ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ತಂಗಿಯ ಮದುವೆಯಂದು ತಂದೆಯ ಮೇಣದ ಪ್ರತಿಮೆ ಸರ್ಪ್ರೈಸ್ ನೀಡಿದ ಸಹೋದರ

|
Google Oneindia Kannada News

ತಂದೆ-ಮಗಳ ಸಂಬಂಧ ಅತ್ಯಂತ ಸುಂದರವಾದ ಮತ್ತು ವಿಶೇಷವಾದ ಬಾಂಧವ್ಯ ಎಂದು ಹೇಳಬೇಕಾಗಿಲ್ಲ. ತನ್ನ ಮದುವೆಯ ವಿಷಯಕ್ಕೆ ಬಂದಾಗ ಪ್ರತಿ ಹುಡುಗಿಯೂ ತನ್ನ ತಂದೆ ಉಪಸ್ಥಿತಿಯೊಂದಿಗೆ ಮದುವೆಯಾಗಬೇಕೆಂದು ಬಯಸುತ್ತಾಳೆ. ತನ್ನ ತಂದೆಯ ಆಶೀರ್ವಾದವನ್ನು ಪಡೆಯದೆ ತನ್ನ ಮನೆಯಿಂದ ಹೊರಟು ಹೊಸ ಜೀವನವನ್ನು ಪ್ರಾರಂಭಿಸುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಆದರೆ ಹುಡುಗಿ ತನ್ನ ತಂದೆ ಜೀವಂತವಾಗಿ ಇಲ್ಲದಿದ್ದರೂ ಅವನ ಉಪಸ್ಥಿತಿಯನ್ನು ಅನುಭವಿಸಿದರೆ ಅವಳ ಭಾವನೆಯನ್ನು ಊಹಿಸುವುದು ತುಂಬಾ ಕಷ್ಟ. ಅಂತಹ ಒಂದು ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೌದು.. ವಧು ತನ್ನ ಮದುವೆಯ ದಿನದಂದು ತನ್ನ ದಿವಂಗತ ತಂದೆಯ ಮೇಣದ ಪ್ರತಿಮೆಯಿಂದ ಆಶ್ಚರ್ಯಚಕಿತರಾಗಿದ್ದಾರೆ.

ಪ್ರತಿಮೆಯನ್ನು ನೋಡಿದಾಗ ವಧು ಕಣ್ಣೀರು ಹಾಕಿದ್ದಾರೆ. ಮೇಣದ ಪ್ರತಿಮೆಯನ್ನು ನೋಡಿದ ನಂತರ ವಧು ಮತ್ತು ಆಕೆಯ ತಾಯಿ ಕಣ್ಣೀರು ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಘಟನೆ ವೇಳೆ ನೋಡುಗರು ಕೂಡ ಬೆಚ್ಚಿಬಿದ್ದದ್ದು ಅವರಲ್ಲಿ ಅನೇಕರಿಗೆ ತಮ್ಮ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಜೊತೆಗೆ ವಧು ತನ್ನ ತಂದೆ ಪ್ರತಿಮೆಗೆ ಪ್ರೀತಿಯ ಮುತ್ತು ಕೊಟ್ಟು ಅಪ್ಪುಗೆಯನ್ನು ನೀಡಿದ್ದಾಳೆ.

