• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಪಿಎನಿಂದ ವಾಜಪೇಯಿ ಯೋಜನೆಗಳ ಹೈಜಾಕ್

By ಪ್ರತಾಪ್ ಸಿಂಹ
|

ಭಾರತದ ನೀರಾವರಿ ಸಮಸ್ಯೆಗಾಗಿ ನದಿ ಜೋಡಣೆ, ಬರ ಪರಿಸ್ಥಿತಿ ಎದುರಿಸಿದ ರೀತಿ, ಸರ್ವ ಶಿಕ್ಷಾ ಅಭಿಯಾನವನ್ನು ಕಾಂಗ್ರೆಸ್ ಹೇಗೆ ದುರುಪಯೋಗ ಪಡಿಸಿದೆ ಎಂಬುದನ್ನು ಓದಿ..

ನೀರಾವರಿ ಸಮಸ್ಯೆ : ಅದೇ ರಾಷ್ಟ್ರೀಯ ನದಿ ಜೋಡಣೆ ಯೋಜನೆ (NRLPU). ಹಿಮಾಲಯದ ವ್ಯಾಪ್ತಿಯಿಂದ ಹುಟ್ಟಿ ಬರುವ ಉತ್ತರ ಭಾರತದ 14 ನದಿಗಳನ್ನು ಕೊಲ್ಲಿ ಸೇರುವ ದಕ್ಷಿಣ ಭಾರತದ 16 ನದಿಗಳೊಂದಿಗೆ ಸೇರಿಸುವ ಯೋಜನೆ ಅದಾಗಿತ್ತು!! ಅದಕ್ಕೆ ತಗುಲುವ ವೆಚ್ಚ 5 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಯಿತು.

2002ರಲ್ಲಿ ಇಂಥದ್ದೊಂದು ಯೋಜನೆಯ ಪ್ರಸ್ತಾಪವನ್ನಿಟ್ಟ ಅಟಲ್, ಬಿಜೆಪಿ,ಕಾಂಗ್ರೆಸ್, ಶಿವಸೇನೆ, ಟಿಡಿಪಿ ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನೂ ಒಂದೆಡೆ ಸೇರಿಸಿ ಒಪ್ಪಿಗೆ ಪಡೆದುಕೊಂಡರು. ಅದರ ಅನುಷ್ಠಾನದ ಉಸ್ತುವಾರಿಯನ್ನು ಸುರೇಶ್ ಪ್ರಭು ಅವರಿಗೆ ವಹಿಸಿದರು. 2004ರಲ್ಲಿ ಯೋಜನೆಯ ಆರಂಭ ಹಾಗೂ 2016ರಲ್ಲಿ ಪೂರ್ಣ ಎಂದು ಸಮಯವನ್ನೂ ನಿಗದಿ ಮಾಡಿದರು.

ಆದರೆ 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈ ಮಹಾತ್ವಾಕಾಂಕ್ಷಿ ಯೋಜನೆಯ ಕತ್ತನ್ನೇ ಹಿಸುಕಿತು. ಈ ವಿಚಾರ ಸುಪ್ರೀಂ ಕೋರ್ಟಿನ ಗಮನಕ್ಕೆ ಬಂತು. ಮನಮೋಹನ್ ಸರ್ಕಾರದ ಧೂರ್ತತೆಯ ಬಗ್ಗೆ ಕುಪಿತಗೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠ 2012, ಫೆಬ್ರವರಿ 27ರಂದು ನೀಡಿದ ತೀರ್ಪಿನಲ್ಲಿ 2016ರೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಾದ ಸೂಚನೆ ನೀಡಿದೆ. ಜತೆಗೆ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿದೆ. ಒಂದು ವೇಳೆ ಅಟಲ್ ಕನಸಿನ ಈ ಯೋಜನೆ ಅನುಷ್ಠಾನಗೊಂಡರೆ ಈ ದೇಶದ ಶೇ.80ರಷ್ಟು ನೀರಾವರಿ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ.

