ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ದಾಳವಾದ ವಾಜಪೇಯಿ ಚಿತಾಭಸ್ಮ! ಸಂಬಂಧಿಯಿಂದ ಆರೋಪ

|
Google Oneindia Kannada News

ರಾಯ್ಪುರ, ಆಗಸ್ಟ್ 24: ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಛತ್ತೀಸ್ ಗಢ ಸರ್ಕಾರ ರಾಜಕೀಯಕ್ಕೆ ಬಳಸುತ್ತಿದೆ ಎಂದು ವಾಜಪೇಯಿ ಅವರ ಸಂಬಂಧಿ ಮತ್ತು ಕಾಂಗ್ರೆಸ್ ನಾಯಕಿ ಕರುಣಾ ಶುಕ್ಲಾ ಆರೋಪಿಸಿದ್ದಾರೆ.

ವಾಜಪೇಯಿ ಅವರು ಬದುಕಿದ್ದಾಗ ಒಮ್ಮೆಯೂ ಅವರ ಹೆಸರನ್ನು ಹೇಳಿದ ರಮಣ್ ಸಿಂಗ್ ಈಗ ಅವರು ಕಾಲವಾದ ಮೇಲೆ ಅವರ ಚಿತಾಭಸ್ಮವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಲೀನವಾದ ವಾಜಪೇಯಿ ಚಿತಾಭಸ್ಮಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಲೀನವಾದ ವಾಜಪೇಯಿ ಚಿತಾಭಸ್ಮ

ರಮಣ್ ಸಿಂಗ್ ಅವರು ತಮ್ಮ ಯಾವುದೇ ಭಾಷಣದಲ್ಲಿ ವಾಜಪೇಯಿ ಅವರ ಹೆಸರನ್ನು ಉಲ್ಲೇಖಿಸುತ್ತಿರಲಿಲ್ಲ. ಅಟಲ್ ಜೀ ಅವರ ಸಾಧನೆಗಳನ್ನು ಹೇಳುತ್ತಿರಲಿಲ್ಲ. ಆದರೆ ಅವರು ತೀರಿಹೋದ ಮೇಲೆ ಅವರ ಚಿತಾಭಸ್ಮವನ್ನಿಟ್ಟುಕೊಂಡು ಜನರ ಸನುಕಂಪ ಗಳಿಸಲು ಯತ್ನಿಸುತ್ತಿದ್ದಾರೆ.

Vajapees niece alleges Chattisgarh CM playing politics over Atal jis ashes

ಮೊದಲು ಬಿಜೆಪಿಯಲ್ಲೇ ಗುರುತಿಸಿಕೊಂಡಿದ್ದ ಕರುಣಾ ಶುಕ್ಲಾ ಅವರು, ನಂತರ ಕಾಂಗ್ರೆಸ್ಸಿಗೆ ಸೇರಿದ್ದರು.

ವಾಜಪೇಯಿ ಅಂತ್ಯಕ್ರಿಯೆ ಹೊಸ 'ಟ್ರೆಂಡ್ ಸೆಟರ್' ಗೆ ನಾಂದಿ ಹಾಡಲಿವಾಜಪೇಯಿ ಅಂತ್ಯಕ್ರಿಯೆ ಹೊಸ 'ಟ್ರೆಂಡ್ ಸೆಟರ್' ಗೆ ನಾಂದಿ ಹಾಡಲಿ

ಅಟಲ್ ಬಿಹಾರಿ ವಾಜಪೇಯಿ ಅವರ ಕಾಲಾನಂತರ ಛತ್ತೀಸ್ ಗಢ ರಾಜಧಾನಿ ನಯಾ ರಾಯ್ಪುರಕ್ಕೆ ಅಟಲ್ ನಗರ ಎಂದೇ ನಾಮಕರಣ ಮಾಡಲು ರಮಣ್ ಸಿಂಗ್ ಇತ್ತೀಚೆಗೆ ನಿರ್ಧರಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಡಿರುವ ಕರುಣಾ ಶುಕ್ಲಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

English summary
Congress leader and Atal Bihari Vajpayee's niece Karuna Shukla blames Chattisgarh government for playing politics over Vajpayee's ashes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X