ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಹಿಂಪ, ಬಜರಂಗದಳವನ್ನು ಧಾರ್ಮಿಕ ಉಗ್ರ ಸಂಘಟನೆಗಳು ಎಂದ ಅಮೆರಿಕಾ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 15: ಅಮೆರಿಕಾದ ಪ್ರಖ್ಯಾತ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನು ಧಾರ್ಮಿಕ ಉಗ್ರಗಾಮಿ ಸಂಘಟನೆಗಳು ಎಂದು ಹೇಳಿದೆ. ಆರ್.ಎಸ್.ಎಸ್ ನ್ನು ಮಾತ್ರ ರಾಷ್ಟ್ರೀಯವಾದಿ ಸಂಘಟನೆ ಎಂದಿದೆ.

'ರಾಜಕೀಯ ಒತ್ತಡ ಸಂಘಟನೆಗಳು ಮತ್ತು ನಾಯಕರು' ಎಂಬ ವಿಭಾಗದ ಕೆಳಗೆ ವಿಎಚ್ ಪಿ, ಬಜರಂಗದಳ ಮತ್ತು ಆರ್ ಎಸ್ಎಸ್ ಜೊತೆಗೆ ಇನ್ನೂ ಎರಡು ಸಂಘಟನೆಗಳನ್ನು ಸಿಐಎ ಸೇರಿಸಿದೆ. ಹುರಿಯತ್ ನ್ನು ಪ್ರತ್ಯೇಕತಾವಾದಿ ಸಂಘಟನೆ ಎಂದು ಕರೆದಿರುವ ಅಮೆರಿಕಾ, ಜಮಿಯತ್ ಉಲೇಮಾ ಹಿಂದ್ ಅನ್ನು ಧಾರ್ಮಿಕ ಸಂಘಟನೆ ಎನ್ನಲಾಗಿದೆ.

ವಿಎಚ್‌ಪಿ ಸದಸ್ಯರ ಫುಂಡಾಟ, ತಾಜ್‌ ಮಹಲ್‌ನ ದಕ್ಷಿಣ ದ್ವಾರ ಧ್ವಂಸವಿಎಚ್‌ಪಿ ಸದಸ್ಯರ ಫುಂಡಾಟ, ತಾಜ್‌ ಮಹಲ್‌ನ ದಕ್ಷಿಣ ದ್ವಾರ ಧ್ವಂಸ

ಎಲ್ಲಾ ದೇಶಗಳ ಫ್ಯಾಕ್ಟ್ ಬುಕ್ ಅನ್ನು ಸಿಐಎ ಇದೇ ಜೂನ್ 4 ರಂದು ತಯಾರಿಸಿದ್ದು ಅದರಲ್ಲಿ ಈ ಉಲ್ಲೇಖವಿದೆ.

VHP, Bajrang Dal a militant religious outfit, says CIA factbook

1984ರಲ್ಲಿ ಉತ್ತರ ಪ್ರದೇಶದಲ್ಲಿ ಜನ್ಮತಾಳಿದ ಬಜರಂಗದಳ ಇಂದು ದೇಶದಲ್ಲಿ 2,500 ಅಖಂಡಗಳನ್ನು ಹೊಂದಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಬೇಡಿಕೆ ಮುಂದಿಡುತ್ತಾ ಬಂದಿದೆ.

ಕಾನೂನು ಪ್ರಕ್ರಿಯೆಗೆ ಸಿದ್ಧತೆ

ಅಮೆರಿಕಾದ ಗುಪ್ತಚರ ಇಲಾಖೆಯ ತೀರ್ಮಾನದಿಂದ ಬಜರಂಗದಳ, ವಿಹಿಂಪ ಆಘಾತಗೊಂಡಿದ್ದು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿವೆ.

ಕಾನೂನು ಮಾದರಿಯಲ್ಲಿ ತಮಗೆ ಅಂಟಿರುವ ಟ್ಯಾಗ್ ತೆಗೆದು ಹಾಕಲು ಈ ಎರಡು ಸಂಸ್ಥೆಗಳು ಚಿಂತನೆ ನಡೆಸಿವೆ. ಇದಕ್ಕಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿವೆ.

English summary
The Central Intelligence Agency (CIA) of US has classified Vishwa Hindu Parishad (VHP) and Bajrang Dal as “ militant religious outfits”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X