ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸಾವುಗಳ ಲೆಕ್ಕಾಚಾರ ಸರಿಯಾಗಿಲ್ಲ ಎಂಬ ವರದಿ ಸುಳ್ಳು ಎಂದ ಸರ್ಕಾರ

|
Google Oneindia Kannada News

ನವದೆಹಲಿ, ಜು.22: ಭಾರತದ ಕೋವಿಡ್‌ ಸಾವಿನ ಸಂಖ್ಯೆ ಸರಿಯಾಗಿ ಲೆಕ್ಕಹಿಡಿಯಲಾಗಿಲ್ಲ. ಕೋವಿಡ್‌ ಸಾವು ಈ ಲೆಕ್ಕಾಚಾರಕ್ಕೂ ಅಧಿಕ ಸಂಭವಿಸಿದೆ ಎಂಬ ವರದಿಯ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ ಸರ್ಕಾರ, ಹೆಚ್ಚುವರಿ ಸಾವುಗಳನ್ನು ಈ ವರದಿಗಳು ಕೋವಿಡ್‌ ಸಾವು ಎಂದು ಪರಿಗಣಿಸಿದ್ದಾರೆ. ಇದು ಸತ್ಯವನ್ನು ಆಧರಿಸಿಲ್ಲ, ಸಂಪೂರ್ಣವಾಗಿ ಸುಳ್ಳು ಸುದ್ದಿ ಎಂದು ಹೇಳಿದೆ.

ಭಾರತದಲ್ಲಿ ದೃಢವಾದ ಮತ್ತು ಕಾನೂನು ಆಧಾರಿತ ಮರಣ ನೋಂದಣಿ ವ್ಯವಸ್ಥೆಯನ್ನು ಗಮನಿಸಿದರೆ, ಸಾಂಕ್ರಾಮಿಕ ರೋಗ ಮತ್ತು ಅದರ ನಿರ್ವಹಣೆಯ ತತ್ವಗಳ ಪ್ರಕಾರ ಕೆಲವು ಪ್ರಕರಣಗಳು ಪತ್ತೆಯಾಗುವುದಿಲ್ಲ. ಸಾವುಗಳ ಲೆಕ್ಕವನ್ನು ಹಿಡಿಯದಿರುವುದು ಅಸಂಭವವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದ ನೈಜ ಕೋವಿಡ್ ಸಾವಿನ ಸಂಖ್ಯೆ ನಾಲ್ಕಲ್ಲ ಕನಿಷ್ಠ 30 ಲಕ್ಷ ಎಂದ ಅಧ್ಯಯನಭಾರತದ ನೈಜ ಕೋವಿಡ್ ಸಾವಿನ ಸಂಖ್ಯೆ ನಾಲ್ಕಲ್ಲ ಕನಿಷ್ಠ 30 ಲಕ್ಷ ಎಂದ ಅಧ್ಯಯನ

ಸಾಂಕ್ರಾಮಿಕ ಸಮಯದಲ್ಲಿ ಭಾರತದ ಸಾವಿ ಸಂಖ್ಯೆ ಲಕ್ಷಾಂತರ ಆಗಿರಬಹುದು ಎಂದು ಆರೋಪಿಸಿ ಇತ್ತೀಚಿಗೆ ಕೆಲವು ಮಾಧ್ಯಮಗಳು ವರದಿ ಮಾಡಿದೆ. ಅಧಿಕೃತ ಸಾವಿನ ಸಂಖ್ಯೆಯೂ ತೀರಾ ಕಡಿಮೆಯಾಗಿದೆ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಸುದ್ದಿ ವರದಿಗಳಲ್ಲಿ ಇತ್ತೀಚಿನ ಕೆಲವು ಅಧ್ಯಯನಗಳ ಆವಿಷ್ಕಾರಗಳನ್ನು ಉಲ್ಲೇಖಿಸಲಾಗಿದೆ.

Vastly Undercounted Covid Deaths Report is Fallacious says Government

ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರ, "ಯಾವುದೇ ಸೋಂಕಿತ ವ್ಯಕ್ತಿಯು ಸಾಯುವ ಸಾಧ್ಯತೆಯು ದೇಶದಾದ್ಯಂತ ಒಂದೇ ಆಗಿರುತ್ತದೆ ಎಂಬ ಧೈರ್ಯಶಾಲಿ ಊಹೆಯ ಆಧಾರದಲ್ಲಿ ಈ ಆರೋಪ ಮಾಡಲಾಗಿದೆ. ಹಾಗೆಯೇ ಜನಾಂಗ, ಜನಾಂಗೀಯತೆ, ಜನಸಂಖ್ಯೆಯ ಜೀನೋಮಿಕ್ ಸಂವಿಧಾನ, ಈ ಹಿಂದಿನ ಸೋಂಕಿನ ಮರಣ ಪ್ರಮಾಣ, ಇತರೆ ರೋಗಗಳು, ರೋಗನಿರೋಧಕ ಶಕ್ತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ," ಎಂದು ಹೇಳಿಕೆ ತಿಳಿಸಿದೆ.

