ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ

By Srinath
|
Google Oneindia Kannada News

ತಿರುಪತಿ, ಜ.11- ವೈಕುಂಠ ಏಕಾದಶಿ ಎಂಬುದು ಏಕಾದಶಿಗಳಲ್ಲಿ ವಿಶೇಷ ದಿನ. ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ. ಈ ದಿನ ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಇಂದು ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ, ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ/ಪ್ರತೀತಿಯಿದೆ.

ಇಂದು ವಿಷ್ಣು ದೇವಾಲಯಗಳಲ್ಲಿ ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಏಕಾದಶಿ ಆಚರಿಸಲಾಗುತ್ತಿದೆ. ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬಂದರೆ, ಉತ್ತರೋತ್ತರ ಅಭಿವೃದ್ಧಿಯಾಗುವುದಲ್ಲದೆ, ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಎಂಬುದು ಹಿರಿಯರ ನಂಬಿಕೆ.

ಮಾಗಿಯ ಚಳಿಯನ್ನೂ ಲೆಕ್ಕಿಸದ ಶ್ರೀನಿವಾಸನ ಭಕ್ತವೃಂದ

ಮಾಗಿಯ ಚಳಿಯನ್ನೂ ಲೆಕ್ಕಿಸದ ಶ್ರೀನಿವಾಸನ ಭಕ್ತವೃಂದ

ಮಾಗಿಯ ಚಳಿಯನ್ನೂ ಲೆಕ್ಕಿಸದೆ, ಭಕ್ತಕೋಟಿ, ಗಢಗಢ ನಡುಗುವ ಚಳಿಯಲ್ಲಿ ನಸುಕಿನಲ್ಲೇ ಎದ್ದು ಸ್ನಾನ ಮಾಡಿ, ಮಡಿವಸ್ತ್ರ ತೊಟ್ಟು, ವೆಂಕಟರಮಣ ಸ್ವಾಮಿಯ ದರ್ಶನ ಮಾಡಿ, ಕೃತಾರ್ಥರಾಗುವ ಸಲುವಾಗಿ ದೇವಾಲಯಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

ದೀಪಾಲಂಕಾರದಿಂದ ಝಗಮಗಿಸುತ್ತಿವೆ ವೈಷ್ಣವ ದೇವಾಲಯಗಳು

ದೀಪಾಲಂಕಾರದಿಂದ ಝಗಮಗಿಸುತ್ತಿವೆ ವೈಷ್ಣವ ದೇವಾಲಯಗಳು

ಹೈಟೆಕ್ ಸಿಟಿ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಬೆಂಗಳೂರಿನಲ್ಲಿರುವ ಎಲ್ಲ ವೈಷ್ಣವ ದೇವಾಲಯಗಳಲ್ಲೂ ಇಂದು ವಿಶೇಷ ದರ್ಶನ ಏರ್ಪಡಿಸಲಾಗಿದೆ. ಏಕಾದಶಿ ಪ್ರಯುಕ್ತ ಎಲ್ಲ ದೇವಾಲಯಗಳೂ ಹೂವಿನ ಅಲಂಕಾರ, ಸ್ವಾಗತ ಕಮಾನು ಮತ್ತು ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

 ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ

ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ

ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ದೇವರ ದರ್ಶನ ಮಾಡಿ, ದೇವಾಲಯದಲ್ಲಿ ಇರುವ ಶ್ರೀನಿವಾಸ ಉತ್ಸವ ಮೂರ್ತಿಯ ತೊಟ್ಟಿಲಿಗೆ (ಜೋಕಾಲಿ) ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಎಂಬುದು ಭಕ್ತಕೋಟಿಯ ನಂಬಿಕೆ.

