ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಬಂಟನಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ಆತಿಥ್ಯ?

By Srinath
|
Google Oneindia Kannada News

ತಿರುಪತಿ, ಜ.17- ವೈಕುಂಠ ಏಕಾದಶಿ ಅಂದವಾಗಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಅಧ್ಯಯನೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಅಘಾತತಕಾರಿ ಪ್ರಸಂಗವೊಂದು ನಡೆದಿದೆ.

ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿ ಬೇಕಾಗಿರುವ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ಗ್ಯಾಂಗಿನ ಸದಸ್ಯನೊಬ್ಬನಿಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ಮಣೆ ಹಾಕಿ, ವಿಶೇಷ ಆತಿಥ್ಯ ನೀಡಿದೆ.

Vaikunta Ekadashi Dawood's man Ajay Navandar gets VIPat Tirumala- Alleges TDP MLA
ಅಜಯ್ ನವಂದರ್ ಎಂಬ ಮುಂಬೈ ನಿವಾಸಿಗೆ ಒಂದಲ್ಲ ಎರಡು ಬಾರಿ VIP darshan ಕಲ್ಪಿಸಲಾಗಿದೆ. ಇವನು ಛೋಟಾ ಶಕೀಲನ ನಂಬಿಗಸ್ಥ ಎನ್ನಲಾಗಿದೆ. ಮಹಾರಾಷ್ಟ್ರದ ಇಬ್ಬರು ಅತಿ ಗಣ್ಯ ವ್ಯಕ್ತಿಗಳ ಜತೆಗೆ 2 ಬಾರಿ ವಿಶೇಷ ದರ್ಶನ ಪಡೆದಿದ್ದಾನೆ- ಒಬ್ಬರು ವಸತಿ ಸಚಿವ ಸಚಿನ್ ಅಹಿರ್ ಮತ್ತೊಬ್ಬರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ.

ಸಚಿವ ಸಚಿನ್ ಅಹಿರ್ ಜತೆ ಅಜಯ್ ನವಂದರ್ ವಿಐಪಿ ದರ್ಶನ ಪಡೆದಿದ್ದು ನಿಜ ಎಂದು TTD ಅಧ್ಯಕ್ಷ ಕನುಮೂರಿ ಬಾಪಿರಾಜು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಆದರೆ ಅವನಿಗೆ ಭೂಗತ ಪಾತಕಿಗಳ ಜತೆ ಸಂಪರ್ಕವಿದೆ ಎಂಬುದು ತನಗೆ ತಿಳಿದಿರಲಿಲ್ಲ. ವಿಐಪಿಗಳ ಜತೆ ಬಂದಿದ್ದಕ್ಕೆ ಶಿಷ್ಟಾಚಾರದ ಪ್ರಕಾರ ಅವನಿಗೂ ವಿಶೇಷ ಅತಿಥ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಅಜಯ್ ನವಂದರ್ ಪ್ರತಿಕ್ರಿಯೆ ನೀಡಿದ್ದು, ಮಾಫಿಯಾ ದೊರೆ ದಾವೂದ್ ಇಬ್ರಾಹಿಂ ಜತೆ ತನಗೆ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ, ಈ ಸಂಬಂಧ ಅನಗತ್ಯ ಆರೋಪ ಮಾಡುತ್ತಿರುವ ತೆಲುಗು ದೇಶಂ ಶಾಸಕ ಗಾಲಿ ಮುದ್ದು ಕೃಷ್ಣ ನಾಯ್ಡುಗೆ ಕಾನೂನು ನೋಡಿಸ್ ಜಾರಿ ಮಾಡುವುದಾಗಿ ಎಚ್ಚರಿಸಿದ್ದಾರೆ.

ಅಜಯ್ ನವಂದರ್ ಉದ್ಯಮಿಯಾಗಿದ್ದು, NCP ವತಿಯಿಂದ ವಿಧಾಸನಭೆ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದರು. ಮುಂಬೈ ಪೊಲೀಸರು ಆತನನ್ನು ಕೆಲವು ಪ್ರಕರಣಗಳ ಸಂಬಂಧ ಠಾಣೆಗೆ ಕರೆದು ವಿಚಾರಣೆ ನಡೆಸಿರುವ ಪ್ರಸಂಗಗಳೂ ಇವೆ. ( ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ )

'ನನ್ನ ವಿರುದ್ಧ ಒಂದೇ ಒಂದು ಅಪರಾಧ ಪ್ರಕರಣವೂ ದಾಖಲಾಗಿಲ್ಲ. ದಾವೂದ್ ಜತೆ ಯಾವುದೇ ಸಂಪರ್ಕವಿಲ್ಲ. ನಾನು 2 ಬಾರಿ ತಿಮ್ಮಪ್ಪನ ದರ್ಶನ ಪಡೆದಿದ್ದು ನಿಜ. ವೈಕುಂಠ ಏಕಾದಶಿ ದಿನದಂದು ನಾನು ನೇರವಾಗಿ ಬೆಂಗಳೂರಿನಿಂದ ಆಗಮಿಸಿ ಮಹಾರಾಷ್ಟ್ರದ ಸಚಿವರ ಜತೆ ಬೆಳಗ್ಗೆ 4 ಗಂಟೆಗೇ ದೇವರ ದರ್ಶನ ಪಡೆದೆ. ಆ ನಂತರ 2 ದಿನಗಳ ನಂತರ ಉದ್ಧವ್ ಠಾಕ್ರೆ ಜತೆಗೂಡಿ ದರ್ಶನ ಪಡೆದೆ. ಅದು ಬಿಟ್ಟರೆ ನನಗೆ ಅಂತ ವಿಶೇಷ ಏರ್ಪಾಡು ಮಾಡಿರಲಿಲ್ಲ' ಎಂದು ಅಜಯ್ ನವಂದರ್ ಹೇಳಿದ್ದಾರೆ.

ಈ ಮಧ್ಯೆ, ಅಜಯ್ ನವಂದರ್ ಮೂರು ದಿನಗಳ ಕಾಲ ತಿರುಮಲದಲ್ಲಿ ವಿಶೇಷ ಆತಿಥ್ಯ ಸ್ವೀಕರಿಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕ ಗಾಲಿ ಮುದ್ದು ಕೃಷ್ಣ ನಾಯ್ಡು ಪುನರಚ್ಚರಿಸಿದ್ದಾರೆ.

English summary
The annual ‘Adhyayanotsavams' festival is under way at in Sri Venkateswara Swamy temple in Tirumala from December 31 and will conclude with ‘Tanniramudu' festival on 2014 January 25. But in the meanwhile it is alleged that Apparently, one Ajay Navandar of Mumbai, alleged to be a Chhota Shakeel aide, was accorded royal treatment and VIP darshan twice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X