ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿಯ ಮನೆಗೆಲಸ: ಸುಪ್ರೀಂಕೋರ್ಟ್ ಮಹತ್ವದ ರೂಲಿಂಗ್

|
Google Oneindia Kannada News

ನವದೆಹಲಿ, ಜ 7: ಏಳು ವರ್ಷದ ಹಿಂದಿನ ಅಪಘಾತದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಪತ್ನಿಯ ಮನೆಗೆಲಸವೂ ಪತಿಯ ಕೆಲಸದಷ್ಟೇ ಮುಖ್ಯ ಎನ್ನುವ ಅಭಿಮತವನ್ನು ವ್ಯಕ್ತಪಡಿಸಿದೆ.

ನ್ಯಾ.ಎನ್.ವಿ.ರಮಣ ಮತ್ತು ಸೂರ್ಯಕಾಂತ ಅವರ ನ್ಯಾಯಪೀಠ, "ಪತಿಯ ಕಚೇರಿಯ ಕೆಲಸ ಎಷ್ಟು ಮುಖ್ಯವೋ, ಪತ್ನಿಯ ಮನೆಗೆಲಸವೂ ಅಷ್ಟೇ ಪ್ರಾಮಖ್ಯತೆಯನ್ನು ಹೊಂದಿದೆ. ಇದನ್ನು ಕಡೆಗಣಿಸುವಂತಿಲ್ಲ"ಎನ್ನುವ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.

'ಲವ್ ಜಿಹಾದ್' ಕಾನೂನು ವಿವಾದ: ಪರಿಶೀಲನೆಗೆ ಕೋರ್ಟ್ ಒಪ್ಪಿಗೆ, ತಡೆ ನೀಡಲು ನಕಾರ'ಲವ್ ಜಿಹಾದ್' ಕಾನೂನು ವಿವಾದ: ಪರಿಶೀಲನೆಗೆ ಕೋರ್ಟ್ ಒಪ್ಪಿಗೆ, ತಡೆ ನೀಡಲು ನಕಾರ

ಇಪ್ಪತ್ತು ವರ್ಷದ ಹಿಂದಿನ ಲತಾ ವಾಧ್ವಾ ಪ್ರಕರಣವನ್ನು ಉಲ್ಲೇಖಿಸಿ ನಾ.ರಮಣ ಅವರು ತಮ್ಮ ತೀರ್ಪನ್ನು ಸಮರ್ಥಿಸಿಕೊಂಡಿದ್ದಾರೆ. ಜನಗಣತಿಯ ವೇಳೆ 15.99 ಮಹಿಳೆಯರು ತಮ್ಮ ಕೆಲಸವನ್ನು 'ಮನೆಗೆಲಸ' ಎಂದು ನಮೂದಿಸಿಕೊಂಡಿರುತ್ತಾರೆ. ಈ ರೀತಿ ನಮೂದಿಸಿಕೊಂಡಿರುವ ಪುರುಷರ ಸಂಖ್ಯೆ 57.9 ಲಕ್ಷ ಮಾತ್ರ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

The Value Of Womans Work At Home Not Less Than Her Office Going Husband, Supreme Court Ruling

2014ರಲ್ಲಿ ನವದೆಹಲಿಯಲ್ಲಿ ನಡೆದ ಘಟನೆಯೊಂದರಲ್ಲಿ ಅಪಘಾತ ಸಂಭವಿಸಿ ದಂಪತಿಗಳು ಮೃತ ಪಟ್ಟಿದ್ದರು. ಈ ದಂಪತಿಗಳನ್ನು ಅವಲಂಬಿಸಿಕೊಂಡಿದ್ದ ತಂದೆಗೆ 11.20ಲಕ್ಷ ರೂಪಾಯಿ ಪರಿಹಾರ ನೀಡಲು ವಿಮಾ ಕಂಪೆನಿ ನಿರ್ಧರಿಸಿತ್ತು.

ಆದರೆ, ಪತಿಯ ಕೆಲದಷ್ಟೇ ಪತ್ನಿಯ ಮನೆ ಕೆಲಸವೂ ಮುಖ್ಯ ಎಂದು ಪರಿಹಾರದ ಮೊತ್ತವನ್ನು ಮೇ, 2014ಕ್ಕೆ ಪೂರ್ವಾನ್ವಯವಾಗುವಂತೆ ಬಡ್ಡಿ ಸಮೇತ 33.20 ಲಕ್ಷ ರೂಪಾಯಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದೆ.

ಹೊಸ ಸಂಸತ್ ಕಟ್ಟಡ ಯೋಜನೆ: ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿಹೊಸ ಸಂಸತ್ ಕಟ್ಟಡ ಯೋಜನೆ: ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ

Recommended Video

ಆತ ಆಡೋದಕ್ಕೂ ಮೊದಲೇ ಭಾವುಕರಾಗಿದ್ದೇಕೆ ? | Mohammed Siraj | Oneindia Kannada

ಪ್ರತೀದಿನ ಮಹಿಳೆ 134 ಮತ್ತು ಪುರುಷರು 76 ನಿಮಿಷವನ್ನು ಮನೆಗೆಲಸ ಮಾಡಲು ಸಮಯ ನಿಯೋಗಿಸುತ್ತಾರೆ. ಹಾಗಾಗಿ, ಮಹಿಳೆಯ ಮನೆಗೆಲಸವೂ ಕಚೇರಿಗೆ ಹೋಗುವ ಪತಿಯ ಕೆಲಸದಷ್ಟೇ ಮುಖ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

English summary
The Value Of Woman's Work At Home Not Less Than Her Office Going Husband, Supreme Court Ruling,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X