಲ್ ಜಿಲ್ಲೆಯದ್ದು. ಈ ಗೂಳಿ ಕಟ್ಟಡದ ಛಾವಣಿಯನ್ನು ತಲುಪಿತು. ಗೂಳಿಯನ್ನು ಕೆಳಗಿಳಿಸಲು ಪಶು ಇಲಾಖೆ ಹಾಗೂ ಸ್ಥಳೀಯರು ಹರಸಾಹಸ ಪಡಬೇಕಾಯಿತು.

ಮಾಧ್ಯಮ ವರದಿಗಳ ಪ್ರಕಾರ, ಕೈತಾಲ್‌ನ ಅಂಬಲ ರಸ್ತೆಯಲ್ಲಿರುವ ಚಿರಂಜೀವಿ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಭಾನುವಾರ ಬೆಳಿಗ್ಗೆ 4 ಅಂತಸ್ತಿನ ಮನೆಯ ಛಾವಣಿಯ ಮೇಲೆ ಗೂಳಿಯೊಂದು ಹತ್ತಿದೆ.

ಈ ಬಗ್ಗೆ ಸ್ಥಳೀಯರು ಪಶು ಸಂಗೋಪನಾ ಇಲಾಖೆ ಹಾಗೂ ಇತರೆ ಆಡಳಿತಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಪಶುಪಾಲನಾ ಇಲಾಖೆ ಹಾಗೂ ಡಾ.ಸುರೇಂದ್ರ ನಾಯೀನ್ ನೇತೃತ್ವದ ಗೌರಕ್ಷಾ ದಳದ ತಂಡದೊಂದಿಗೆ ಸಮಾಜ ಸೇವಕ ರಾಜು ದೋಹರ್ ಹಾಗೂ ಅವರ ಸಮಾಜ ಸೇವಕರು ಸ್ಥಳಕ್ಕೆ ಆಗಮಿಸಿದರು.

ಕೆಳಗಿಳಿಸಲು ಜನ ಪರದಾಟ

ಗೂಳಿ ಏಕಾಏಕಿ ಆಕ್ರಮಣಕಾರಿಯಾಗಿ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ನುಗ್ಗಿದೆ. ಈ ವೇಳೆ ಜನ ಭಯಭೀತರಾಗಿ ಮನೆ ಒಳಗೆ ಸೇರಿಕೊಂಡಿದ್ದಾರೆ. ಗೂಳಿ ನುಗ್ಗುವ ಪರಿವಿಲ್ಲದ ಜನ ಗೂಳಿ ಕಂಡು ಹೆದರಿ ದಿಕ್ಕಾಪಾಲಾಗಿ ಓಡಿದ್ದಾರೆ. ಬಳಿಕ ಜನ ಗೂಳಿಯನ್ನು ಕೆಳಗಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಗೂಳಿಯ ಆಕ್ರಮಣಕಾರಿ ಸ್ವಭಾವ ಮತ್ತು ಜಾರಿಬೀಳುವ ಭಯದಿಂದಾಗಿ ಅವರು ಅದನ್ನು ಮೆಟ್ಟಿಲುಗಳಿಂದ ಇಳಿಸಲು ವಿಫಲರಾದರು.

ನಂತರ ಪಶುಸಂಗೋಪನಾ ಇಲಾಖೆಯಿಂದ ದೊಡ್ಡ ಹೈಡ್ರಾಲಿಕ್ ಕ್ರೇನ್ ಅನ್ನು ತರಿಸಲಾಯಿತು. ಮೇಲ್ಛಾವಣಿಯಲ್ಲಿದ್ದ ಜನರು ಮೊದಲು ಗೂಳಿಯನ್ನು ಹಗ್ಗದಿಂದ ಕಟ್ಟಿ ನಿಯಂತ್ರಿಸಿದರು. ನಂತರ ಪಶುಸಂಗೋಪನಾ ಇಲಾಖೆಯ ಡಾ. ಸುರೇಂದ್ರ ನಾಯ್ನ್ ಅವರು ಗೂಳಿಗೆ ಪ್ರಜ್ಞೆ ತಪ್ಪಲು ಎರಡು ಲಸಿಕೆಗಳನ್ನು ನೀಡಿದರು. ಇದರಿಂದ ಆ ಗೂಳಿಯನ್ನು ನೆಲಕ್ಕೆ ಇಳಿಸುವುದು ಸುಲಭವಾಯಿತು.

