ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ವಿತರಣೆ ಬಗ್ಗೆ ಕೇಂದ್ರದ ದಿವ್ಯನಿರ್ಲಕ್ಷ್ಯ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮೇ 24: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಕಂಡುಕೊಂಡಿರುವ ಏಕೈಕೆ ಮಾರ್ಗವೇ ಲಸಿಕೆ ವಿತರಣೆ. ಕೇಂದ್ರ ಸರ್ಕಾರವು ಸಂದಿಗ್ಧ ಸ್ಥಿತಿಯಲ್ಲಿ ಲಸಿಕೆ ವಿತರಣೆ ಬಗ್ಗೆ ಅಗತ್ಯ ಲಕ್ಷ್ಯ ವಹಿಸುವಂತೆ ಸಂಸದ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ದೇಶಾದ್ಯಂತ ಕೊವಿಡ್-19 ಲಸಿಕೆ ವಿತರಣೆ ವೇಗ ಕಳೆದುಕೊಳ್ಳುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಕರ್ನಾಟಕ, ಮಹಾರಾಷ್ಟ್ರ, ದೆಹಲಿಯಲ್ಲಿ ಕೊರತೆ ಸೃಷ್ಟಿಯಾಗಿರುವ ಹಿನ್ನೆಲೆ 18 ರಿಂದ 44 ವಯೋಮಾನದವರಿಗೆ ಲಸಿಕೆ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಜ್ಯವಾರು, ಜಿಲ್ಲಾವಾರು ಕೊರೊನಾವೈರಸ್ ಲಸಿಕೆ ವಿತರಣೆ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.

 Vaccination Is the key to controlling The Pandemic But Central Govt Doesn’t Seem To Care.

 ಕೊರೊನಾಗೆ 'ಸ್ಟೀಮ್' ರಾಮಬಾಣ: ವೈರಲ್ ಆದ ವೈದ್ಯರ ಹೇಳಿಕೆಯ ಸತ್ಯಾಸತ್ಯತೆ ಕೊರೊನಾಗೆ 'ಸ್ಟೀಮ್' ರಾಮಬಾಣ: ವೈರಲ್ ಆದ ವೈದ್ಯರ ಹೇಳಿಕೆಯ ಸತ್ಯಾಸತ್ಯತೆ

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 125 ದಿನಗಳಲ್ಲಿ 19,49,51,603 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಲಾಗಿದೆ. ಶನಿವಾರ ರಾತ್ರಿ 8 ಗಂಟೆ ವೇಳೆಗೆ 15,52,126 ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಈ ಪೈಕಿ 13,80,232 ಜನರಿಗೆ ಮೊದಲ ಡೋಸ್ ಹಾಗೂ 1,71,894 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಅದಾಗ್ಯೂ, ಲಸಿಕೆ ವಿತರಣೆ ಉತ್ಪಾದನೆ ಮತ್ತು ವಿತರಣೆ ನಡುವೆ ಮೇ ತಿಂಗಳಿನಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ. ಈ ಕುರಿತು ಸಂಸದ ರಾಹುಲ್ ಗಾಂಧಿ ಅಂಕಿ-ಅಂಶಗಳ ಸಹಿತ ಟ್ವೀಟ್ ಮಾಡಿದ್ದಾರೆ.

ಏಪ್ರಿಲ್ ತಿಂಗಳಿನಿಂದ ಲಸಿಕೆ ವಿತರಣೆಯಲ್ಲಿ ಇಳಿಮುಖ:

ಭಾರತದಲ್ಲಿ ಏಪ್ರಿಲ್ 1 ರಿಂದ 10ರವರೆಗೂ 35 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಯಿತು. ಏಪ್ರಿಲ್ 11 ರಿಂದ 20ರವರೆಗೆ 27 ಲಕ್ಷ ಜನರಿಗೆ ಲಸಿಕೆ ನೀಡಲಾಯಿತು. ಏಪ್ರಿಲ್ 20 ರಿಂದ 30ರವರೆಗೆ ಲಸಿಕೆ ವಿತರಣೆ ಸಂಖ್ಯೆಯು 25 ಲಕ್ಷಕ್ಕೆ ಇಳಿಕೆಯಾಯಿತು. ಮೇ 1 ರಿಂದ 11ರ ಅವಧಿಯಲ್ಲಿ ಕೊವಿಡ್-19 ಲಸಿಕೆ ಪಡೆದವರ ಸಂಖ್ಯೆ 17 ಲಕ್ಷಕ್ಕಿಂತ ಕಡಿಮೆಯಾಗಿತ್ತು. ಮೇ 11 ರಿಂದ 20ರವರೆಗೆ ಸುಮಾರು 18 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

English summary
Vaccination Is the key to controlling The Pandemic But Central Govt Doesn’t Seem To Care; Rahul Gandhi Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X