ಆರ್ಥಿಕ ಉದಾರೀಕರಣ ನೀತಿ : ಇನ್ನು ಹೌಸಿಂಗ್ ಲೋನ್/ಮನೆ ಕಟ್ಟಲು ಸಾಲ! ಮನೆ ಕಟ್ಟಿ, ಮದುವೆ ಮಾಡಿ ನೋಡು ಎಂಬ ಮಾತಿದೆ. ಮಂದಿ ಹೈರಾಣವಾಗಿ ಬಿಡುತ್ತಾರೆ. ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೊದಲು ಮನೆ ಕಟ್ಟುವುದೆಂದರೆ ನಿವೃತ್ತಿಯಾದ ನಂತರ ಬರುವ ಪಿಎಫ್, ಗ್ರಾಚ್ಯುಟಿಯಿಂದ ಎಂದಾಗಿತ್ತು. ಹಾಗೆ ಬಂದ ಹಣದಲ್ಲಿ ಮನೆ ಕಟ್ಟಿ ನೆಮ್ಮದಿಯಾಗಿ ಕೊನೆಕಾಲ ಕಳೆಯಬೇಕು, ಅಲ್ಲಿಯವರೆಗೂ ದನದಂತೆ ದುಡಿಯುವುದೊಂದೇ ಮಾರ್ಗ ಎಂಬ

ನಂಬಿಕೆಯಿತ್ತು. ಇಂಥದ್ದೊಂದು ಕಲ್ಪನೆಯನ್ನು ಬದಲಾಯಿಸಿದವರೇ ಅಟಲ್.

ಒಂದು ಕಡೆ ನಮ್ಮ ಆಗಸ ಅಥವಾ ವಾಯುಯಾನವನ್ನು ಖಾಸಗಿಯವರಿಗೆ ತೆರೆದರೆ, ಮತ್ತೊಂದೆಡೆ "ಪ್ರಯಾರಿಟಿ ಸೆಕ್ಟರ್ ಲೆಂಡಿಂಗ್"ನಡಿ ಹೌಸಿಂಗ್ಲೋನ್ ಅನ್ನು ಕಡ್ಡಾಯ ಮಾಡಿ ಬ್ಯಾಂಕ್ಗಳು ವ್ಯಾಪಕವಾಗಿ ಮನೆ ಸಾಲ ನೀಡುವಂತೆ ಮಾಡಿದರು. ಸರ್ಕಾರಿ ನೌಕರರು ಮಾತ್ರವಲ್ಲ, ಖಾಸಗಿ ಹಾಗೂ ಸ್ವಉದ್ಯೋಗಿಗಳಿಗೂ ಮರುಪಾವತಿ ಸಾಮರ್ಥಕ್ಕೆ ಅನುಗುಣವಾಗಿ ಸಾಲ ದೊರೆಯುವಂತೆ ಮಾಡಿದರು.

ಇಪ್ಪತ್ತಾರು, ಇಪ್ಪತ್ತೆಂಟು ವರ್ಷದ ಯುವಕ/ಯುವತಿಯರೂ ಕಂತಿನ ಸಾಲ ಪಡೆದು ಸ್ವಂತ ಮನೆಯ ಕನಸು ಕಾಣುವಂತಾಯಿತು, ಶೇ.6ರ ಬಡ್ಡಿ ದರದಲ್ಲಿ ಸಾಲ ಸಿಗುತ್ತಿತ್ತು. ಅದರಿಂದಾಗಿ ಕನ್ಸ್ಟ್ರಕ್ಷನ್ ಕ್ಷೇತ್ರಕ್ಕೆ ದೊಡ್ಡ ಚಾಲನೆ ದೊರೆಯಿತು.

