ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಾಂತರಗೊಂಡ ಎಲ್ಲರನ್ನೂ ಹಿಂದೂ ಧರ್ಮಕ್ಕೆ ತರ್ತೇವೆ

By Kiran B Hegde
|
Google Oneindia Kannada News

ಅಲಿಗಢ, ಫೆ. 10: ಹಿಂದೂ ಧರ್ಮದಿಂದ ಮತಾಂತರಗೊಂಡಿರುವ ಸುಮಾರು 15 ಕೋಟಿ ಜನರನ್ನು ಮಾತೃ ಧರ್ಮಕ್ಕೆ ವಾಪಸ್ ತರುವವರೆಗೂ ಘರ್ ವಾಪಸಿ ಕಾರ್ಯಕ್ರಮ ನಿಲ್ಲಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಆರ್ಯ ಸವಾಲು ಹಾಕಿದ್ದಾರೆ.

ಘರ್ ವಾಪಸಿ ಕಾರ್ಯಕ್ರಮ ಆರಂಭಿಸಿದ ಮೇಲೆ ನನಗೆ ಹಾಗೂ ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಆದರೆ, ನಾವು ಹೆದರುವುದಿಲ್ಲ. ಹಿಂದೂಗಳ ಹಕ್ಕಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದರು. [ಮರು ಮತಾಂತರವೇಕೆ ತಪ್ಪು?]

ವಿಶ್ವ ಹಿಂದೂ ಪರಿಷತ್ ವತಿಯಿಂದ ಉತ್ತರ ಪ್ರದೇಶದ ಆಲಿಗಢ ಹಳೇ ನಗರದ ರಾಮಲೀಲಾ ಮೈದಾನದಲ್ಲಿ ಸೋಮವಾರ ರಾತ್ರಿ ಆಯೋಜಿಸಲಾಗಿದ್ದ ಬೃಹತ್‌ ಹಿಂದೂ ಸಮಾವೇಶದಲ್ಲಿ ಸಾಧ್ವಿ ಪ್ರಾಚಿ ಅಭಿಪ್ರಾಯ ವ್ಯಕ್ತಪಡಿಸಿದರು. [ಅಸಂಬದ್ಧ ಹೇಳಿಕೆ ಒಪ್ಪಿದ ಷಾ]

prachi

ಭಾರತದಲ್ಲಿ ಇತರ ಸಮುದಾಯಗಳಿಗೆ ಹೋಲಿಸಿದರೆ ಹಿಂದೂಗಳ ಸಂಖ್ಯೆ ನಿರಂತರವಾಗಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಹಿಂದೂಗಳ ಜನಸಂಖ್ಯೆ ಹೆಚ್ಚುವವರೆಗೂ ಘರ್ ವಾಪಸಿ ಕಾರ್ಯಕ್ರಮ ಮುಂದುವರಿಸುವುದಾಗಿ ಹೇಳಿದರು. [ಸೈಫ್ ಅಲಿ ಖಾನ್ ಗರಂ]

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ವೀರ ಸಾವರ್ಕರ್, ಭಗತ್ ಸಿಂಗ್ ಮುಂತಾದವರು ಹುತಾತ್ಮರಾಗಿದ್ದಾರೆ. ಅವರೇ ನಿಜವಾದ ರಾಷ್ಟ್ರಪಿತರು ಎಂದು ಪ್ರತಿಪಾದಿಸಿದರು. [40 ಕ್ರೈಸ್ತ ಕುಟುಂಬಗಳು ಸಿಖ್ ಧರ್ಮಕ್ಕೆ]

ಅಲಿಗಢಕ್ಕೆ ಹರಿಗಢವೆಂದು ಪುನರ್‌ ನಾಮಕರಣ ಮಾಡಲು ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ವಿಎಚ್‌ಪಿ ಇದೇ ಸಂದರ್ಭದಲ್ಲಿ ಘೋಷಿಸಿತು.

English summary
VHP leader Sadhvi Prachi Arya has said that the 'Ghar Wapsi' programme will continue till the 15 crore people who left the Hinduism after Independence, are "reconverted to Hinduism".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X