ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಗಿ‌ಲ್‌ ಹುತಾತ್ಮ ಸೈನಿಕರ ನೆನಪಿಗಾಗಿ ಯುದ್ಧ ಸ್ಮಾರಕ

By Ashwath
|
Google Oneindia Kannada News

ನವದೆಹಲಿ, ಜು.26: ಕಾರ್ಗಿ‌ಲ್‌ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರ ನೆನಪಿಗಾಗಿ ಯುದ್ಧ ಸ್ಮಾರಕ ಮತ್ತು ವಸ್ತುಸಂಗ್ರಹಾಲಯವನ್ನು ನಿರ್ಮಾ‌ಣ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಕಾರ್ಗಿಲ್ ಯುದ್ಧ ವಿಜಯದ 15ನೇ ವರ್ಷಾಚರಣೆಯ ಅಂಗವಾಗಿ ಇಂಡಿಯಾ ಗೇಟ್‌ನ ಅಮರ ಜವಾನ್ ಜ್ಯೋತಿ ಬಳಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಿ ಅರುಣ್‌ ಜೇಟ್ಲಿ ಈ ವಿಚಾರ ತಿಳಿಸಿದರು.[ಕಾರ್ಗಿಲ್‌ ವಿಜಯ್‌ ದಿವಸ: ಪಾಕ್ ಗುಂಡಿನ ದಾಳಿ]

Arun Jaitley

ಕೇಂದ್ರ ಸರ್ಕಾರ ಈ ಯುದ್ಧ ಸ್ಮಾರಕ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ‌ ಬಜೆಟ್‌ನಲ್ಲಿ ಹಣ ನಿಗದಿಪಡಿಸಿದ್ದು ಸದ್ಯದಲ್ಲೇ ಜಾಗವನ್ನು ಅಂತಿಮಗೊಳಿಸಿದ ಬಳಿಕ ನಿರ್ಮಾ‌ಣ ಕೆಲಸ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಉತ್ತಮ ಸೌಲಭ್ಯಗಳನ್ನು ಹೊಂದುವ ಮೂಲಕ ನಮ್ಮ ಸೇನೆ ಶಕ್ತಿಶಾಲಿ ಸೇನೆಯಾಗಿ ರೂಪುಗೊಳ್ಳುತ್ತಿದೆ. ಈ ಕಾರಣಕ್ಕೆ ಪ್ರತಿವರ್ಷ‌ ರಕ್ಷಣೆಗಾಗಿ ಹೆಚ್ಚು ಹೆಚ್ಚು ಹಣವನ್ನು ವಿನಿಯೋಗಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಜೊತೆಗೆ ವಾಯುಸೇನೆ, ಭೂ ಸೇನೆ, ನೌಕಾಸೇನೆ ಮುಖ್ಯಸ್ಥರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಿದರು.

ಕಾರ್ಗಿಲ್ ವಿಜಯ ದಿವಸ ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ: ಕಾರ್ಗಿಲ್ ವಿಜಯ್‌ ದಿವಸ

English summary
The central government would soon finalise the venue for construction of a War Memorial and a museum in the honour of the soldiers who laid down their lives fighting the 1999 Kargil war with Pakistan, said Defence Minister Arun Jaitley after he paid homage to the martyrs at Amar Jawan Jyoti, India Gate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X