ಎಷ್ಟೋ ಬಾರಿ ಒಳ್ಳೆಯ ನಾಯಕರು, ಒಳ್ಳೆಯ ಕೆಲಸ ಮಾಡಿದವರು ಚುನಾವಣೆಯಲ್ಲಿ ಸೋತುಬಿಡುತ್ತಾರೆ. 2004ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ಸೋಲುವಂಥ ಯಾವ ಕೆಲಸವನ್ನೂ ಮಾಡಿರಲಿಲ್ಲ. ನಿಜ ಹೇಳಬೇಕೆಂದರೆ ಕೃಷ್ಣ ಕಾಲದಲ್ಲಿ ಆದಷ್ಟು ಒಳ್ಳೆಯ ಕೆಲಸಗಳು ಕಳೆದ 20 ವರ್ಷಗಳಲ್ಲಿ ಎಂದೂ ಆಗಿಲ್ಲ. ಆದರೂ ಸೋತರು.

ಅಟಲ್ ಹಾಗೂ ಕೃಷ್ಣ ಇಬ್ಬರೂ ಸತತ ಮೂರು ವರ್ಷ ಬರ ಎದುರಿಸಿದ್ದರು. ಅದರಿಂದ ವ್ಯತಿರಿಕ್ತ ಪರಿಣಾಮವುಂಟಾಯಿತು. ಚುನಾವಣೆಯಲ್ಲಿ ಗೆಲ್ಲಲು ಒಳ್ಳೆಯ ಕೆಲಸಕ್ಕಿಂತ ಇನ್ನುಳಿದ ಲೆಕ್ಕಾಚಾರಗಳೇ ಬಹಳಷ್ಟು ಸಲ ಪ್ರಮುಖಪಾತ್ರ ವಹಿಸುತ್ತವೆ. ತಮ್ಮ ಮೂರೂವರೆ ವರ್ಷ ಅಧಿಕಾರಾವಧಿಯಲ್ಲಿ ಯಡಿಯೂರಪ್ಪನವರು ಮಾಡಿದ್ದೆಲ್ಲ ಬೇಡದ ಕೆಲಸವೇ ಆಗಿದ್ದರೂ, ಅವರ ಅವಧಿಯಲ್ಲಿ ನಡೆದ ಎಲ್ಲ ಉಪ ಚುನಾವಣೆಗಳಲ್ಲೂ ಜಯಿಸಿದ್ದರು.

ಅಣಕವೆಂದರೆ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು 145 ಸೀಟುಗಳಾದರೆ, ಬಿಜೆಪಿ 138 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ನಮ್ಮ "ಸಿಕ್"ಯುಲರ್ ಮಾಧ್ಯಮಗಳು ಸೋನಿಯಾ ಗಾಂಧಿಯವರೇ ವಿಜಯಿಯೆಂದು ಬಿಂಬಿಸಿದವು. ಮಿತ್ರಪಕ್ಷಗಳ ಆಯ್ಕೆಯಲ್ಲಿ ಬಿಜೆಪಿ ಎಡವಿತ್ತು

ಅಷ್ಟೇ.ಇದೇನೇ ಇರಲಿ, ವಾಜಪೇಯಿ ಸರ್ಕಾರದಲ್ಲಿ ಎಂಥೆಂಥ ಮಂತ್ರಿಗಳಿದ್ದರೆಂದರೆ ಸುರೇಶ್ ಪ್ರಭು, ಖಂಡೂರಿ, ರಾಮ್ನಾಯ್ಕ್, ಅರುಣ್ ಜೇಟ್ಲಿ, ಅರುಣ್ ಶೌರಿ, ಮುರಸೋಳಿ ಮಾರನ್, ಜಸ್ವಂತ್ ಸಿಂಗ್ ಮುಂತಾದವರಿದ್ದರು.

