ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಲಕ ಮುಸ್ಲಿಂ ಆಗಿದ್ದಕ್ಕೆ ಓಲಾ ರೈಡ್ ರದ್ದುಪಡಿಸಿದ ವಿಎಚ್‌ಪಿ ಮುಖಂಡ

By Sachhidananda Acharya
|
Google Oneindia Kannada News

ಲಕ್ನೋ, ಏಪ್ರಿಲ್ 23: ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ 'ಓಲಾ' ಸಂಸ್ಥೆಯಲ್ಲಿ ಬುಕ್ ಮಾಡಿದ್ದ ಕ್ಯಾಬ್ ನ್ನು ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ವಿಎಚ್‌ಪಿ ಮುಖಂಡರೊಬ್ಬರು ರದ್ದು ಮಾಡಿದ್ದಾರೆ. ಈ ಕುರಿತು ಅವರು ಟ್ಟಿಟ್ಟರ್ ಸಂದೇಶ ಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ.

ತಾನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಸಕ್ರಿಯ ಸದಸ್ಯ ಎಂದು ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿರುವ ಅಭಿಷೇಕ್ ಮಿಶ್ರಾ ಎಂಬವರು "ಚಾಲಕ ಮುಸ್ಲಿಂ ಆದ್ದರಿಂದ ಓಲಾ ಕ್ಯಾಬ್ ಬುಕ್ಕಿಂಗ್ ರದ್ದುಪಡಿಸಿದೆ. ನನ್ನ ಹಣವನ್ನು ಜಿಹಾದಿಗಳಿಗೆ ನೀಡಲು ನನಗೆ ಇಷ್ಟವಿಲ್ಲ," ಎಂದು ಬರೆದುಕೊಂಡಿದ್ದರು. ಜೊತೆಗೆ ಬುಕ್ಕಿಂಗ್ ರದ್ದುಪಡಿಸಿದ್ದರ ಸ್ಕ್ರೀನ್ ಶಾಟ್ ನ್ನೂ ಹಂಚಿಕೊಂಡಿದ್ದರು.

ಪ್ರಯಾಣಿಕರಿಗೆ ಓಲಾ ನೀಡಲಿದೆ ವಿಮೆ: ನಿಶ್ಚಿಂತೆಯಿಂದ ಪ್ರಯಾಣಿಸಿಪ್ರಯಾಣಿಕರಿಗೆ ಓಲಾ ನೀಡಲಿದೆ ವಿಮೆ: ನಿಶ್ಚಿಂತೆಯಿಂದ ಪ್ರಯಾಣಿಸಿ

ಅವರ ಪ್ರೊಫೈಲ್ ಮಾಹಿತಿಗಳ ಪ್ರಕಾರ ಅವರು ಲಖನೌನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಅವರು ಮೂಲತಃ ಅಯೋಧ್ಯೆಯವರಾಗಿದ್ದಾರೆ. ವಿಶೇಷವೆಂದರೆ ಹೀಗೆ ಧರ್ಮ ದ್ವೇಷ ಬಿತ್ತುತ್ತಿರುವ ಮಿಶ್ರಾರನ್ನು ಕೇಂದ್ರ ಸಚಿವರಾದ ಮಹೇಶ್ ಶರ್ಮಾ, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್ ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಟ್ಟೀಟ್ ಗೆ ಆಕ್ರೋಶ

ಅಭಿಷೇಕ್ ಟ್ಟೀಟ್ ಗೆ ಟ್ಟಿಟ್ಟರಿನಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಮನವಿಯನ್ನೂ ಸಲ್ಲಿಸಿದ್ದಾರೆ.

ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಪ್ರಯಾಣಿಕರ ಪಟ್ಟಿಯಿಂದ ಅಭಿಷೇಕ್ ರನ್ನು ಕೈ ಬಿಡಿ ಎಂದು ಓಲಾ ಕಂಪನಿಯನ್ನು ಒತ್ತಾಯಿಸಿದ್ದಾರೆ.

ಪ್ರಯಾಣಿಕರಿಗೆ ಓಲಾ ಮನವಿ

ಅಭಿಷೇಕ್ ಮಿಶ್ರಾ ಟ್ಟೀಟ್ ಗೆ ಸಂಬಂಧಿಸಿದಂತೆ ಓಲಾ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ನಮ್ಮದು ಜಾತ್ಯಾತೀತ ಸಂಸ್ಥೆ. ನಾವು ಚಾಲಕರನ್ನು ಮತ್ತು ಪ್ರಯಾಣಿಕರನ್ನು ಧರ್ಮ, ಜಾತಿ, ಲಿಂಗದ ಆಧಾರದಲ್ಲಿ ನೋಡುವುದಿಲ್ಲ. ಎಲ್ಲರನ್ನೂ ಗೌರವದಿಂದ ಕಾಣಿ ಎಂಬುದು ನಮ್ಮ ಚಾಲಕರು ಮತ್ತು ಪ್ರಯಾಣಿಕರಿಗೆ ನಮ್ಮ ಮನವಿ ಎಂದು ಹೇಳಿದೆ.

English summary
Taxi aggregator Ola Cabs on Sunday urged a person not to discriminate on religious lines after the latter cancelled his ride as the driver was a Muslim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X