ಇನ್ನ ಕೋವಿಡ್‌ನ ಮತ್ತೊಂದು ಸಂಭಾವ್ಯ ಆತಂಕವನ್ನು ಅಧ್ಯಯನಗಳು ವ್ಯಕ್ತಪಡಿಸಿದೆ. ರೋಗ ನಿರೋಧಕ ಶಕ್ತಿಗಳು ಕಾಲ ಕಳೆದಂತೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ಹೇಳಿದೆ. ಇದು ಕೋವಿಡ್‌ನ ಸಾವಿನ ಸಂಖ್ಯೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದೆ.

ರಾಜ್ಯದಲ್ಲಿ ಕೇವಲ 4 ತಿಂಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕುರಾಜ್ಯದಲ್ಲಿ ಕೇವಲ 4 ತಿಂಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು

"ಇದಲ್ಲದೆ, ಎಲ್ಲಾ ಹೆಚ್ಚುವರಿ ಮರಣದ ಅಂಕಿಅಂಶಗಳು ಕೋವಿಡ್‌ ಸಾವುಗಳು ಎಂದು ಊಹಿಸಲಾಗಿದೆ. ಇದು ಸತ್ಯಗಳನ್ನು ಆಧರಿಸಿಲ್ಲ. ಸಂಪೂರ್ಣವಾಗಿ ಸುಳ್ಳಾಗಿದೆ. ಬೇರೆ ಕಾರಣದಿಂದ ಉಂಟಾದ ಹೆಚ್ಚುವರಿ ಮರಣದ ಅಂಕಿಅಂಶವನ್ನು ಕೋವಿಡ್‌ ಸಾವುಗಳು ಎಂದು ಹೇಳಲಾಗುತ್ತಿದೆ. ಈ ವರದಿಗಳು ಸಂಪೂರ್ಣವಾಗಿ ತಪ್ಪುದಾರಿಗೆಳೆಯುವಂತಿದೆ,"ಎಂದಿದೆ.

ಭಾರತವು ಸಂಪೂರ್ಣ ಸಂಪರ್ಕ ಪತ್ತೆಹಚ್ಚುವ ತಂತ್ರವನ್ನು ಹೊಂದಿದೆ. ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು, ರೋಗಲಕ್ಷಣ ಅಥವಾ ಲಕ್ಷಣರಹಿತವಾಗಿದ್ದರೂ, ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಆರ್‌ಟಿ-ಪಿಸಿಆರ್‌ನಲ್ಲಿ ಧನಾತ್ಮಕ ಬಂದರೆ ಮಾತ್ರ ಅದು ಕೋವಿಡ್‌ನ ನಿಜವಾದ ವರದಿಯಾಗಿರುತ್ತದೆ. ಇನ್ನು ದೇಶದಲ್ಲಿ 2,700 ಕ್ಕೂ ಹೆಚ್ಚು ಪರೀಕ್ಷಾ ಪ್ರಯೋಗಾಲಯಗಳು ಇದೆ. ಪರೀಕ್ಷೆಗೆ ಒಳಪಡುವ ಯಾರಾದರೂ ಬಯಸಿದರೆ ಅವರಿಗೆ ಪರೀಕ್ಷೆ ಮಾಡಲಾಗುತ್ತದೆ. ರೋಗಲಕ್ಷಣಗಳ ಬಗ್ಗೆ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ. ಅಗತ್ಯವಿದ್ದರೆ ಜನರು ಆಸ್ಪತ್ರೆಗೆ ದಾಖಲಾಗಲೂ ಕೂಡಾ ಸೂಚಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಸರ್ಕಾರ ವಿವರಿಸಿದೆ.

Recommended Video

ಶ್ರೀಲಂಕಾ ತಂಡಕ್ಕೆ ಎರಡನೇ ಪಂದ್ಯದ ನಂತರ ಫೈನ್ ಕಟ್ಟಲು ಕಾರಣವೇನು | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
"Vastly Undercounted" Covid Deaths Report is Fallacious says Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X