ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲೈಟ್‌ನಲ್ಲಿ ಕಾರ್ಯ ನಿರ್ವಹಿಸದ ಎಸಿ: ಮೂರ್ಛೆ ಹೋದ ಪ್ರಯಾಣಿಕರು

|
Google Oneindia Kannada News

ಹೊಸದಿಲ್ಲಿ ಜೂನ್ 25: ಗೋಫಸ್ಟ್ ವಿಮಾನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಗೋಫಸ್ಟ್ ವಿಮಾನದ ಹವಾನಿಯಂತ್ರಣ ವ್ಯವಸ್ಥೆ ಹಾರಾಟದ ಸಮಯದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂದು ವಿಡಿಯೊದಲ್ಲಿ ನೋಡಿದ ಜನರು ಹೇಳಿಕೊಳ್ಳುತ್ತಿದ್ದಾರೆ. ಫ್ಲೈಟ್‌ನಲ್ಲಿ ಎಸಿ ಕಾರ್ಯ ನಿರ್ವಹಿಸದೆ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈ ವೇಳೆ ಹಲವು ಪ್ರಯಾಣಿಕರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ರೋಶ್ನಿ ವಾಲಿಯಾ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಕೆಲವು ಪ್ರಯಾಣಿಕರು ಸುರಕ್ಷತಾ ಸೂಚನೆಗಳ ಬಗ್ಗೆ ಹ್ಯಾಂಡ್ ಫ್ಯಾನ್ ಅನ್ನು ಅಲುಗಾಡಿಸುತ್ತಿರುವುದನ್ನು ಕಾಣಬಹುದು.

ಘಟನೆಯ ವಿಡಿಯೋವನ್ನು ರೋಶ್ನಿ ವಾಲಿಯಾ ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ರೋಶ್ನಿ ಪರಿಚಯಿಸಿಕೊಂಡಿದ್ದಾರೆ. ವಿಡಿಯೊವನ್ನು ಹಂಚಿಕೊಂಡ ರೋಶ್ನಿ, "ಗೋ ಫಸ್ಟ್ ಏರ್‌ವೇಸ್ ಜಿ8 2316 ಇದುವರೆಗಿನ ಕೆಟ್ಟ ಅನುಭವಗಳಲ್ಲಿ ಒಂದಾಗಿದೆ. ಇಡೀ ಹಾರಾಟದ ವೇಳೆ ಎಸಿ ಕೆಲಸ ಮಾಡದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು'' ಎಂದು ಹೇಳಿದ್ದಾರೆ.

ಘಟನೆ ನಡೆದಿದ್ದು ಯಾವಾಗ?

ಘಟನೆ ನಡೆದಿದ್ದು ಯಾವಾಗ?

ಬೆವರಿನಿಂದಾಗಿ ಪ್ರಯಾಣಿಕರು ಬಹುತೇಕ ಪ್ರಜ್ಞಾಹೀನರಾಗಿದ್ದರು ಎಂದು ರೋಶ್ನಿ ವಾಲಿಯಾ ಹೇಳಿದ್ದಾರೆ. 3 ಮಂದಿಯೂ ಮೂರ್ಛೆ ಹೋಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕೀಮೋ ಪೇಷಂಟ್‌ಗೆ ಉಸಿರಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ರೋಶ್ನಿ ವಾಲಿಯಾ ಹೇಳಿದ್ದಾರೆ. ಈ ವಿಡಿಯೊವನ್ನು ರೋಶ್ನಿ ಅವರು ಜೂನ್ 14 ರಂದು ಹಂಚಿಕೊಂಡಿದ್ದಾರೆ. ಆದರೆ ಈಗ ವೈರಲ್ ಆಗುತ್ತಿದೆ.

