ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೇ ಮೊದಲು: ಗೌರಿಬಿದರೂರಿನಲ್ಲಿ ಮೊದಲ ಡ್ರೋನ್ ಪ್ರಯೋಗ ಇಂದು ಪ್ರಾರಂಭ

|
Google Oneindia Kannada News

ಬೆಂಗಳೂರು, ಜೂ. 18: ಭಾರತದ ಮೊದಲ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗವು ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿರುವ ಗೌರಿಬಿದನೂರಿನಲ್ಲಿ ಇಂದು ಪ್ರಾರಂಭವಾಗಲಿದೆ. ಈ ಮೂಲಕ ಕೊರೊನಾ ಲಸಿಕೆ ವಿರುದ್ದದ ಹೋರಾಟಕ್ಕೆ ಒಂದು ಬಲ ಸಿಗಲಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ಥ್ರೊಟಲ್ ಏರೋಸ್ಪೇಸ್ ಸಿಸ್ಟಮ್ಸ್ ನೇತೃತ್ವದ ಸಂಸ್ಥೆಗಳ ಒಕ್ಕೂಟದ ನೇತೃತ್ವದ ಈ ಪ್ರಾಯೋಗಿಕಕ್ಕೆ ಮಾರ್ಚ್ 2020 ರ ಹಿಂದೆಯೇ ವಸ್ತು ವಿತರಣಾ ಪ್ರಯೋಗಗಳಿಗಾಗಿ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಯಿಂದ ಅನುಮೋದನೆ ದೊರೆತಿದೆ. ಆದರೆ ಕೆಲವೊಂದು ಅನುಮತಿಗಳು ಇನ್ನೂ ದೊರೆಯದ ಕಾರಣ ಸಂಸ್ಥೆಯ ಈ ಪ್ರಯೋಗಕ್ಕೆ ವಿಳಂಬವಾಗಿದೆ. 30-45 ದಿನಗಳವರೆಗೆ ಮೊದಲ ಪ್ರಯೋಗಗಳನ್ನು ನಡೆಯಲಿದೆ.

ಕೊರೊನಾ ಲಸಿಕೆ ವಿತರಣೆಗಾಗಿ ಪ್ರಾಯೋಗಿಕ ಡ್ರೋನ್ ಹಾರಾಟಕೊರೊನಾ ಲಸಿಕೆ ವಿತರಣೆಗಾಗಿ ಪ್ರಾಯೋಗಿಕ ಡ್ರೋನ್ ಹಾರಾಟ

ಲಸಿಕೆ ವಿತರಣೆಗೆ ಪ್ರಾಯೋಗಿಕ ಡ್ರೋನ್ ಹಾರಾಟಗಳಿಗೆ ಸರ್ಕಾರ ಇತ್ತೀಚೆಗೆ ಷರತ್ತುಬದ್ಧ ವಿನಾಯಿತಿ ನೀಡಿದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಲಸಿಕೆಗಳನ್ನು ವಿತರಿಸಲು ಪ್ರಾಯೋಗಿಕವಾಗಿ ದೃಷ್ಟಿಯಿಂದ ಗೋಚರಿಸುವ ರೇಖೆಯ ಆಚೆಗೆ (ಬಿವಿಎಲ್ಒಎಸ್) ಡ್ರೋನ್ ಹಾರಾಟಗಳನ್ನು ನಡೆಸಲು ತೆಲಂಗಾಣ ಸರ್ಕಾರಕ್ಕೆ ಷರತ್ತುಬದ್ಧ ವಿನಾಯಿತಿ ನೀಡಿದೆ.

ಏನಿದು ಪ್ರಾಯೋಗಿಕ ಡ್ರೋನ್ ಹಾರಾಟ?

ಏನಿದು ಪ್ರಾಯೋಗಿಕ ಡ್ರೋನ್ ಹಾರಾಟ?

