ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 15 ರಿಂದ ಆಗಸ್ಟ್ 20 ರವರೆಗೆ CUET UG 2022 ಪರೀಕ್ಷೆ: ಪ್ರವೇಶ ಪತ್ರ ಬಿಡುಗಡೆ

|
Google Oneindia Kannada News

ರಾಷ್ಟ್ರೀಯ ಪರೀಕ್ಷಾ ಏಜನ್ಸಿ (NTA) ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (CUET UG) 2022ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ CUET (UG) ಅನ್ನು ಜುಲೈ 15, 2022 ರಿಂದ ಆಗಸ್ಟ್ 20, 2022 ರವರೆಗೆ (ಇತರ ಪದವಿಪೂರ್ವ ಪರೀಕ್ಷೆಗಳ ದಿನಗಳನ್ನು ಹೊರತುಪಡಿಸಿ) ಭಾರತದಾದ್ಯಂತ 500 ನಗರಗಳಲ್ಲಿ ಮತ್ತು ಭಾರತದ ಹೊರಗಿನ 10 ನಗರಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದೆ.

CUET UG 2022 ಅನ್ನು ಸರಿಸುಮಾರು 14,90,000 (ಹದಿನಾಲ್ಕು ಲಕ್ಷ ತೊಂಬತ್ತು ಸಾವಿರ) ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿದೆ. ಮೊದಲ ಸ್ಲಾಟ್‌ನಲ್ಲಿ ಸುಮಾರು 8,10,000 (ಎಂಟು ಲಕ್ಷ ಮತ್ತು ಹತ್ತು ಸಾವಿರ) ಅಭ್ಯರ್ಥಿಗಳು ಮತ್ತು ಸರಿಸುಮಾರು 6,80,000 (ಆರು ಲಕ್ಷ ಎಂಬತ್ತು ಸಾವಿರ) ಅಭ್ಯರ್ಥಿಗಳು ಎರಡನೇ ಸ್ಲಾಟ್‌ನಲ್ಲಿ ಪರೀಕ್ಷೆ ನಿಗಧಿಯಾಗಿದೆ. ಈ ಅಭ್ಯರ್ಥಿಗಳು 90 ವಿಶ್ವವಿದ್ಯಾನಿಲಯಗಳಲ್ಲಿ 54,555 ವಿಶಿಷ್ಟ ಸಂಯೋಜನೆಯ ವಿಷಯಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಸಿಯುಇಟಿ ಯುಜಿ 2022 ಪ್ರವೇಶ ಪರೀಕ್ಷೆಯು ಜುಲೈ 15, 16, 19, 20, ಮತ್ತು ಆಗಸ್ಟ್ 5, 8, 6, 7, 8, 10, 2022 ರಂದು ನಡೆಯಲಿದೆ. ಈ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಸಿಯುಇಟಿ ಯುಜಿ 2022 ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ cuet.samarth.ac.in ಅಥವಾ nta.ac.in ಗೆ ಭೇಟಿ ನೀಡಿ ಪಡೆಯಬಹುದಾಗಿದೆ.

ಪರೀಕ್ಷೆಯ ದಿನಾಂಕ

ಪರೀಕ್ಷೆಯ ದಿನಾಂಕ

ಹೆಚ್ಚಿನ ಸಂಖ್ಯೆಯ ವಿಷಯಗಳ ದೃಷ್ಟಿಯಿಂದ, ಪ್ರತಿಯೊಬ್ಬ ಅಭ್ಯರ್ಥಿಗೆ ವಿಶಿಷ್ಟವಾದ ದಿನಾಂಕ ಹಾಳೆಯನ್ನು ರಚಿಸಲಾಗಿದೆ. ಅದರಂತೆ, ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷೆಯ ದಿನಾಂಕ ಮತ್ತು ಮುಂಗಡ ಸೂಚನೆ ಸ್ಲಿಪ್ ಅನ್ನು cuet.samarth.ac.in ನಲ್ಲಿ ನೀಡಲಾಗುತ್ತಿದೆ. cuet.samarth.ac.in ವೆಬ್‌ಸೈಟ್‌ನಿಂದ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬೇಕು/ಡೌನ್‌ಲೋಡ್ ಮಾಡಬೇಕಾಗುತ್ತದೆ.

ಪ್ರತಿ ಅಭ್ಯರ್ಥಿಯ ಸಿಟಿ ಇಂಟಿಮೇಶನ್ ಸ್ಲಿಪ್ ಸ್ಲಾಟ್ 1 ಮತ್ತು ಸ್ಲಾಟ್ 2 ರಲ್ಲಿ ನೀಡಲಾದ ವಿಷಯಗಳು / ಭಾಷೆ / ಮಾಧ್ಯಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮತ್ತು ದಿನಾಂಕ ಹಾಗೂ ನಗರವನ್ನು ನಿಗದಿಪಡಿಸಲಾಗಿದೆ. ಜುಲೈ 17, 2022 ರಂದು (ಭಾನುವಾರ) ನಡೆಯಲಿರುವ NEET (UG) - 2022 ಅನ್ನು ಗಮನದಲ್ಲಿಟ್ಟುಕೊಂಡು ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಜೀವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳನ್ನು ಹಂತ II ಕ್ಕೆ ತೆಗೆದುಕೊಳ್ಳಲಾಗಿದೆ.

ಪರೀಕ್ಷಾ ಕೇಂದ್ರದ ವಿವರ

ಪರೀಕ್ಷಾ ಕೇಂದ್ರದ ವಿವರ

ಪರೀಕ್ಷಾ ಕೇಂದ್ರದ ವಿವರಗಳನ್ನು ತೋರಿಸುವ ಹಂತ I ರ ಪ್ರವೇಶ ಪತ್ರ ಜುಲೈ 12, 2022 ಸಂಜೆ 06:00ರಿಂದ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.

