ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರಕ್ಕೆ ಕೋವಿಡ್ 19 ಅರ್ಥವೇ ಆಗಿಲ್ಲ, ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮೇ 28: ಕೊರೊನಾ ವೈರಸ್ ಆರಂಭವಾದಾಗಿನಿಂದಲೂ ಕೇಂದ್ರ ಸರ್ಕಾರಕ್ಕೆ ವೈರಸ್‌ನ ವಿಕಸನದ ಬಗ್ಗೆ ಅರ್ಥವೇ ಆಗಿಲ್ಲ. ವೈರಸ್ ಕಾರ್ಯ ನಿರ್ವಹಿಸುವ ವಿಧಾನದ ಗ್ರಹಿಕೆ ಸರ್ಕಾರಕ್ಕೆ ಇನ್ನೂ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ನೇರಸಂವಾದದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಇದೊಂದು ಸ್ಥಿರ ರೋಗವಲ್ಲ. ಇದು ಕಾಲಕಾಲಕ್ಕೆ ಬದಲಾವಣೆ ಮತ್ತು ರೂಪಾಂತರವಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಲಸಿಕೆ ಬಗ್ಗೆ ಸರ್ಕಾರದ ಧೋರಣೆಯನ್ನು ಕೂಡ ಈ ಸಂದರ್ಭದಲ್ಲಿ ಟೀಕಿಸಿದ ಅವರು ಮನೆಯೊಳಗಿನ ಸಮಸ್ಯೆಗೆ ಪರಿಹಾರ ನೀಡುವ ಬದಲಿಗೆ ಸರ್ಕಾರ ವಾಕ್ಸಿನ್ ಡಿಪ್ಲೊಮಸಿ ಹೆಸರಿನಲ್ಲಿ ವಿಶ್ವಮಟ್ಟದಲ್ಲಿ ಪ್ರಚಾರವನ್ನು ಪಡೆಯಲು ಗಮನ ಹರಿಸಿದೆ ಎಂದು ಹೇಳಿದ್ದಾರೆ.

 ರಾಜ್ಯದಲ್ಲಿ ಜೂನ್ 7ರ ನಂತರವೂ ಲಾಕ್‌ಡೌನ್ ವಿಸ್ತರಣೆ ಅಗತ್ಯ ಎಂದ ತಜ್ಞರು ರಾಜ್ಯದಲ್ಲಿ ಜೂನ್ 7ರ ನಂತರವೂ ಲಾಕ್‌ಡೌನ್ ವಿಸ್ತರಣೆ ಅಗತ್ಯ ಎಂದ ತಜ್ಞರು

ಕೇಂದ್ರ ಸರ್ಕಾರಕ್ಕೆ ಜನರ ಜೀವವನ್ನು ಉಳಿಸುವ ಬದ್ಧತೆಗಿಂತಲೂ ಹೆಚ್ಚಿನ ಉತ್ಸಾಹ ವಾಕ್ಸಿನ್ ಡಿಪ್ಲೊಮಸಿಯಲ್ಲಿ ಇದೆ. ವಿದೇಶಗಳಿಗೆ ಲಸಿಕೆಯನ್ನು ರಫ್ತಿ ಮಾಡುವುದು ನಮ್ಮ ವಿದೇಶಾಂಗ ಸಚಿವರಿಗೆ ಆದ್ಯತೆಯಾಗಿದೆ ಎಂದು ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.

Vaccine diplomacy more important to Centre than saving lives at home says Rahul Gandhi

ಲಸಿಕೆ ಹಂಚುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಯಾವುದೇ ಯೋಜನೆಗಳಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಯಾವುದೇ ಲಸಿಕಾ ಯೋಜನೆಗಳನ್ನು ಹೊಂದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದೇ ವೇಗದಲ್ಲಿ ಲಸಿಕಾ ಅಭಿಯಾನ ಮುಂದುವರಿದರೆ ಮೂರನೇ ಅಲೆಯ ಆತಂಕ ಹೆಚ್ಚಾಗುತ್ತದೆ ಎಂದಿದ್ದಾರೆ.

'ಹಿಂದುತ್ವ ನೀತಿ' ರಚಿತ ಚಿತ್ರಣ - ಯುಎಸ್‌ನಲ್ಲಿ ಜೈ ಶಂಕರ್‌'ಹಿಂದುತ್ವ ನೀತಿ' ರಚಿತ ಚಿತ್ರಣ - ಯುಎಸ್‌ನಲ್ಲಿ ಜೈ ಶಂಕರ್‌

ಕಳೆದ 24 ಗಂಟೆಗಳಲ್ಲಿ 1.84 ಲಕ್ಷ ಹೊಸ ಕೊರೊನಾ ವೈರಸ್ ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ. ಇದು ಕಳೆದ 44 ದಿನಗಳ ಅಂತರದಲ್ಲಿ ಅತ್ಯಂತ ಕನಿಷ್ಟ ಪ್ರಮಾಣವಾಗಿದೆ. ಸದ್ಯ 23.43 ಲಕ್ಷ ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳು ದೇಶದಲ್ಲಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,660 ಜನರು ಈ ವೈರಸ್‌ಗೆ ಪ್ರಾಣವನ್ನು ಕಳೆದುಕೊಂಡಿದ್ದು 3.18 ಲಕ್ಷ ಜನರು ಈವರೆಗೆ ಈ ಸಾಂಕ್ರಾಮಿಕ ರೋಗಕ್ಕೆ ಮೃತಪಟ್ಟಿದ್ದಾರೆ.

Recommended Video

ಜವಾಬ್ಧಾರಿ ಸ್ಥಾನದಲ್ಲಿ ಇದ್ದೀನಿ !! ಇದಕ್ಕೆಲ್ಲಾ I DON'T CARE!! | C T Ravi | Oneindia Kannada

English summary
Vaccine diplomacy more important to Centre than saving lives at home says congress leader Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X