ಬೆಂಗಳೂರು ಮೂಲದ ಥ್ರೊಟಲ್ ಏರೋಸ್ಪೇಸ್ ಸಿಸ್ಟಮ್ಸ್ ನೇತೃತ್ವದ ಕಂಪನಿಗಳ ಒಕ್ಕೂಟವು ಇಂದಿನಿಂದ ದೃಷ್ಟಿಯಿಂದ ಗೋಚರಿಸುವ ರೇಖೆಯ ಆಚೆಗೆ (ಬಿವಿಎಲ್ಒಎಸ್) ವೈದ್ಯಕೀಯ ಡ್ರೋನ್ ಪ್ರಯೋಗಗಳನ್ನು ನಡೆಸಲಿದೆ. ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿರುವ ಗೌರಿಬಿದನೂರು ತಾಲ್ಲೂಕಿನಲ್ಲಿ 30-45 ದಿನಗಳವರೆಗೆ ಡ್ರೋನ್‌ಗಳ ಮೂಲಕ ಔಷಧಿಗಳನ್ನು ತಲುಪಿಸಲು ಪ್ರಯೋಗವು ಪ್ರಯತ್ನಿಸುತ್ತದೆ. ಕಂಪನಿಯು ಮೆಡ್‌ಕಾಪ್ಟರ್ ಡ್ರೋನ್‌ಗಳ ಎರಡು ರೂಪಾಂತರಗಳನ್ನು ಬಳಸುತ್ತದೆ. ಸಣ್ಣ ಮೆಡ್‌ಕಾಪ್ಟರ್ ಡ್ರೋನ್ 1 ಕೆಜಿ ವರೆಗೆ ತೂಕವನ್ನು ತಲುಪಿಸಬಹುದಾಗಿದ್ದು 15 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಆದರೆ ಇತರ ರೂಪಾಂತರವು 2 ಕೆಜಿ ವರೆಗೆ ತೂಕವನ್ನು ತಲುಪಿಸಬಹುದಾಗಿದ್ದು 12 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಈ ಡ್ರೋನ್‌ಗಳಿಗೆ RANDINT ಹೆಸರಿನ ವಿತರಣಾ ಸಾಫ್ಟ್‌ವೇರ್ ಸಹಾಯ ಮಾಡುತ್ತದೆ. ನಿಯಂತ್ರಕ ಪ್ರಾಧಿಕಾರವಾಗಿರುವ ಡಿಜಿಸಿಎ ಮಾರ್ಗಸೂಚಿ ಪ್ರಕಾರ ಕನಿಷ್ಠ 100 ಗಂಟೆಗಳ ಕಾಲ ಹಾರಾಟ ನಡೆಸುವ ಅಗತ್ಯವಿದೆ. ಈ ಹಿನ್ನೆಲೆ ಪ್ರಾಯೋಗಿಕ ಅವಧಿಯಲ್ಲಿ ಕನಿಷ್ಠ 125 ಗಂಟೆಗಳ ಕಾಲ ಡ್ರೋನ್‌ ಹಾರಿಸಲು ಟಿಎಎಸ್ ಚಿಂತಿಸಿದೆ.

ಡ್ರೋನ್ ಮೂಲಕ ಮೊದಲ ವಿತರಣೆ?

ಡ್ರೋನ್ ಮೂಲಕ ಮೊದಲ ವಿತರಣೆ?

ಭಾರತವು ಡ್ರೋನ್ ಹಾರಾಟದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿ ವ್ಯಾಪಕ ಪ್ರದೇಶದಲ್ಲಿ ಸಾಗಿಸಲು ಅನುಕೂಲವಾಗುವಂತೆ ಷರತ್ತುಬದ್ಧ ವಿನಾಯಿತಿ ನೀಡಿದೆ. ಆಪರೇಟರ್‌ಗಳು ಅವುಗಳನ್ನು ವಿತರಣೆಯಂತಹ ಉದ್ದೇಶಗಳಿಗಾಗಿ ಬಳಸುವುದಕ್ಕೆ ಇದು ಉಪಯುಕ್ತವಾಗಲಿದೆ. ಭಾರತವು ಪ್ರಸ್ತುತ ಡ್ರೋನ್‌ಗಳನ್ನು ಅಥವಾ ಮಾನವರಹಿತ ವಿಮಾನ ವ್ಯವಸ್ಥೆಗಳನ್ನು (ಯುಎಎಸ್) ತಮ್ಮ ಆಪರೇಟರ್‌ಗಳ ದೃಷ್ಟಿಯಿಂದ ಗೋಚರಿಸುವ ರೇಖೆಯೆಡೆಗೆ ಮಾತ್ರ ಬಳಸಲು ಅನುಮತಿಸಿದೆ. ಮೇ ತಿಂಗಳಲ್ಲಿ, ಡ್ರೋನ್‌ಗಳ ಬಿಯಾಂಡ್ ವಿಷುಯಲ್ ಲೈನ್ ಆಫ್ ಸೈಟ್ (ಬಿವಿಎಲ್ಒಎಸ್) ಪ್ರಾಯೋಗಿಕ ಹಾರಾಟಗಳನ್ನು ನಡೆಸಲು ಸರ್ಕಾರವು ಯುಎಎಸ್ ನಿಯಮಗಳಿಗೆ ಅನುಸಾರವಾಗಿ 20 ಘಟಕಗಳಿಗೆ ಷರತ್ತುಬದ್ಧ ವಿನಾಯಿತಿ ನೀಡಿದೆ.