ಅಭ್ಯರ್ಥಿಗಳಿಗೆ ಅವರ ಆಯ್ಕೆಯ ನಗರವನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಆದಾಗ್ಯೂ, ನಗರದ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ಸಿಟಿ ಇಂಟಿಮೇಶನ್ ಸ್ಲಿಪ್ ಅಥವಾ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ತೊಂದರೆಯಿದ್ದರೆ, ಅಭ್ಯರ್ಥಿಯು NTA ಗೆ 011-40759000 ಗೆ ಕರೆ ಮಾಡಬಹುದು ಅಥವಾ [email protected] ಗೆ ಇಮೇಲ್ ಕಳುಹಿಸಬಹುದು.

ಜೂನ್ 25, 2022 ರ ಸಾರ್ವಜನಿಕ ಸೂಚನೆಯ ಮೂಲಕ ಈಗಾಗಲೇ ತಿಳಿಸಿರುವಂತೆ, CUET (UG) 2022 ರ ಅಡಿಯಲ್ಲಿ ಒಳಗೊಂಡಿರುವ ಎಲ್ಲಾ ವಿಷಯಗಳು / ಭಾಷೆಗಳು / ಸಾಮಾನ್ಯ ಪರೀಕ್ಷೆಯ ಅಭ್ಯಾಸ ಪ್ರಶ್ನೆಗಳು http://203.122.47.149:7999/ ನಲ್ಲಿ ಲಭ್ಯವಿದೆ. ಪರೀಕ್ಷೆಗೆ ಸಂಬಂಧಿಸಿದ ಇತ್ತೀಚಿನ ನವೀಕರಣಗಳಿಗಾಗಿ ಅಭ್ಯರ್ಥಿಗಳು NTA ವೆಬ್‌ಸೈಟ್ (ಗಳು) www.nta.ac.in ಮತ್ತು cuet.samarth.ac.in ನೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.

ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ

ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ

ಅಧಿಕೃತ ವೆಬ್‌ಸೈಟ್‌ cuet.samarth.ac.in.ಗೆ ಭೇಟಿ ನೀಡಿ.

ಮುಖಪುಟದಲ್ಲಿ "CUET UG 2022 ಅಡ್ಮಿಟ್ ಕಾರ್ಡ್" ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ಲಾಗಿನ್ ವಿವರಗಳನ್ನು ನಮೂದಿಸಿ.

ಸಿಯುಇಟಿ ಯುಜಿ 2022 ಪ್ರವೇಶ ಪತ್ರ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ನಂತರ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್‌ ತೆಗೆದುಕೊಳ್ಳಿ.

19 ವಿದೇಶಿ ಭಾಷೆಗಳ ಆಯ್ಕೆ

19 ವಿದೇಶಿ ಭಾಷೆಗಳ ಆಯ್ಕೆ

ಸಿಯುಇಟಿ ಯುಜಿ 2022 ಪ್ರವೇಶ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಒಡಿಯಾ, ಬೆಂಗಾಲಿ, ಅಸ್ಸಾಮಿ ಮತ್ತು ಉರ್ದು ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದಲ್ಲದೇ ಅಭ್ಯರ್ಥಿಗಳು ಫ್ರೆಂಚ್‌, ಜರ್ಮನ್‌, ಜಪಾನೀಸ್, ರಷ್ಯನ್, ಬೋಡೋ, ಸಂತಾಲಿ ಸೇರಿದಂತೆ ಇತರೆ 19 ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬಹುದಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ

ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಈ ಸಾಮಾನ್ಯ ಪ್ರವೇಶ ಪರೀಕ್ಷೆಯ ಉದ್ದೇಶ. ಹಾಗಂತ ಇದು ಹೊಸದಾಗಿ ತಂದಿದ್ದೇನೂ ಅಲ್ಲ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಅಂದರೆ 2010ರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಸಿಇಟಿ) ಜಾರಿ ಮಾಡಲಾಗಿತ್ತು. ಆದರೆ, ಕಳೆದ ವರ್ಷದವರೆಗೂ ಕೇವಲ 14 ವಿಶ್ವವಿದ್ಯಾಲಯಗಳು ಮಾತ್ರ ಇದನ್ನು ಅನುಸರಿಸುತ್ತಿದ್ದವು. ಹೀಗಾಗಿ ಇದು ವಿಫಲವಾಗಿತ್ತು.

ಈಗ ಇದೇ ಮಾದರಿಯನ್ನು ಸ್ವಲ್ಪ ಮಾರ್ಪಡಿಸಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ) ಎಂದು ಬದಲಿಸಲಾಗಿದೆ. ದೇಶದ 45 ವಿಶ್ವವಿದ್ಯಾಲಯಗಳು ಇನ್ನು ಮುಂದೆ ಇದನ್ನು ಕಡ್ಡಾಯವಾಗಿ ಅನುಸರಿಸರಿಸಲಿವೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಎಟಿ) ಈ ಪರೀಕ್ಷೆಯನ್ನು ನಡೆಸಲಿದೆ.

Recommended Video

Pakistanದ ಗೂಡಾಚಾರಿಗಳು ಭಾರತಕ್ಕೆ ಬರೋದು ಇಷ್ಟು ಸುಲಭವೇ | *World | OneIndia Kannada

English summary
CUET UG Exam 2022: National Testing Agency (NTA) has released Common University Entrance Test (CUET UG) 2022 admit card. Know How to Download Admit Card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X