ಮನಮೋಹನ್ ಸಿಂಗ್ ಸರ್ಕಾರದಲ್ಲಿ ಇಂತಹ ಒಬ್ಬ ಯೋಗ್ಯ ಹಾಗೂ ಜನಪರ ವ್ಯಕ್ತಿ ಇದ್ದರೆ ಹೆಸರಿಸಿ ನೋಡೋಣ? ಜನರ ಮೂಗಿಗೆ ತುಪ್ಪ ಒರೆಸುವ ಕೆಲಸ ಬಿಟ್ಟರೆ ದೇಶದ ಪ್ರಗತಿಗೆ ಕಾರಣವಾಗುವ ಇಂಥ ಒಂದು ಕಾರ್ಯಕ್ರಮ, ಯೋಜನೆಯನ್ನು ಕಳೆದ 8 ವರ್ಷಗಳಲ್ಲಿ ಸೋನಿಯಾ ಗಾಂಧಿ ನಿಯಂತ್ರಿತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉದಾಹರಣೆ ಕೊಡಿ ನೋಡೋಣ?

ನಿಮಗೆ ಗೊತ್ತಾ, ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ ನಿರ್ಮಾಣವಾದ ಹೆದ್ದಾರಿಯ ಒಟ್ಟು ಉದ್ದ 47, 795 ಕಿ.ಮೀ. ಅದರಲ್ಲಿ ಶೇ.50ರಷ್ಟು ಅಂದರೆ 23,814 ಕಿ.ಮೀ. ನಿರ್ಮಾಣ ಮಾಡಿದ್ದು ವಾಜಪೇಯಿಯವರ 6 ವರ್ಷಗಳ ಸರ್ಕಾರ! ಯುಪಿಎ 10 ವರ್ಷಗಳಲ್ಲಿ ನಿರ್ಮಾಣ ಮಾಡಿದ್ದು ಕೇವಲ 16 ಸಾವಿರ ಕಿ.ಮೀ. ಇವತ್ತು ಕಾಂಗ್ರೆಸ್ಸಿಗರು ರೈಟ್ ಟು ಎಜುಕೇಜುಕೇಶನ್ ಎಂದು ಬೊಬ್ಬೆ ಹಾಕುತ್ತಿದ್ದಾರೆ.

ಸರ್ವ ಶಿಕ್ಷಾ ಅಭಿಯಾನ : ಆದರೆ ಅದು ಅಟಲ್ ದೇಶದ 576 ಜಿಲ್ಲೆಗಳಲ್ಲಿ ಆರಂಭಿಸಿದ ಸರ್ವ ಶಿಕ್ಷಾ ಅಭಿಯಾನದ ಹೊಸ ಅವತಾರವಷ್ಟೇ. ಇನ್ನು ಅಟಲ್ ಗದ್ದುಗೆಯಿಂದಿಳಿದಾಗ ದೇಶದ ಆರ್ಥಿಕ ಅಭಿವೃದ್ಧಿ ದರವನ್ನು ಶೇ.4.2ರಿಂದ 8.4ಕ್ಕೇರಿಸಿ(2003-2004) ಹೋಗಿದ್ದರು. ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ಬಂದಿರುವ ಕಾಂಗ್ರೆಸ್ ಅದನ್ನು ಶೇ.5ಕ್ಕಿಂತ ಕಡಿಮೆಗೆ ಇಳಿಸಿ, ಅರ್ಥ ವ್ಯವಸ್ಥೆಯನ್ನು ಹಾಳುಗೆಡವಿ ಹೊರನಡೆಯಲಿದೆ. ಇನ್ನೊಂದು ಬಹುಮುಖ್ಯ ವಿಷಯ ಕೇಳಿ, ಮಾಹಿತಿ ಹಕ್ಕು ಕಾಯಿದೆಯನ್ನು ತಂದಿದ್ದೇ ನಾವು ಎಂದು ಕಾಂಗ್ರೆಸ್ಸಿಗರು ಬೊಬ್ಬೆಹಾಕುತ್ತಾರೆ.