"ಇತರ ಎರಡು ಒಕ್ಕೂಟಗಳು ಬಿವಿಎಲ್ಓಎಸ್ ಪ್ರಯೋಗಗಳಿಗೆ ಅನುಮತಿಯನ್ನು ಹೊಂದಿವೆ, ಆದರೆ ನಮ್ಮದು ಮೊದಲ ಕಾನೂನು / ಅಧಿಕೃತ ವೈದ್ಯಕೀಯ ಡ್ರೋನ್ ವಿತರಣಾ ಪ್ರಯೋಗವಾಗಿದೆ. ಸುದೀರ್ಘ ಕಾತುರದ ನಂತರ ನಾವು ಈಗ ಬಿವಿಎಲ್ಓಎಸ್ ಪ್ರಯೋಗ ಮಾನಿಟರಿಂಗ್ ಕಮಿಟಿಯಿಂದ (ಬಿಇಎಂಸಿ) ಅಧಿಕೃತವಾಗಿ ಡ್ರೋನ್‌ ಪ್ರಯೋಗಕ್ಕೆ ಮುಂದಾಗಿದ್ದೇವೆ. ಶೀಘ್ರದಲ್ಲೇ ಭಾರತದಲ್ಲಿ ವಾಣಿಜ್ಯ ಡ್ರೋನ್ ವಿತರಣೆಯನ್ನು ಸದುಪಯೋಗಪಡಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ," ಎಂದು ಟಿಎಎಸ್ ಸಿಇಒ ನಾಗೇಂದ್ರನ್ ಕಂದಸಾಮಿ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.

ಲಸಿಕೆ ತಲುಪಿಸುವ ಪ್ರಯೋಗ

ಲಸಿಕೆ ತಲುಪಿಸುವ ಪ್ರಯೋಗ

ಈ ಕೊರೊನಾ ಸಂದರ್ಭದಲ್ಲಿ ಕೋವಿಡ್ -19 ಲಸಿಕೆಯನ್ನು ದೂರದ ಪ್ರದೇಶಗಳಿಗೆ ಮತ್ತು ತಲುಪಲು ಕಷ್ಟವಾದ ಪ್ರದೇಶಗಳಿಗೆ ತಲುಪಿಸಲು ಡ್ರೋನ್‌ಗಳ ಬಳಕೆಯನ್ನು ಸರ್ಕಾರ ಈಗಾಗಲೇ ಚಿಂತಿಸುತ್ತಿದೆ.
ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಧ್ಯಯನದ ನಂತರ ಕೋವಿಡ್‌ -19 ಲಸಿಕೆಗಳನ್ನು ಮಾನವರಹಿತ ವೈಮಾನಿಕ ವಾಹನಗಳಿಂದ (ಯುಎವಿ) ಕಠಿಣ ಭೂಪ್ರದೇಶ ಹೊಂದಿರುವ ದೇಶದ ಪ್ರದೇಶಗಳಿಗೆ ತಲುಪಿಸುವ ಕೇಂದ್ರದ ಯೋಜನೆಯನ್ನು ತರಲಾಗಿದೆ ಎನ್ನಲಾಗಿದೆ

ತೆಲಂಗಾಣ ಸರ್ಕಾರದಿಂದ ಪ್ರಯೋಗ

ತೆಲಂಗಾಣ ಸರ್ಕಾರದಿಂದ ಪ್ರಯೋಗ

ಡ್ರೋನ್‌ಗಳ ಮೂಲಕ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡುವ ಯೋಜನೆಯನ್ನು ತೆಲಂಗಾಣ ಸರ್ಕಾರ ಇತ್ತೀಚೆಗೆ ಪ್ರಾರಂಭಿಸಿದೆ. ತೆಲಂಗಾಣ ಸರ್ಕಾರವು ಲಸಿಕೆಗಳನ್ನು ತಲುಪಿಸಲು ಪ್ರಾಯೋಗಿಕ ಬಿವಿಎಲ್ಒಎಸ್ ಡ್ರೋನ್ ಹಾರಾಟಗಳನ್ನು ನಡೆಸುವ ಒಂದು ಷರತ್ತು ಎಂದರೆ ಡ್ರೋನ್ ಕಾರ್ಯಾಚರಣೆಗೆ ಅನುಮತಿಯು ನೆಲಮಟ್ಟಕ್ಕಿಂತ (ಎಜಿಎಲ್) ಗರಿಷ್ಠ 400 ಅಡಿ ಎತ್ತರವಾಗಿರುವುದು. ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್ ಕಾರ್ಯಾಚರಣೆಯ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ವಿಮಾನಯಾನ ಸಚಿವಾಲಯವು ತೆಲಂಗಾಣ ರಾಜ್ಯ ಸರ್ಕಾರಕ್ಕೆ ಬಿವಿಎಲ್ಓಎಸ್ ನಿರ್ಬಂಧಗಳಲ್ಲಿ ವಿನಾಯಿತಿ ನೀಡಿದೆ.

English summary
From Vaccine Delivery to Medical Supplies, India's First Drone Trial Begins Today: Explained in Kannada. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X