ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vande Bharat Express : ನಾಲ್ಕನೇ ಬಾರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಜಾನುವಾರು ಡಿಕ್ಕಿ

|
Google Oneindia Kannada News

ಮುಂಬೈ, ಡಿಸೆಂಬರ್‌ 2: ಗಾಂಧಿನಗರ- ಮುಂಬೈ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಗುರುವಾರ ಸಂಜೆ ಗುಜರಾತ್‌ನ ಉದ್ವಾಡ ಮತ್ತು ವಾಪಿ ನಿಲ್ದಾಣಗಳ ನಡುವೆ ದನಕ್ಕೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಿಂದಾಗಿ ರೈಲಿನ ಮುಂಭಾಗದ ಪ್ಯಾನೆಲ್‌ಗೆ ಸಣ್ಣದೊಂದು ಗಾಯವಾಗಿದೆ. ಎರಡು ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ ನಂತರ ಈ ಮಾರ್ಗದಲ್ಲಿ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದ ನಾಲ್ಕನೇ ಘಟನೆಯಾಗಿದೆ.

ವಂದೇ ಭಾರತ್‌ ತಯಾರಿಸಲು 5 ಕಂಪೆನಿಗಳಿಂದ ಬಿಡ್‌ವಂದೇ ಭಾರತ್‌ ತಯಾರಿಸಲು 5 ಕಂಪೆನಿಗಳಿಂದ ಬಿಡ್‌

ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಮಾತನಾಡಿ, ಉದ್ವಾಡ ಮತ್ತು ವಾಪಿ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 87 ರ ಬಳಿ ಸಂಜೆ 6.23 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮುಂಭಾಗದ ಭಾಗದಲ್ಲಿ ಸಣ್ಣ ಡೆಂಟ್ ಆಗಿದೆ. ಡೆಂಟ್ ಅನ್ನು ಇಂದು ರಾತ್ರಿ ಸರಿಪಡಿಸಲಾಯಿತು. ಸ್ವಲ್ಪ ಸಮಯದ ನಂತರ, ರೈಲು ಸಂಜೆ 6.35 ಕ್ಕೆ ಪ್ರಯಾಣವನ್ನು ಪುನರಾರಂಭಿಸಿತು ಎಂದು ಅವರು ಹೇಳಿದರು.

Vande Bharat Express collided with cattle for the fourth time

ಕಳೆದ ನವೆಂಬರ್‌ 8ರಂದು ಗುಜರಾತ್‌ನ ಆನಂದ್ ಬಳಿ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹರಿದು 54 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಅಹಮದಾಬಾದ್‌ನ ನಿವಾಸಿ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂಬುವವರು ಆನಂದ್‌ನಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ತೆರಳುತ್ತಿದ್ದರು. ಈ ವೇಳೆ ಆನಂದ್ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದಾಗ ಸಂಜೆ 4.37 ಕ್ಕೆ ಅಪಘಾತ ಸಂಭವಿಸಿತ್ತು. ರೈಲು ಗಾಂಧಿನಗರ ರಾಜಧಾನಿಯಿಂದ ಮುಂಬೈ ಸೆಂಟ್ರಲ್‌ಗೆ ತೆರಳುತ್ತಿದ್ದು, ಇದು ಆನಂದ್ ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೆಚ್ಚಿದ ಜನಪ್ರಿಯತೆ, ಪ್ರಯಾಣಕ್ಕೆ ಅಧಿಕ ಬೇಡಿಕೆವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೆಚ್ಚಿದ ಜನಪ್ರಿಯತೆ, ಪ್ರಯಾಣಕ್ಕೆ ಅಧಿಕ ಬೇಡಿಕೆ

ಅಕ್ಟೋಬರ್‌ 29ರಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಪಘಾತ ಸಂಭವಿಸಿ ಗುಜರಾತ್‌ನ ವಲ್ಸಾದ್‌ನ ಅತುಲ್ ನಿಲ್ದಾಣದ ಬಳಿ ಹಸುವಿಗೆ ರೈಲು ಡಿಕ್ಕಿಯಾಗಿತ್ತು. ಇದರಿಂದಾಗಿ ರೈಲಿನ ಮುಂಭಾಗ ಹಾನಿಗೊಳಗಾಗಿತ್ತು. ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

English summary
The Gandhinagar-Mumbai Vande Bharat Superfast Express collided with a cow between Udwada and Vapi stations in Gujarat on Thursday evening, a railway official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X