ಗೂಳಿಗೆ ಮೂರ್ಛೆ ಹೋಗುವ ಲಸಿಕೆ

ಗೂಳಿಗೆ ಮೂರ್ಛೆ ಹೋಗುವ ಲಸಿಕೆ

ಗೂಳಿ ಮೂರ್ಛೆ ಹೋದ ನಂತರ, ಸ್ಥಳೀಯ ಜನರು ಅದನ್ನು ಬಲವಾದ ಬೆಲ್ಟ್‌ಗಳಲ್ಲಿ ಕಟ್ಟಿದರು. ಬಳಿಕ ಅದನ್ನು ಕ್ರೇನ್‌ ಮೂಲಕ ಸುಲಭವಾಗಿ ಕೆಳಕ್ಕೆ ಇಳಿಸಲು ಏರ್ಪಾಡು ಮಾಡಲಾಯಿತು. ಇದಾದ ನಂತರ ಗೂಳಿಯನ್ನು ಅತ್ಯಂತ ಎಚ್ಚರಿಕೆಯಿಂದ ಛಾವಣಿಯಿಂದ ಕೆಳಗಿಳಿಸಲಾಯಿತು. ಈ ರಕ್ಷಣಾ ಕಾರ್ಯಾಚರಣೆ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಮಕ್ಕಳು, ಮಹಿಳೆಯರು ಮತ್ತು ಪುರುಷರು ತಮ್ಮ ಛಾವಣಿಯ ಮೇಲೆ ನಿಂತು ಈ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಜನರು ಈ ಘಟನೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಮಾಡಿದ್ದಾರೆ.

ಆತಂಕದಲ್ಲಿ ಸ್ಥಳೀಯರು

ಆತಂಕದಲ್ಲಿ ಸ್ಥಳೀಯರು

ನಾಲ್ಕು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯನ್ನು ಗೂಳಿ ಹತ್ತಿದ ಸುದ್ದಿ ಕೈತಾಲ್‌ನಾದ್ಯಂತ ಜನರಲ್ಲಿ ಚರ್ಚೆಯ ವಿಷಯವಾಗಿದೆ. ನಾಲ್ಕು ಅಂತಸ್ತಿನ ಕಟ್ಟಡವನ್ನು ಗೂಳಿ ಹೇಗೆ ಏರಿತು ಎಂದು ಮೊದಲಿಗೆ ಜನರು ಆಶ್ಚರ್ಯಚಕಿತರಾಗಿದ್ದಾರೆ. ಹಾಗಾದರೆ ಅದನ್ನು ಕೆಳಗಿಳಿಸಿದ್ದು ಹೇಗೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಗೂಳಿಯನ್ನು ಕ್ರೇನ್‌ನಿಂದ ಕೆಳಗಿಳಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಡಾಡಿ ಪ್ರಾಣಿಗಳ ಬಗ್ಗೆ ಜನಾಕ್ರೋಶ

ಬಿಡಾಡಿ ಪ್ರಾಣಿಗಳ ಬಗ್ಗೆ ಜನಾಕ್ರೋಶ

ಮಾಧ್ಯಮದವರೊಂದಿಗೆ ನಡೆಸಿದ ಸಂವಾದದಲ್ಲಿ ಕೈತಾಲ್‌ನ ಅನೇಕ ಜನರು, ನಗರದಲ್ಲಿ ಇಂತಹ ಮೊದಲ ಘಟನೆಯನ್ನು ನೋಡಿದ್ದೇವೆ. ಬೀದಿ ಪ್ರಾಣಿಯೊಂದು ಇಷ್ಟು ಎತ್ತರದ ಕಟ್ಟಡದ ಮೇಲೆ ಏರಿದ್ದು ಇದೇ ಮೊದಲ ಬಾರಿಗೆ. ಜನವಸತಿ ಪ್ರದೇಶದಿಂದ ಬಿಡಾಡಿ ಪ್ರಾಣಿಗಳನ್ನು ತಡೆಯಲು ಸ್ಥಳೀಯ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಿಡಾಡಿ ಪ್ರಾಣಿಗಳು ಪ್ರತಿದಿನ ಭಯಭೀತಿ ಹುಟ್ಟಿಸುತ್ತಿವೆ ಎಂದು ಆಕ್ರೋಶವನ್ನು ಇಲ್ಲಿನ ಜನ ಹೊರಹಾಕಿದ್ದಾರೆ.

English summary
A video of a bull climbing a four-storey building in Uttar Pradesh's Kaithal has gone viral. Find out what happened next.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X