ವಿಮಾನದಲ್ಲಿ ನರಳಿದ ಕ್ಯಾನ್ಸರ್ ಪೇಷಂಟ್

ವಿಮಾನದಲ್ಲಿ ನರಳಿದ ಕ್ಯಾನ್ಸರ್ ಪೇಷಂಟ್

ಗೋ ಫಸ್ಟ್ ಫ್ಲೈಟ್‌ನ ಈ ವೈರಲ್ ವಿಡಿಯೊದಲ್ಲಿ ಮಹಿಳೆಯೊಬ್ಬರು, "ಎಲ್ಲರೂ ತುಂಬಾ ಬಿಸಿ ಶಾಖದಿಂದ ನರಳುತ್ತಿದ್ದಾರೆ. ವಿಮಾನವು 5:30 ಕ್ಕೆ ಟೇಕ್ ಆಫ್ ಆಗಿದ್ದು ಈಗ 6:20 ಆಗಿದೆ ಮತ್ತು ಅವರ ಎಸಿ ಕಾರ್ಯನಿರ್ವಹಿಸುತ್ತಿಲ್ಲ. ಇದರಲ್ಲಿ ಒಬ್ಬ ಕ್ಯಾನ್ಸರ್ ಪೇಷೆಂಟ್ ಇದ್ದು, ಆತ ತುಂಬಾ ನರಳುತ್ತಿದ್ದ. ಅವನ ಎಸಿ ಕೆಲಸ ಮಾಡದಿದ್ದರೆ ಅವನು ವಿಮಾನವನ್ನು ತೆಗೆದುಕೊಳ್ಳಬಾರದು. ಪ್ರತಿಯೊಬ್ಬರೂ ಪ್ರಯಾಣ ದರ ರೂ.12 ಸಾವಿರ ಪಾವತಿಸಿದ್ದೇವೆ. ಗೋ ಫಸ್ಟ್ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದಿದ್ದಾರೆ.

ವಿವರವನ್ನು ಹಂಚಿಕೊಳ್ಳಲು ಕೇಳಿದ ಗೋ ಫಸ್ಟ್

ಈ ವೈರಲ್ ವಿಡಿಯೊಗೆ GoFirst ಪ್ರತಿಕ್ರಿಯಿಸಿದೆ. GoFirst ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ದಯವಿಟ್ಟು ಪ್ರಯಾಣದ ವಿವರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ, ಇದರಿಂದ ವಿಮಾನಯಾನ ಸಂಸ್ಥೆಯು ವಿಷಯವನ್ನು ಪರಿಶೀಲಿಸಬಹುದು. ಈ ವಿಷಯವನ್ನು ತನಿಖೆ ಮಾಡಲು ಪ್ರಯಾಣಿಕರೊಬ್ಬರು ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎಗೆ ಟ್ಯಾಗ್ ಮಾಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ವಿಮಾನದಲ್ಲಿನ ಅವ್ಯವಸ್ಥೆಯ ವಿಡಿಯೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ವಿಮಾನದಲ್ಲಿ ಮಕ್ಕಳಿಂದ ಹಿರಿಯರು ಹಾಗೂ ಕೊಲವೊಮ್ಮೆ ಕಾಯಿಲೆ ಇರುವವರು ಪ್ರಯಾಣಿಸುತ್ತಿರುತ್ತಾರೆ. ಆದರೆ ಇದಕ್ಕೆ ತಕ್ಕ ವ್ಯವಸ್ಥೆ ಇಲ್ಲವಾದಲ್ಲಿ ಅದು ನಿರ್ಲಕ್ಷ್ಯ ಅಲ್ಲದೇ ಬೇರೆನೂ ಅಲ್ಲ ಎಂದು ಜನ ಕೆಂಡಕಾರಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ನೆಟ್ಟಿಗರ ಪ್ರತಿಕ್ರಿಯೆ

ವಿಮಾನದಲ್ಲಿನ ಅವ್ಯವಸ್ಥೆಯ ವಿಡಿಯೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ವಿಮಾನದಲ್ಲಿ ಮಕ್ಕಳಿಂದ ಹಿರಿಯರು ಹಾಗೂ ಕೊಲವೊಮ್ಮೆ ಕಾಯಿಲೆ ಇರುವವರು ಪ್ರಯಾಣಿಸುತ್ತಿರುತ್ತಾರೆ. ಆದರೆ ಇದಕ್ಕೆ ತಕ್ಕ ವ್ಯವಸ್ಥೆ ಇಲ್ಲವಾದಲ್ಲಿ ಅದು ನಿರ್ಲಕ್ಷ್ಯ ಅಲ್ಲದೇ ಬೇರೆನೂ ಅಲ್ಲ ಎಂದು ಜನ ಕೆಂಡಕಾರಿದ್ದಾರೆ.

English summary
There has been an incident where passengers lost consciousness after the Gofest flight AC failed to operate. Passengers named Roshni Walia shared a video of the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X