ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ ಪಡೆಯಲು ಕೋವಿನ್, ಆರೋಗ್ಯ ಸೇತು ಮೂಲಕ ನೋಂದಣಿ

|
Google Oneindia Kannada News

ನವದೆಹಲಿ, ಏಪ್ರಿಲ್ 27; ದೇಶದಲ್ಲಿ ಮತ್ತೊಂದು ಸುತ್ತಿನ ಲಸಿಕಾ ಅಭಿಯಾನಕ್ಕೆ ತಯಾರಿ ಆರಂಭವಾಗಿದೆ. ಮೇ 1 ರಿಂದ 18 ರಿಂದ 45 ವರ್ಷದೊಳಗಿನ ಜನರು ಲಸಿಕೆಯನ್ನು ಪಡೆಯಬಹುದಾಗಿದೆ.

ಲಸಿಕೆಯನ್ನು ಪಡೆಯುವವರು ಕೋವಿನ್ ಅಪ್ಲಿಕೇಶನ್ ಮೂಲಕ ಏಪ್ರಿಲ್ 28ರಿಂದ ನೋಂದಣಿ ಮಾಡಿಸಬಹುದು. ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕವೂ ಜನರು ನೋಂದಣಿ ಮಾಡಲು ಅವಕಾಶವನ್ನು ನೀಡಲಾಗಿದೆ.

ಲಸಿಕೆ ಪಡೆಯಲು ಬಂದವರನ್ನು ಕೈ ಮುಗಿದು ಸ್ವಾಗತಿಸಿದ ಡಿಸಿ! ಲಸಿಕೆ ಪಡೆಯಲು ಬಂದವರನ್ನು ಕೈ ಮುಗಿದು ಸ್ವಾಗತಿಸಿದ ಡಿಸಿ!

ಅಪ್ಲಿಕೇಶನ್ ಮೂಲಕ ಲಾಗಿನ್ ಆಗುವ ವ್ಯಕ್ತಿ ತಾನು ಸೇರಿದಂತೆ ಕನಿಷ್ಠ ಮೂವರು ಕುಟುಂಬ ಸದಸ್ಯರ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ. ನೋಂದಣಿ ಬಳಿಕ ಹತ್ತಿರದ ಸರ್ಕಾರಿ, ಖಾಸಗಿ ಲಸಿಕಾ ಕೇಂದ್ರದ ಮಾಹಿತಿ ಜನರಿಗೆ ಸಿಗಲಿದೆ.

ಭಾರತದಲ್ಲಿ 14.50 ಕೋಟಿಗೂ ಅಧಿಕ ಜನರಿಗೆ ಕೊರೊನಾ ಲಸಿಕೆ ಭಾರತದಲ್ಲಿ 14.50 ಕೋಟಿಗೂ ಅಧಿಕ ಜನರಿಗೆ ಕೊರೊನಾ ಲಸಿಕೆ

Vaccination Drive Cowin Opens For Registration From April 28

ಜನರು ನೋಂದಣಿ ಮಾಡಿಸುವ ಮೂಲಕ ಲಸಿಕೆ ಪಡೆಯಲು ದಿನಾಂಕ, ಸಮಯವನ್ನು ನಿಗದಿ ಮಾಡಬಹುದಾಗಿದೆ. ನಿಗದಿ ಮಾಡಿದ ಸಮಯವನ್ನು ರದ್ದುಗೊಳಿಸಲು ಸಹ ಇಲ್ಲಿ ಅವಕಾಶವನ್ನು ನೀಡಲಾಗಿದೆ.

ಇಂಜೆಕ್ಷನ್ ಬದಲು ಮೂಗಿನಲ್ಲಿ 2 ಹನಿ ಕೊರೊನಾ ಲಸಿಕೆ ಪ್ರಯೋಗ ಇಂಜೆಕ್ಷನ್ ಬದಲು ಮೂಗಿನಲ್ಲಿ 2 ಹನಿ ಕೊರೊನಾ ಲಸಿಕೆ ಪ್ರಯೋಗ

ಕೋವಿನ್ ಅಪ್ಲಿಕೇಶನ್‌ನ ಮುಖ್ಯಸ್ಥ ಆರ್. ಎಸ್. ಶರ್ಮಾ ಈ ಕುರಿತು ಮಾಹಿತಿ ನೀಡಿದ್ದಾರೆ. ಆನ್ ಲೈನ್ ಮೂಲಕ ನೋಂದಣಿ ಮಾಡುವುದರಿಂದ ಲಸಿಕಾ ಕೇಂದ್ರಗಳ ಬಳಿ ಸಾಮಾಜಿಕ ಅಂತರ ಕಾಪಾಡುವುದು, ಜನಜಂಗುಳಿ ತಡೆಯಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

"ಅಪ್ಲಿಕೇಶನ್ ಮೂಲಕ ನೋಂದಣಿ ಮಾಡುವುದು ಸರಳವಾಗಿದೆ. ಪ್ರತಿದಿನ 6 ರಿಂದ 7 ಮಿಲಿಯನ್ ಜನರು ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ" ಎಂದು ಆರ್. ಎಸ್. ಶರ್ಮಾ ತಿಳಿಸಿದ್ದಾರೆ.

ಕಳೆದ ಬಾರಿ ಪ್ರತಿದಿನ 5 ಮಿಲಿಯನ್ ಜನರು ನೋಂದಣಿ ಮಾಡಿದ್ದರು. ಈ ಬಾರಿ 18 ರಿಂದ 45 ವರ್ಷದೊಳಗಿನ ಜನರಿಗೆ ಲಸಿಕೆ ಪಡೆಯಲು ಅನುಮತಿ ನೀಡಿದ್ದರಿಂದ ಪ್ರತಿದಿನದ ನೋಂದಣಿ ಸಂಖ್ಯೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ನೀಡುವಾಗ ಮಾಹಿತಿ ನೀಡಿದರೆ ಸಾಕು ಅವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

English summary
India all set for vaccination drive for all adults from May 1. Registration will open for public from April 28 in Cowin App. The registrations will also be open on Aarogya Setu app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X