ಗಮನಾರ್ಹವಾಗಿ, ವಧುವಿನ ಸಹೋದರ ಅವುಲಾ ಫಣಿ ಅವರು ತಮ್ಮ ದಿವಂಗತ ತಂದೆಯ ಮೇಣದ ಪ್ರತಿಮೆಯನ್ನು ನಿರ್ಮಿಸಿ ಸಹೋದರಿಯ ಮದುವೆಗೆ ಸರ್ಪ್ರೈಸ್ ನೀಡಿದ್ದಾರೆ. ವರದಿಗಳ ಪ್ರಕಾರ, ಫಣಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ವಾಸಿಸುತ್ತಿದ್ದರು. ಈ ವೇಳೆ ಅವರ ತಂದೆ COVID-19 ಸೋಂಕಿಗೆ ಒಳಗಾಗಿ ನಿಧನರಾದರು. ಅವರ ತಾಯಿ ಮತ್ತು ಅವರ ದಿವಂಗತ ತಂದೆ ಅವರು ನಿವೃತ್ತರಾಗುವ ಮೊದಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಫಣಿ ಹಂಚಿಕೊಂಡಿದ್ದಾರೆ. ಅವರ ತಂದೆಯ ಮೇಣದ ಪ್ರತಿಮೆಯನ್ನು ಕರ್ನಾಟಕದಲ್ಲಿ ನಿರ್ಮಿಸಲಾಗಿದೆ ಮತ್ತು ಪೂರ್ಣಗೊಳಿಸಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

Video: Brother Surprise with Father Wax Statue on sister Wedding Day

ಈ ದಿನಗಳಲ್ಲಿ ಅದೆಷ್ಟೋ ದುಃಖಿತ ಕುಟುಂಬಗಳು ತಮ್ಮ ಅಗಲಿದ ಸದಸ್ಯರ ನೆನಪಿಗಾಗಿ ಮೇಣದ ಪ್ರತಿಮೆಗಳನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ ಮಾಧವಿ ಗುಪ್ತಾ ಎಂಬ ಮಹಿಳೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ನಂತರ, ಅವರ ಉದ್ಯಮಿ ಪತಿ ಶ್ರೀನಿವಾಸ್ ಗುಪ್ತಾ ಅವರು ತಮ್ಮ ಹೊಸ ಮನೆಯಲ್ಲಿ ಅವರ ಸಿಲಿಕಾನ್ ಮೇಣದ ಆಕೃತಿಯನ್ನು ಇರಿಸಿದರು. ಮೇಣದ ಆಕೃತಿಯನ್ನು ನಿರ್ಮಿಸಲು ಒಂದು ವರ್ಷ ತೆಗೆದುಕೊಳ್ಳಲಾಗಿದೆ. ಅದನ್ನು ದಿವಂಗತ ಹೆಂಡತಿಯ ಕನಸಿನ ಮನೆಯಲ್ಲಿ ಇರಿಸಲಾಯಿತು.

ಇತ್ತೀಚೆಗೆ, ಇಂಜಿನಿಯರ್ ಒಬ್ಬರು ಬೆಂಗಳೂರಿನಲ್ಲಿ ತಮ್ಮ ತಾಯಿ ನಿಧನರಾದ ನಂತರ ಅವರ ಜೀವನ ಗಾತ್ರದ ಮೇಣದ ಆಕೃತಿಯನ್ನು ಖರೀದಿಸಿದರು. ಅವರು ಕೂಡ ತಮ್ಮ ದಿವಂಗತ ತಾಯಿಯ ಮೇಣದ ಪ್ರತಿಮೆಯನ್ನು ಹೊಂದಿದ್ದಾರೆ. ಆದ್ದರಿಂದ ಅವರು ಯಾವಾಗಲೂ ಅವರೊಂದಿಗೆ ಇರುತ್ತಾರೆ ಎಂಬ ಭಾವನೆ ಅವರದ್ದು. ಆಂಧ್ರದ ಎಲೆಕ್ಟ್ರಿಷಿಯನ್ ಮಾಂಡವ ಕುಟುಂಬ ರಾವ್ ಅವರು ತಮ್ಮ ದಿವಂಗತ ಪತ್ನಿ ಕಾಸಿ ಅನ್ನಪೂರ್ಣ ದೇವಿಯ ಮೇಣದ ಪ್ರತಿಮೆಯನ್ನು ಹೊಂದಿದ್ದಾರೆ.

English summary
Brother Surprise with Father Wax Statue on sister Wedding Day. The video of a passionate bride is viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X