ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6ನೇ ಹಂತದ ವಂದೇ ಭಾರತ್ ಮಿಷನ್ ಬುಕ್ಕಿಂಗ್ ಆರಂಭ

|
Google Oneindia Kannada News

ನವದೆಹಲಿ, ಆಗಸ್ಟ್.27: ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವುದಕ್ಕಾಗಿ 6ನೇ ಹಂತದ ವಂದೇ ಭಾರತ್ ಮಿಷನ್ ಕಾರ್ಯಾಚರಣೆ ಸಪ್ಟೆಂಬರ್.01ರಿಂದ ಶುರುವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ತಿಳಿಸಿದೆ.

Recommended Video

Fixed Deposit ಮೇಲಿನ ಬಡ್ಡಿ ದರ ಇಳಿಕೆ ಮಾಡಿದ HDFC Bank | Oneindia Kannada

ಯುನೈಟೆಡ್ ಅರಬ್ ಎಮಿರೈಟ್ಸ್ ನಿಂದ ಭಾರತಕ್ಕೆ ಆಗಮಿಸಲು ಟಿಕೆಟ್ ಬುಕ್ಕಿಂಗ್ ಸೇವೆಯು ಗುರುವಾರದಿಂದ ಆರಂಭವಾಗಲಿದೆ ಎಂದು ಸಚಿವಾಲಯವು ತಿಳಿಸಿದೆ. ಬೆಳಗ್ಗೆ 10 ಗಂಟೆಯಿಂದ 11.30ವರೆಗೂ ಬುಕ್ಕಿಂಗ್ ಶುರುವಾಗಲಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಘೋಷಿಸಿದೆ.

ಭಾರತದಲ್ಲಿ 'ವಂದೇ ಭಾರತ್ ಮಿಷನ್' ನಿಯಮಗಳಲ್ಲಿ ಬದಲಾವಣೆಭಾರತದಲ್ಲಿ 'ವಂದೇ ಭಾರತ್ ಮಿಷನ್' ನಿಯಮಗಳಲ್ಲಿ ಬದಲಾವಣೆ

ಭಾರತೀಯ ರಾಯಭಾರ ಕಚೇರಿ, ಸಿಜಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾಗಿರುವ ಭಾರತೀಯ ಪ್ರಜೆಗಳು ತಮ್ಮ ವೆಬ್‌ಸೈಟ್‌ನಲ್ಲಿ ಅಥವಾ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಸಾಮಾನ್ಯ ವಾಪಸಾತಿ ದರದಲ್ಲಿ ವಿಮಾನಗಳನ್ನು ಕಾಯ್ದಿರಿಸಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Vande Bharat Mission: Air India Express Opens Bookings For Flights From UAE To India

ಅಕ್ಟೋಬರ್.24ರವರೆಗೂ ವಂದೇ ಭಾರತ್ ಮಿಷನ್:

ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯದ ಘೋಷಣೆ ಪ್ರಕಾರ ಸಪ್ಟೆಂಬರ್.01 ರಿಂದ 6ನೇ ಹಂತದ ವಂದೇ ಭಾರತ್ ಮಿಷನ್ ಕಾರ್ಯಾಚರಣೆ ಜಾರಿಯಲ್ಲಿರುತ್ತದೆ. ಆಕ್ಟೋಬರ್.24ರವರೆಗೂ ಕಾರ್ಯಾಚರಣೆ ಜಾರಿಯಲ್ಲಿರುತ್ತದೆ.

ಏರ್ ಟ್ರಾವೆಲ್ ಬಬಲ್ ವಿಮಾನಗಳ ಸಂಚಾರಿ ನಿಯಮಗಳ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಕೇಂದ್ರ ಸರ್ಕಾರದು ಜಾರಿಗೊಳಿಸಿದ ಹೊಸ ನಿಯಮಗಳ ಪ್ರಕಾರ, ಭಾರತಕ್ಕೆ ವಾಪಸ್ಸಾಗಲು ಬಯಸುವ ಪ್ರಯಾಣಿಕರೇ ಪ್ರಯಾಣದ ವೆಚ್ಚ ಭರಿಸಬೇಕು. ಪ್ರಯಾಣಿಕರು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬೇಕು. ಸಚಿವಾಲಯವು ಅರ್ಹ ಪ್ರಯಾಣಿಕರ ಪಟ್ಟಿಯನ್ನು ಕಾಲಕಾಲಕ್ಕೆ ಸರ್ಕಾರದ ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸುತ್ತದೆ ಎಂದು ತಿಳಿಸಿದೆ.

ವಂದೇ ಭಾರತ್ ಮಿಷನ್ ಅಡಿಯಲ್ಲಿ ಇದುವರೆಗೂ ವಿದೇಶಗಳಲ್ಲಿ ಕೊರೊನಾವೈರಸ್ ಸೋಂಕಿನ ಭೀತಿಯ ನಡುವೆ ಸಿಲುಕಿಕೊಂಡಿದ್ದ 11,23,000 ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಮಾಹಿತಿ ನೀಡಿದೆ.

English summary
Vande Bharat Mission: Air India Express Opens Bookings For Flights From UAE To India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X