ಆದರೆ ವಾಸ್ತವದಲ್ಲಿ 2003ರಲ್ಲಿ ಅಟಲ್ ಸರ್ಕಾರ ಹೊರತಂದ "ಮಾಹಿತಿ ಸ್ವಾತಂತ್ರ್ಯ"ವೇ(ಫ್ರೀಡಂ ಆಫ್ ಇನ್ಫರ್ಮೇಶನ್) 2005ರಲ್ಲಿ ಕಾಯಿದೆಯಾಯಿತು ಅಷ್ಟೇ. ಅಟಲ್ ಅವಧಿಯಲ್ಲಿ ಅಂದರೆ 1998-2004ವರೆಗೂ ನಮ್ಮ ರೂಪಾಯಿ ಮೌಲ್ಯ ಕುಸಿದಿದ್ದು ಕೇವಲ 4 ರೂಪಾಯಿ (41.25-45.31). ಆದರೆ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರ ಒಂಭತ್ತೂವರೆ ವರ್ಷ ಆಡಳಿತದಲ್ಲಿ ರೂಪಾಯಿ ಮೌಲ್ಯ 21 ರೂ.ವರೆಗೂ ಕುಸಿದು ಈಗ 17-18 ರೂ.ಗಳ ಆಸುಪಾಸಿನಲ್ಲಿದ್ದು, ಜನ ಹಾಗೂ ಅರ್ಥ ವ್ಯವಸ್ಥೆಯನ್ನು ಹೈರಾಣಾಗಿಸಿದೆ.

ಓದುಗರ ಗಮನಕ್ಕೆ: ಪ್ರಧಾನಿಯಾಗಿ ಮನ ಮೋಹನ್ ಸಿಂಗ್ ಅವರು ತಮ್ಮ 9 ವರ್ಷಗಳ ಅಧಿಕಾರ ಅವಧಿಯಲ್ಲಿ ಮೂರನೇ ಬಾರಿಗೆ ಮೌನ ಮುರಿದು ಇತ್ತೀಚೆಗೆ ಮಾಡಿದ ಭಾಷಣಕ್ಕೆ ಪ್ರತಿಯಾಗಿ ಒನ್ ಇಂಡಿಯಾ ಕನ್ನಡ ಓದುಗರೊಬ್ಬರು ಪ್ರತಾಪ್ ಸಿಂಹ ಅವರ ಈ ಲೇಖನವನ್ನು ಕಾಮೆಂಟ್ ನಲ್ಲಿ ಹಾಕಿದ್ದರು.

ಭವ್ಯ ಭವಿಷ್ಯಕ್ಕೆ ಭಾಷ್ಯ ಬರೆದು ಜೀವಚ್ಛವವಾಗಿ ಮಲಗಿರುವ ಅವರನ್ನು ಕೊನೆಗೂ ನೆನಪು ಮಾಡಿಕೊಳ್ಳುತ್ತಿದ್ದಾರಲ್ಲಾ, ಅಷ್ಟೇ ಸಮಾಧಾನ! ಎಂಬ ಮುನ್ನುಡಿಯೊಂದಿಗೆ ಪ್ರತಾಪ್ ಸಿಂಹ ಅವರು ಈ ಹಿಂದೆ ಕನ್ನಡಪ್ರಭ ಪತ್ರಿಕೆಯ ತಮ್ಮ ಅಂಕಣದಲ್ಲಿ[ಇಲ್ಲಿ ಓದಿ] ಬರೆದಿದ್ದ ಲೇಖನ ನಮ್ಮಲ್ಲಿ ಪುನರ್ ಪ್ರಕಟವಾಗಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Prime Minister Atal Bihari Vajpayee planned linking 37 rivers to get rid of the curse of droughts & floods, he introduced Sarva Shiksha Abhiyan giving education to all, his schemes, dreams and NDA's projects hijacked by UPA and announced as their achievements
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more