ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vande Bharat Metro: ದೇಶದಲ್ಲಿ ಶೀಘ್ರವೇ "ವಂದೇ ಮೆಟ್ರೋ" ಪ್ರಾರಂಭ: ಅಶ್ವಿನಿ ವೈಷ್ಣವ್‌, ವಿಶೇಷತೆ ತಿಳಿಯಿರಿ

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಿನಿ ಆವೃತ್ತಿಯಾದ "ವಂದೇ ಮೆಟ್ರೋ" ಸೇವೆಯನ್ನು ಶೀಘ್ರದಲ್ಲೇ ದೇಶದಲ್ಲಿ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ "ವಂದೇ ಮೆಟ್ರೋ"ದ ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ

|
Google Oneindia Kannada News

ನವದೆಹಲಿ, ಫೆಬ್ರವರಿ, 02: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಿನಿ ಆವೃತ್ತಿಯಾದ "ವಂದೇ ಮೆಟ್ರೋ" ಸೇವೆಗಳನ್ನು ಶೀಘ್ರದಲ್ಲೇ ದೇಶದಲ್ಲಿ ಪ್ರಾರಂಭಿಸಲಾಗುವುದು. "ವಂದೇ ಮೆಟ್ರೋ" ವಿನ್ಯಾಸ ಮತ್ತು ಉತ್ಪಾದನೆ ಇದೇ ವರ್ಷದಲ್ಲೇ ಪೂರ್ಣಗೊಳ್ಳಲಿದೆ. ದೊಡ್ಡ ನಗರಗಳಲ್ಲಿ ಜನರು ತಮ್ಮ ಉದ್ಯೋಗದ ಸ್ಥಳ ಮತ್ತು ಊರುಗಳ ನಡುವೆ ಆರಾಮವಾಗಿ ಪ್ರಯಾಣಿಸಲು ಸಹಾಯ ಮಾಡುವ ಉದ್ದೇಶದಿಂದ "ವಂದೇ ಮೆಟ್ರೋ" ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ. ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಕೇಂದ್ರ ಬಜೆಟ್ ಮಂಡಿಸಿದ ನಂತರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರು "ವಂದೇ ಮೆಟ್ರೋ" ಯೋಜನೆಯನ್ನು ಘೋಷಿಸಿದ್ದಾರೆ.

ಶೀಘ್ರದಲ್ಲೇ ಬರಲಿದೆ "ವಂದೇ ಮೆಟ್ರೋ"

"ದೊಡ್ಡ ನಗರಗಳ ಸುತ್ತಮುತ್ತ ಪ್ರಯಾಣಿಸಲು ವಂದೇ ಭಾರತ್‌ ಮೆಟ್ರೋ ಸೇವೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಲ್ಲಿ ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾದ ವಂದೇ ಮೆಟ್ರೋ ರೈಲುಗಳನ್ನು ಶೀಘ್ರದಲ್ಲೇ ದೇಶದಲ್ಲಿ ಪರಿಚಯಿಸಲಾಗುವುದು," ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ಧಾರೆ.

ಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಮತ್ತೆ ಕಲ್ಲು ತೂರಾಟಬಿಹಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಮತ್ತೆ ಕಲ್ಲು ತೂರಾಟ

ಈ ವರ್ಷವೇ ವಿನ್ಯಾಸ ಪೂರ್ಣಗೊಳ್ಳಲಿದೆ

"ನಾವು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ದೊಡ್ಡ ನಗರಗಳ ಸುತ್ತಲೂ ಪ್ರಯಾಣ ಬೆಳೆಸುವವರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಅದಕ್ಕಾಗಿ ನಾವು ವಂದೇ ಭಾರತ್‌ ರೈಲಿಗೆ ಸಮಾನವಾದ ವಂದೇ ಮೆಟ್ರೋವನ್ನು ತರುತ್ತಿದ್ದೇವೆ. ಈ ವರ್ಷ ವಿನ್ಯಾಸ ಮತ್ತು ಉತ್ಪಾದನೆ ಪೂರ್ಣಗೊಳ್ಳಲಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ರೈಲಿನ ಉತ್ಪಾದನೆಯ ವೇಗವನ್ನು ಹೆಚ್ಚಿಸಲಾಗುವುದು," ಎಂದು ಮಾರಹಿತಿ ನೀಡಿದರು.

Vande metro coming soon: Ashwini Vaishnaw

"ವಂದೇ ಮೆಟ್ರೋ"ದ ವಿಶೇಷತೆಗಳು

1. ಹಾಗೆಯೇ ವೇಗದ ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಪಡಿಸುತ್ತಿದೆ.

2. ಈ ರೈಲುಗಳು ಎಂಟು ಕೋಚ್‌ಗಳನ್ನು ಹೊಂದಿದ್ದು, ಮೆಟ್ರೋ ರೈಲಿನಂತೆ ಇರಲಿವೆ.

3. ವಂದೇ ಭಾರತ್ ಮೆಟ್ರೋ ಪ್ರಯಾಣಿಕರು ಇದರಲ್ಲಿ ಸುಖಕರ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿದೆ.

Vande metro coming soon: Ashwini Vaishnaw

4. ಜನರು ತಮ್ಮ ಊರುಗಳಿಂದ ದೊಡ್ಡ ನಗರಗಳಲ್ಲಿನ ಕಚೇರಿಗಳಿಗೆ ಆರಾಮವಾಗಿ ಪ್ರಯಾಣಿಸಲು ಸಹಾಯ ಮಾಡಲು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

5. ರೈಲ್ವೇ ಸಚಿವಾಲಯವು ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಲಕ್ನೋ ಮೂಲದ ಆರ್‌ಡಿಎಸ್‌ಒ ಜನರಲ್ ಮ್ಯಾನೇಜರ್‌ಗಳಿಗೆ ಎಂಟು ಬೋಗಿಗಳ ವಂದೇ ಭಾರತ್ ರೈಲುಗಳನ್ನು ಶೀಘ್ರವಾಗಿ ಹೊರತರುವಂತೆ ನಿರ್ದೇಶಿಸಿದೆ.

ಒಟ್ಟಾರೆಯಾಗಿ ಈಗಾಗಲೇ ದೇಶದಲ್ಲಿ ವಂದೇ ಭಾರತ್‌ ರೈಲಿನ ಸದ್ದು ಜೋರಾಗಿಯೇ ಇದೆ. ಇದೀಗ ರೈಲ್ವೇ ಇಲಾಖೆ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ದೊಡ್ಡ ನಗರಗಳ ಸುತ್ತಮುತ್ತ ಜನರ ಅನೂಕೂಲಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಿನಿ ಆವೃತ್ತಿಯಾದ "ವಂದೇ ಮೆಟ್ರೋ"ವನ್ನು ಬಿಡಲು ನಿರ್ಧರಿಸಿದೆ.

English summary
Vande metro coming soon says Ashwini Vaishnaw, here see details, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X