ಶ್ರೀನಿವಾಸನ ಸನ್ನಿಧಿ ತಿರುಪತಿಯಲ್ಲಿ ಭಕ್ತಿ-ಸಂಭ್ರಮಕ್ಕೆ ಎಣೆಯುಂಟೆ

ಶ್ರೀನಿವಾಸನ ಸನ್ನಿಧಿ ತಿರುಪತಿಯಲ್ಲಿ ಭಕ್ತಿ-ಸಂಭ್ರಮಕ್ಕೆ ಎಣೆಯುಂಟೆ

ಇನ್ನು, ಶ್ರೀನಿವಾಸ ದೇವರ ಸನ್ನಿಧಿಯಾದ ತಿರುಪತಿಯಲ್ಲಿ ಸಂಭ್ರಮಕ್ಕೆ ಎಣೆಯುಂಟೆ. ಅದರಲ್ಲೂ ವಿಶೇಷ ಗಣ್ಯ ವ್ಯಕ್ತಿಗಳಂತೂ ದೇವರ ಸಮೀಪ ದರ್ಶನಕ್ಕೆ ಹಾತೊರೆಯುತ್ತಾರೆ. ಸುಮಾರು 8000 ವಿಐಪಿ ಟಿಕೆಟುಗಳ ಬಿಕರಿಯಾಗಿದೆ. ಬೆಳಗ್ಗೆಯಿಂದಲೇ ಭಕ್ತರು ತಿರುಮಲದಲ್ಲಿ ಬೀಡುಬಿಟ್ಟಿದ್ದಾರೆ. ಸಾಮಾನ್ಯ ಭಕ್ತರು ಉದ್ದನೆಯ ಸರದಿಗಳಲ್ಲಿ ಗಂಟೆಗಳಿಂದ ನಿಂತಿದ್ದು, ಇನ್ನೂ ದರುಶನ ಭಾಗ್ಯ ಪ್ರಾಪ್ತಿಯಾಗದೇ ಇರುವುದಕ್ಕೆ ಅಸಮಾಧಾನ/ ಕಸಿವಿಸಿ ವ್ಯಕ್ತಪಡಿಸಿದ್ದಾರೆ.

Adhyayanotsavam ಡಿಸೆಂಬರ್ 31ರಿಂ-ಜನವರಿ 25ಕ್ಕೆ

Adhyayanotsavam ಡಿಸೆಂಬರ್ 31ರಿಂ-ಜನವರಿ 25ಕ್ಕೆ

ಈ ಸಂದರ್ಭದಲ್ಲಿ ತಿರುಪತಿಯಲ್ಲಿ ಅಧ್ಯಯನೋತ್ಸವ (Adhyayanotsavam) ವಿಜೃಂಭಣೆಯಿಂದ ನಡೆದಿದೆ. ಈ ಆಚರಣೆಯು ಡಿಸೆಂಬರ್ 31ರಿಂದಲೇ ಆರಂಭವಾಗಿದ್ದು, ಇದೇ ಜನವರಿ 25ಕ್ಕೆ ಮುಕ್ತಾಯ ಕಾಣಲಿದೆ.

ಶ್ರೀವಾರಿ ಗೋವಿಂದ ಮಾಲೆ ಧರಿಸಿದ ಭಕ್ತರ ಸಮೂಹ

ಶ್ರೀವಾರಿ ಗೋವಿಂದ ಮಾಲೆ ಧರಿಸಿದ ಭಕ್ತರ ಸಮೂಹ

ಶೋಭಾಯಮಾನವಾಗಿ ಬೆಳಗುತ್ತಿರುವ ದೇವಸ್ಥಾನದೊಳಗಿನ ದೇದೀಪ್ಯಮಾನ ದೃಶ್ಯ. ಶ್ರೀವಾರಿ ಗೋವಿಂದ ಮಾಲೆ ಧರಿಸಿದ ಭಕ್ತರ ಸಮೂಹ ಎಲ್ಲೆಲ್ಲೂ ಕಾಣಬಹುದಾಗಿದೆ.

ವೈಕುಂಠ ಏಕಾದಶಿ ಆಚರಣೆಯ ದೃಶ್ಯಾವಳಿಗಗಳು

ವೈಕುಂಠ ಏಕಾದಶಿ ಆಚರಣೆಯ ದೃಶ್ಯಾವಳಿಗಗಳು

ವೈಕುಂಠ ಏಕಾದಶಿ ಆಚರಣೆಯ ದೃಶ್ಯಾವಳಿಗಗನ್ನು ಕಣ್ತುಂಬಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

http://gallery.oneindia.in/telugu-events/vaikunta-ekadasi-celebration-2014/photos-c20-e45626-p404417.html

English summary
Vaikunta Ekadashi Celebration Adhyayanotsavams at Lord Venkateshwara TTD Tirumala festival. The annual ‘Adhyayanotsavams' festival in Sri Venkateswara Swamy temple in Tirumala from December 31 and will conclude with ‘Tanniramudu' festival on 2014 January 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X